AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ

ಇರಾನ್ ಕತಾರ್‌ನ ನೈಸರ್ಗಿಕ ಅನಿಲ ಘಟಕದ ಮೇಲೆ ನಡೆಸಿದ ದಾಳಿಯು ವಿಶ್ವಕ್ಕೆ, ವಿಶೇಷವಾಗಿ ಭಾರತಕ್ಕೆ, ಅನಿಲ ಪೂರೈಕೆ ಸಮಸ್ಯೆಗಳನ್ನು ತಂದಿದೆ. ಕತಾರ್ ಭಾರತದ ಶೇ.20ರಷ್ಟು ಎಲ್‌ಎನ್‌ಜಿ ಆಮದನ್ನು ಪೂರೈಸುತ್ತದೆ. ಈ ದಾಳಿಯಿಂದ ಮುಂದಿನ 3-5 ವರ್ಷಗಳ ಕಾಲ ಭಾರತಕ್ಕೆ ಅನಿಲ ಕೊರತೆ ಕಾಡಬಹುದು. ಜಾಗತಿಕ ಮಟ್ಟದಲ್ಲಿಯೂ ಇಂಧನ ಭದ್ರತೆಗೆ ದೊಡ್ಡ ಸವಾಲು ಸೃಷ್ಟಿಸಿದೆ.

ಕತಾರ್ ಅನಿಲ ಘಟಕದ ಮೇಲಿನ ಇರಾನ್ ಘಾತಕ ದಾಳಿಯಿಂದ ಭಾರತಕ್ಕೆ ಇನ್ನೆಷ್ಟು ವರ್ಷ ಕಾಡಲಿದೆ ಅನಿಲ ಸಮಸ್ಯೆ
ಎಲ್​​ಎನ್​ಜಿImage Credit source: AFP
ನಯನಾ ರಾಜೀವ್
|

Updated on:Mar 20, 2026 | 9:19 AM

Share

ದೋಹಾ,ಮಾರ್ಚ್ 20: ಕತಾರ್​​ನ ನೈಸರ್ಗಿಕ ಅನಿಲ ಘಟಕದ ಮೇಲೆ ಇರಾನ್(Iran) ನಡೆಸಿದ ಘಾತಕ ದಾಳಿಯಿಂದ ವಿಶ್ವದ ಐದು ಬಲಿಷ್ಠ ರಾಷ್ಟ್ರಗಳಿಗೆ ಮುಂದನ ಐದು ವರ್ಷಗಳವರೆಗೆ ಅನಿಲ ಪೂರೈಕೆಯಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ. ಈಗ ಬರುತ್ತಿರುವ ವರದಿಗಳ ಪ್ರಕಾರ, ಕತಾರ್​ನಿಂದ ಭಾರತಕ್ಕೆ ರವಾನೆಯಾಗುತ್ತಿರುವ ಅನಿಲಕ್ಕೂ ಸಮಸ್ಯೆಯಾಗುವ ಸಾಧ್ಯತೆ ಇದೆ. ವಿಶ್ವದ ಶೇ.17ರಷ್ಟು ನೈಸಗರ್ಗಕ ಅನಿಲ ಪೂರೈಕೆಯು ಕತಾರ್​​ನ ಇದೊಂದೇ ಘಟಕದಿಂದ ಆಗುತ್ತದೆ.

ವಿಶ್ವದ ಅತ್ಯಂತ ದೊಡ್ಡ ನೈಸಿರ್ಗಿಕ ಅನಿಲ ಘಟಕ ಇದಾಗಿದೆ, ಇರಾನ್ ದಾಳಿಯಿಂದ ಕತಾರ್​ಗೆ ವಾರ್ಷಿಕ ಸುಮಾರು 20 ಬಿಲಿಯನ್ ಡಾಲರ್​​ನಷ್ಟು ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಹಾಗೆಯೇ ವಾರ್ಷಿಕವಾಗಿ ಸುಮಾರು 12.8 ಮಿಲಿಯನ್ ಟನ್ ಎಲ್​ಎನ್​ಜಿ ಪೂರೈಕೆಯಲ್ಲಿ ಮುಂದಿನ ಮೂರರಿಂದ ಐದು ವರ್ಷಗಳವರೆಗೆ ವ್ಯತ್ಯಯಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನು ಕತಾರ್​ನ ಇಂಧನ ಇಲಾಖೆಯೇ ಖಾತ್ರಿಪಡಿಸಿದೆ, ಇದರಿಂದ ಭಾರತ, ಚೀನಾ ಸೇರಿದಂತೆ ಕೆಲವು ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳು ಸಮಸ್ಯೆಗೆ ಈಡಾಗಬಹುದು. ಇರಾನ್​ನೊಂದಿಗೆ ಕತಾರ್ ಉತ್ತಮ ಸಂಬಂಧವನ್ನೇ ಹೊಂದಿತ್ತು. ಹೀಗಾಗಿ ಕನಸಲ್ಲಿಯೂ ಕತಾರ್​ನ ಅಂತಹ ಪ್ರಮುಖ ಘಟಕಗಳ ಮೇಲೆ ಇರಾನ್ ದಾಳಿ ಮಾಡಲಿದೆ ಎಂದು ಅಲ್ಲಿನ ಆಡಳಿತ ವ್ಯವಸ್ಥೆ ಅಂದಾಜು ಮಾಡಿರಲಿಲ್ಲ. ಹೀಗಾಗಿ ಮುಸ್ಲಿಂ ರಾಷ್ಟ್ರವೊಂದು ಈ ರೀತಿ ದಾಳಿ ಮಾಡಿದೆ ಎಂದು ಕತಾರ್ ಆಕ್ರೋಶಗೊಂಡಿದೆ. ಆದರೆ ಈ ಕೃತ್ಯವು ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ದುಃಸ್ವಪ್ನವಾಗಿ ಕಾಡಿದೆ.

ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆ ಮಾಡುತ್ತಿದ್ದ ಘಟಕದ ಎರಡು ಟ್ರೇನ್​ಗಳ ಮೇಲೆ ಇರಾನ್ ದಾಳಿ ಮಾಡಿದೆ. ಇದರಿಂದ ಈ ದೇಶಗಳೊಂದಿಗೆ ದೀರ್ಘಾವಧಿಗೆ ಮಾಡಿಕೊಂಡಿದ್ದ ಅನಿಲ ಪೂರೈಕೆ ಒಪ್ಪಂದಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಎಲ್​ಎನ್​ಜಿ ಟ್ರೇನ್ ಎಸ್​4 ಮೇಲೆ ದಾಳಿಯು ಹಾನಿ ಮಾಡಿರುವ ಪರಿಣಾಮದಿಂದ ಇಟಲಿ ಹಾಗೂ ಬೆಲ್ಜಿಯಂಗೆ ಆಗುವ ಅನಿಲ ಪೂರೈಕೆಗಳು ಭಾಹಶಃ ಸ್ಥಗಿತಗೊಂಡಿದೆ.

ಮತ್ತಷ್ಟು ಓದಿ: ಅಮೆರಿಕದ ಎಫ್-35 ಫೈಟರ್ ಜೆಟ್ ಮೇಲೆ ಇರಾನ್ ದಾಳಿ; ಇಲ್ಲಿದೆ ವಿಡಿಯೋ

ಇದು ಸರಿಯಾಗಲು ವರ್ಷಗಳೇ ಬೇಕಾಗಬಹುದು. ಎಸ್​6 ಟ್ರೇನ್​ನಿಂದ ದಕ್ಷಿಣ ಕೊರಿಯಾ ಹಾಗೂ ಚೀನಾಕ್ಕೆ ಅನಿಲ ಪೂರೈಕೆಯಾಗುತ್ತಿತ್ತು. ಒಂದೆಡೆ ಈ ದಾಳಿಯಿಂದ ವಿಶ್ವದ ಇತರೆ ರಾಷ್ಟ್ರಗಳಗೆ ಸಮಸ್ಯೆಯಾಗುವುದರ ಜತೆಗೆ ಕತಾರ್​ನ್ನು 10ರಿಂದ 20 ವರ್ಷಗಳ ಹಿಂದಕ್ಕೆ ಕೊಂಡೊಯ್ದಿದೆ ಎಂದು ಕತಾರ್​​ನ ಇಂಧನ ಸಚಿವ ಅಲ್ ಕಾಬಿ ಹೇಳಿದ್ದಾರೆ. ಇರಾನ್ ದಾಳಿಯಿಂದ ಹಾನಿಯಾಗಿರುವ ಘಟಕದ ಪುನರ್​ನಿರ್ಮಾಣಕ್ಕೆ 26 ಬಿಲಿಯನ್ ಡಾಲರ್ ಬೇಕಾಗಬಹುದು ಎಂದು ಕತಾರ್ ಹೇಳಿದೆ.

ಈ ದಾಳಿಯಿಂದ ಕತಾರ್​ನ ಒಟ್ಟಾರೆ ರಫ್ತಿನಲ್ಲಿ ಶೇ.24ರಷ್ಟು ಕುಸಿತವಾಗಿದೆ. ಘಟಕದ ಮೇಲಿನ ಹಾನಿಯಿಂದ ದೀರ್ಘಾವಧಿಯಲ್ಲಿ ಭಾರತದ ಮೇಲೆ ಪ್ರತಿಕೂಲ ಪರಿಣಾಮವಾಗದಿದ್ದರೂ ಅಲ್ಪಾವಧಿಯಲ್ಲಿ ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಏಕೆಂದರೆ ಭಾರತದ ಒಟ್ಟಾರೆ ಎಲ್​ಎನ್​ಜಿ ಆಮದಿನಲ್ಲಿ ಕತಾರ್​ನ ಭಾಗವು ಶೇ.20ರಷ್ಟಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:18 am, Fri, 20 March 26

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಗಡಿಪಾರಾಗಿದ್ದ ರೌಡಿಯನ್ನುಮದುವೆ ಮಂಟಪದಿಂದಲೇ ಎಳೆದೊಯ್ದ ಪೊಲೀಸರು!
ಗಡಿಪಾರಾಗಿದ್ದ ರೌಡಿಯನ್ನುಮದುವೆ ಮಂಟಪದಿಂದಲೇ ಎಳೆದೊಯ್ದ ಪೊಲೀಸರು!
ರಕ್ಷಿತಾ ಶೆಟ್ಟಿ ಶ್ವಾನ ಪ್ರೇಮ; ಕೋಳಿ ಬೇಯಿಸಿಕೊಟ್ಟ ಬಿಗ್ ಬಾಸ್ ರನ್ನರ್ ಅಪ್
ರಕ್ಷಿತಾ ಶೆಟ್ಟಿ ಶ್ವಾನ ಪ್ರೇಮ; ಕೋಳಿ ಬೇಯಿಸಿಕೊಟ್ಟ ಬಿಗ್ ಬಾಸ್ ರನ್ನರ್ ಅಪ್
ಪಿಡಿಒಗೆ ಫೋನ್​​ ಕರೆಯಲ್ಲೇ ಕ್ಲಾಸ್​​ ತೆಗೆದುಕೊಂಡ ಸಂಸದ ಸುನೀಲ್ ಬೋಸ್
ಪಿಡಿಒಗೆ ಫೋನ್​​ ಕರೆಯಲ್ಲೇ ಕ್ಲಾಸ್​​ ತೆಗೆದುಕೊಂಡ ಸಂಸದ ಸುನೀಲ್ ಬೋಸ್
ಗುರು ಸಂಚಾರ; ಜೂ.2ರಿಂದ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಗೊತ್ತಾ?
ಗುರು ಸಂಚಾರ; ಜೂ.2ರಿಂದ ವೃಷಭ ರಾಶಿಯ ಭವಿಷ್ಯ ಹೇಗಿರಲಿದೆ ಗೊತ್ತಾ?
ಮೆಡಿಕಲ್ ಬಂದ್ ಇದ್ರೂ ಜನರಿಗಿಲ್ಲ ತೊಂದರೆ!
ಮೆಡಿಕಲ್ ಬಂದ್ ಇದ್ರೂ ಜನರಿಗಿಲ್ಲ ತೊಂದರೆ!
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಅಂಬಾನಿ ಫ್ಯಾಮಿಲಿ ಭೇಟಿ!
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಅಂಬಾನಿ ಫ್ಯಾಮಿಲಿ ಭೇಟಿ!
ಅನಿಲ್ ಕಪೂರ್-ಶೋಭಿತಾ ನೋಡಿ ನೈಸ್ ಜೋಡಿ ಎಂದ ಫ್ಯಾನ್ಸ್; ನಟಿ ರಿಯಾಕ್ಷನ್ ಏನು
ಅನಿಲ್ ಕಪೂರ್-ಶೋಭಿತಾ ನೋಡಿ ನೈಸ್ ಜೋಡಿ ಎಂದ ಫ್ಯಾನ್ಸ್; ನಟಿ ರಿಯಾಕ್ಷನ್ ಏನು