ಇಡೀ ಶ್ರೀಲಂಕಾವನ್ನು ಒಂದು ದಿನ ಕತ್ತಲೆಯಲ್ಲಿರಿಸಿದ ಕಲಿಯುಗದ ಹನುಮಂತ

|

Updated on: Feb 11, 2025 | 2:44 PM

ಮಂಗಗಳ ಚಟುವಟಿಕೆಯು ನಗು ತರಿಸುವುದಷ್ಟೇ ಅಲ್ಲದೆ ಕೆಲವೊಮ್ಮೆ ನಮ್ಮನ್ನು ಸಂಕಟಕ್ಕೆ ಸಿಲುಕಿಸಿಬಿಡುತ್ತವೆ. ಈ ಬಾರಿ ಒಂದು ಕೋತಿ ಇಡೀ ಶ್ರೀಲಂಕಾದಲ್ಲಿ ವಿದ್ಯುತ್ ಅಸ್ತವ್ಯಸ್ತತೆಯನ್ನುಂಟುಮಾಡಿತು. ಒಂದು ಕೋತಿಯ ಕೆಲಸದಿಂದ ಇಡೀ ಶ್ರೀಲಂಕಾ ಕತ್ತಲೆಯಲ್ಲಿ ಮುಳುಗಿತು. ಒಂದು ಕೋತಿ ಮುಖ್ಯ ಗ್ರಿಡ್‌ಗೆ ತಲುಪಿ ಅಲ್ಲಿನ ಟ್ರಾನ್ಸ್‌ಫಾರ್ಮರ್‌ನಲ್ಲಿ ಸ್ವಲ್ಪ ತೊಂದರೆ ಉಂಟುಮಾಡಿತು. ಇದರಿಂದಾಗಿ ಶ್ರೀಲಂಕಾದಾದ್ಯಂತ ಹೆಚ್ಚಿನ ಸ್ಥಳಗಳಲ್ಲಿ ವಿದ್ಯುತ್ ಕಡಿತಗೊಂಡಿತು. ವಿದ್ಯುತ್ ಕಡಿತವು ಹಲವು ಪ್ರದೇಶಗಳ ಮೇಲೆ ಪರಿಣಾಮ ಬೀರಿತು.

ಇಡೀ ಶ್ರೀಲಂಕಾವನ್ನು ಒಂದು ದಿನ ಕತ್ತಲೆಯಲ್ಲಿರಿಸಿದ ಕಲಿಯುಗದ ಹನುಮಂತ
ಕೋತಿ
Image Credit source: The daily beast
Follow us on

ರಾಮಾಯಣದಲ್ಲಿ ಹನುಮಂತ ಇಡೀ ರಾವಣನ ಲಂಕೆಯನ್ನು ಬೆಂಕಿಯಿಂದ ಧಗಧಗಿಸುವಂತೆ ಮಾಡಿದಂತೆ, ಈಗ ಕಲಿಯುಗದ ಹನುಮಂತ ಕೂಡ ಶ್ರೀಲಂಕಾವನ್ನು ಒಂದು ದಿನ ಕತ್ತಲೆಯಲ್ಲಿ ಇರಿಸಿತ್ತು. ಭಾನುವಾರ ಇಡೀ ಶ್ರೀಲಂಕದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಆದರೆ ಇದರ ಹಿಂದೆ ಒಂದು ವಿಚಿತ್ರ ಕಾರಣವಿತ್ತು. ಅದರ ಹಿಂದೆ ಕೋತಿಯ ಕೈವಾಡವಿತ್ತು.

ಶ್ರೀಲಂಕಾದ ವಿದ್ಯುತ್ ಗ್ರಿಡ್ ಉಪ ಕೇಂದ್ರಕ್ಕೆ ಕೋತಿ ಬೆಳಗ್ಗೆ 11.30ರ ಸುಮಾರಿಗೆ ನುಗ್ಗಿತ್ತು. ಆಗ ರಾಷ್ಟ್ರವ್ಯಾಪಿ ವಿದ್ಯುತ್ ವ್ಯತ್ಯಯನ್ನುಂಟು ಮಾಡಿತು. ಅದಾದ ಬಳಿಕ ಕೆಲವು ಗಂಟೆಗಳ ಕಾಲ ಕೋತಿ ಒಳಗೆ ಇದ್ದ ಕಾರಣ ವಿದ್ಯುತ್ ಸಂಪೂರ್ಣವಾಗಿ ಮರುಸ್ಥಾಪಿಸಲು ಸಾಧ್ಯವಾಗಲಿಲ್ಲ. ಈ ಘಟನೆ ಕೊಲಂಬೋದ ಉಪನಗರದಲ್ಲಿ ನಡೆದಿದೆ. ಶ್ರೀಲಂಕಾದಲ್ಲಿ ವಿದ್ಯುತ್ ಕಡಿತಕ್ಕೆ ಸರಿಯಾದ ಕಾರಣವನ್ನು ಸಿಇಬಿ ಬಹಿರಂಗಪಡಿಸಿಲ್ಲ.

ವಿದ್ಯುತ್ ಕಡಿತಗೊಂಡ ತಕ್ಷಣ, ಅನೇಕ ನಾಗರಿಕರು ಏನಾಗುತ್ತಿದೆ ಎಂದು ತಿಳಿಯಲು ಕರೆ ಮಾಡಿದ್ದರು. ಕೊಲಂಬೊ, ಗ್ಯಾಲೆ ಮತ್ತು ಇತರ ಹಲವು ಪ್ರದೇಶಗಳಲ್ಲಿ ವಿದ್ಯುತ್ ಇಲ್ಲ ಎಂದು ಜನರು ದೃಢಪಡಿಸಿದರು. ಹೆಚ್ಚಿನ ತಾಪಮಾನದ ಸಮಯದಲ್ಲಿ ಹಲವಾರು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳ್ಳುವ ಬಗ್ಗೆ ಅನೇಕ ಜನರು ದೂರಿದರು.

ಮತ್ತಷ್ಟು ಓದಿ: ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?

ಶ್ರೀಲಂಕಾದ ಹೆಚ್ಚಿನ ನಗರ ಕೇಂದ್ರಗಳಲ್ಲಿ ತಾಪಮಾನವು 30°C ಗಿಂತ ಹೆಚ್ಚಾಗಿದೆ. ಅಕ್ಯೂವೆದರ್ ಪ್ರಕಾರ, ರತ್ನಾಪುರದಂತಹ ಕೆಲವು ಸ್ಥಳಗಳಲ್ಲಿ, ಹೆಚ್ಚಿನ ಆರ್ದ್ರತೆಯಿಂದಾಗಿ ತಾಪಮಾನವು ವಾಸ್ತವವಾಗಿ 36°C ವರೆಗೆ ಇತ್ತು.

ಕೇವಲ ಮನೆಗಳು ಮಾತ್ರವಲ್ಲ, ಹೋಟೆಲ್​, ಆಸ್ಪತ್ರೆ ಸೇರಿದಂತೆ ಎಲ್ಲಿಯೂ ಇರಲಿಲ್ಲ. ಆಗಸ್ಟ್ 2022 ರಲ್ಲಿ ದೇಶವು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಇಂಧನ ಮತ್ತು ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಗೆ ಕಾರಣವಾದ ನಂತರ ಮೊದಲ ಬಾರಿಗೆ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ