ಆಸ್ಟ್ರೇಲಿಯಾದ ನ್ಯೂ ಸೌತ್​ವೇಲ್ಸ್​ನಲ್ಲಿ ಕಾಡ್ಗಿಚ್ಚು

|

Updated on: Dec 18, 2019 | 7:36 AM

ಆಸ್ಟ್ರೇಲಿಯಾದ ನ್ಯೂ ಸೌತ್​ವೇಲ್ಸ್​ನಲ್ಲಿ ಹೊತ್ತಿರುವ ಕಾಡ್ಗಿಚ್ಚು ಮತ್ತಷ್ಟು ಪ್ರದೇಶಗಳಿಗೆ ಹಬ್ಬಿದೆ. ಬೆಂಕಿ ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಸರ್ಕಾರ ಹರಸಾಹಸಪಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೂರಾರು ಜನರನ್ನ ರಕ್ಷಿಸಿರುವ ಅಗ್ನಿಶಾಮಕ ಸಿಬ್ಬಂದಿ, ಸೂಕ್ಷ್ಮ ಪ್ರದೇಶದಲ್ಲಿರುವ ಜನರಿಗೆ ಊರು ತೊರೆಯುವಂತೆ ಸೂಚನೆ ನೀಡಿದ್ದಾರೆ. ಟ್ರಂಪ್ ಅಧ್ಯಕ್ಷ ಪಟ್ಟಕ್ಕೆ ಕುತ್ತು! ಅಮೆರಿಕ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೀತಿದೆ. ಅಧಿಕಾರ ದುರುಪಯೋಗ ಮತ್ತು ಶಾಸಕಾಂಗ ಸಭೆಗೆ ತಡೆಯೊಡ್ಡಿರುವ ಆರೋಪದಡಿ ಟ್ರಂಪ್ ವಿರುದ್ಧ ಡೆಮಾಕ್ರಟಿಕ್‌ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದಾರೆ. ವಾಗ್ದಂಡನೆ ಪ್ರಕ್ರಿಯೆ ಮೇಲೆ ಇಂದು […]

ಆಸ್ಟ್ರೇಲಿಯಾದ ನ್ಯೂ ಸೌತ್​ವೇಲ್ಸ್​ನಲ್ಲಿ ಕಾಡ್ಗಿಚ್ಚು
Follow us on

ಆಸ್ಟ್ರೇಲಿಯಾದ ನ್ಯೂ ಸೌತ್​ವೇಲ್ಸ್​ನಲ್ಲಿ ಹೊತ್ತಿರುವ ಕಾಡ್ಗಿಚ್ಚು ಮತ್ತಷ್ಟು ಪ್ರದೇಶಗಳಿಗೆ ಹಬ್ಬಿದೆ. ಬೆಂಕಿ ನಿಯಂತ್ರಣಕ್ಕೆ ಆಸ್ಟ್ರೇಲಿಯಾ ಸರ್ಕಾರ ಹರಸಾಹಸಪಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನೂರಾರು ಜನರನ್ನ ರಕ್ಷಿಸಿರುವ ಅಗ್ನಿಶಾಮಕ ಸಿಬ್ಬಂದಿ, ಸೂಕ್ಷ್ಮ ಪ್ರದೇಶದಲ್ಲಿರುವ ಜನರಿಗೆ ಊರು ತೊರೆಯುವಂತೆ ಸೂಚನೆ ನೀಡಿದ್ದಾರೆ.

ಟ್ರಂಪ್ ಅಧ್ಯಕ್ಷ ಪಟ್ಟಕ್ಕೆ ಕುತ್ತು!
ಅಮೆರಿಕ ಅಧ್ಯಕ್ಷರ ವಿರುದ್ಧ ವಾಗ್ದಂಡನೆ ಪ್ರಕ್ರಿಯೆ ನಡೀತಿದೆ. ಅಧಿಕಾರ ದುರುಪಯೋಗ ಮತ್ತು ಶಾಸಕಾಂಗ ಸಭೆಗೆ ತಡೆಯೊಡ್ಡಿರುವ ಆರೋಪದಡಿ ಟ್ರಂಪ್ ವಿರುದ್ಧ ಡೆಮಾಕ್ರಟಿಕ್‌ ಸದಸ್ಯರು ವಾಗ್ದಂಡನೆ ನಿರ್ಣಯ ಮಂಡಿಸಿದ್ದಾರೆ. ವಾಗ್ದಂಡನೆ ಪ್ರಕ್ರಿಯೆ ಮೇಲೆ ಇಂದು ಅಮೆರಿಕದ ಹೌಸ್ ರೆಪ್ರೆಸೆಂಟೇಟಿವ್ ವೋಟಿಂಗ್ ನಡೆಸೋ ಸಾಧ್ಯತೆ ಇದೆ.

ಸಿಡ್ನಿಯಲ್ಲಿ ಉಸಿರಾಟ ನಿಷಿದ್ಧ!
ಮತ್ತೊಂದ್ಕಡೆ ಆಸ್ಟ್ರೇಲಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಸಿಡ್ನಿಯಲ್ಲಿ, ಕಾಡ್ಗಿಚ್ಚಿನ ಪ್ರಭಾವದಿಂದ ಜನರು ನರಳುವಂತಾಗಿದೆ. ಸಿಡ್ನಿ ಸಿಟಿ ಪೂರ್ತಿ ಹೊಗೆ ಆವರಿಸಿದ್ದು, ಜನರು ನಾನಾ ಕಾಯಿಲೆಗಳಿಂದ ನರಳುವಂತಾಗಿದೆ. ಈ ಹಿನ್ನೆಲೆಯಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಿಸಲಾಗಿದ್ದು, ಸಿಡ್ನಿ ಜನರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.