ನಾಸಾದ ಖಗೋಳಶಾಸ್ತ್ರಜ್ಞರು ಬಾಹ್ಯಾಕಾಶದಿಂದ ಬೃಹತ್ ಸ್ಫೋಟವನ್ನು ಪತ್ತೆ ಮಾಡಿದ್ದು ಇದು ಭೂಮಿಯಲ್ಲೂ ಅನುಭವಕ್ಕೆ ಬಂದಿದೆ ಎಂದು ನಾಸಾ (NASA) ಹೇಳಿದೆ. ಅಕ್ಟೋಬರ್ 9 ರಂದು, ಖಗೋಳಶಾಸ್ತ್ರಜ್ಞರು ಹೆಚ್ಚಿನ ಶಕ್ತಿಯ ವಿಕಿರಣದ ಅತ್ಯಂತ ತೀವ್ರವಾದ ಮತ್ತು ನಿರಂತರವಾದ ಸ್ಫೋಟ ಪತ್ತೆ ಮಾಡಿದ್ದು, ಅದು ಭೂಮಿಗೆ ಆಘಾತ ತರಂಗಗಳನ್ನು ಕಳುಹಿಸಿತು ಎಂದಿದ್ದಾರೆ.ನಾಸಾದ ಫೆರ್ಮಿ ಗಾಮಾ-ರೇ ಬಾಹ್ಯಾಕಾಶ ಟೆಲಿಸ್ಕೋಪ್, ನೀಲ್ ಗೆಹ್ರೆಲ್ಸ್ ಸ್ವಿಫ್ಟ್ ಅಬ್ಸರ್ವೇಟರಿ ಮತ್ತು ವಿಂಡ್ ಬಾಹ್ಯಾಕಾಶ ನೌಕೆಗಳು ಡಿಟೆಕ್ಟರ್‌ಗಳನ್ನು ಇವು ಹಾದು ಹೋಗಿವೆ.ಆರ್ಬಿಟಿಂಗ್ ಹೈ-ಎನರ್ಜಿ ಮಾನಿಟರ್ ಅಲರ್ಟ್ ನೆಟ್‌ವರ್ಕ್ (OHMAN) ಮೂಲಕ ಸ್ಫೋಟವನ್ನು ಪತ್ತೆಹಚ್ಚಲಾಗಿದೆ. OHMAN ಎಂಬುದು ನಾಸಾದ NICER, ಎಕ್ಸ್-ರೇ ದೂರದರ್ಶಕ ಮತ್ತು ಜಪಾನ್ ಮೂಲದ MAXI (ಆಲ್-ಸ್ಕೈ ಎಕ್ಸ್-ರೇ ಇಮೇಜ್ ಮಾನಿಟರ್) ನಡುವಿನ ಜಂಟಿ ಸಂಘವಾಗಿದೆ.
ಸ್ಫೋಟಕ್ಕೆ ಕಾರಣವೇನು?
ಇದುವರೆಗೆ ಪತ್ತೆಯಾದ ಅತ್ಯಂತ ಶಕ್ತಿಶಾಲಿ ಸ್ಫೋಟ ಇದಾಗಿದೆ. ಸ್ಫೋಟವನ್ನು ಈಗ GRB 221009A ಎಂದು ಕರೆಯಲಾಗುತ್ತಿದೆ. GRB ಅಂದರೆ ಗಾಮಾ-ರೇ ಬರ್ಸ್ಟ್‌ನ ಸಂಕ್ಷಿಪ್ತ ರೂಪ. GRB 221009A ವಿಶ್ವದಲ್ಲಿ ಇದುವರೆಗೆ ಪತ್ತೆಯಾದ ಅತ್ಯಂತ ಶಕ್ತಿಶಾಲಿ ಗಾಮಾ-ಕಿರಣ ಸ್ಫೋಟವಾಗಿದೆ. ನಾಸಾ ಪ್ರಕಾರ ಗಾಮಾ-ರೇ ಬರ್ಸ್ಟ್ (GRB) ವಿಶ್ವದಲ್ಲಿ ಸ್ಫೋಟಗಳ ಅತ್ಯಂತ ಶಕ್ತಿಶಾಲಿ ವರ್ಗವಾಗಿದೆ ಮತ್ತು ಈವರೆಗಿನ ಅತ್ಯಂತ ಪ್ರಕಾಶಮಾನವಾದ ಘಟನೆಗಳಲ್ಲಿ ಒಂದಾಗಿದೆ.
ಸ್ಫೋಟವು ಉತ್ತರಭಾಗದ ಆಕಾಶದಲ್ಲಿ ನಕ್ಷತ್ರಪುಂಜವಾದ ಸಗಿತ್ತಾ ದಿಕ್ಕಿನಿಂದ ಬಂದಿದೆ (ಧನು ರಾಶಿ ಅಲ್ಲ ). ಇದು ಸುಮಾರು 1.9 ಶತಕೋಟಿ ವರ್ಷಗಳ ಅವಧಿಯಲ್ಲಿ ಭೂಮಿಗೆ ಪ್ರಯಾಣಿಸಿತು. ಖಗೋಳಶಾಸ್ತ್ರಜ್ಞರು ಸೂಪರ್ನೋವಾದಿಂದ ಕಪ್ಪು ಕುಳಿ ಉಂಟಾದಾಗ ಸ್ಫೋಟ ಸಂಭವಿಸಿದೆ ಎಂದು ನಂಬುತ್ತಾರೆ.
ಬೆಳೆಯುತ್ತಿರುವ ಕಪ್ಪು ಕುಳಿಯು ಬೆಳಕಿನಷ್ಟು ವೇಗವಾಗಿ ಕಣಗಳ ಪ್ರಬಲ ಜೆಟ್‌ಗಳನ್ನು ಉತ್ಪಾದಿಸುತ್ತದೆ. ಆ ಜೆಟ್‌ಗಳು ಬಾಹ್ಯಾಕಾಶಕ್ಕೆ ಹಾರಿ ನಕ್ಷತ್ರದ ಮೂಲಕ ಚುಚ್ಚಿದಾಗ , ಅವು ಕ್ಷ-ಕಿರಣಗಳು ಮತ್ತು ಗಾಮಾ ಕಿರಣಗಳನ್ನು ಉತ್ಪತ್ತಿ ಮಾಡುತ್ತವೆ.
1.9 Billion years ago, Scientists think a massive star collapsed, forming a black hole at its core. On Sunday, Oct. 9th, the Gamma Ray Burst from this stellar birth washed over the Earth in one of the most luminous GRBs ever recorded.
Read more here: https://t.co/Lgip2Hqagq
— Stellaris (@StellarisGame) October 15, 2022
ಗಾಮಾ ಕಿರಣಗಳು ಅಂದರೆ?
ಯುರೇನಿಯಂ ಅಥವಾ ರೇಡಿಯಂನಂತಹ ವಿಕಿರಣಶೀಲ ಅಂಶಗಳಿಂದ ಹೊರಸೂಸಲ್ಪಟ್ಟ ಹೆಚ್ಚಿನ ಶಕ್ತಿಯ ವಿದ್ಯುತ್ಕಾಂತೀಯ ವಿಕಿರಣಗಳೇ ಗಾಮಾ ಕಿರಣಗಳು. ಸೌರ ಜ್ವಾಲೆಗಳ ಸಮಯದಲ್ಲಿ ಸೂರ್ಯನಂತಹ ಅತ್ಯಂತ ಬಿಸಿಯಾದ ಮತ್ತು ಶಕ್ತಿಯುತವಾದ ಕಾಸ್ಮಿಕ್ ಘಟಕಗಳಿಂದ ಅವು ನೈಸರ್ಗಿಕವಾಗಿ ಹೊರಸೂಸಲ್ಪಡುತ್ತವೆ.
ಅವು ವಿದ್ಯುತ್ಕಾಂತೀಯ ವರ್ಣಪಟಲದ ಭಾಗವಾಗಿದೆ ಮತ್ತು ಎಕ್ಸ್ ರೇಯನ್ನು ಹೋಲುತ್ತವೆ. ಆದಾಗ್ಯೂ, ಅವುಗಳ ನಡುವಿನ ವ್ಯತ್ಯಾಸವೆಂದರೆ ಅವು ಹೆಚ್ಚಿನ ಫ್ರೀಕ್ವೆನ್ಸಿ ಹೊಂದಿದ್ದು ಕಡಿಮೆ ತರಂಗಾಂತರ ಹೊಂದಿದೆ. ಗಾಮಾ ಕಿರಣಗಳನ್ನು ವೈದ್ಯಕೀಯ ಚಿತ್ರಣ, ಪರಮಾಣು ಭೌತಶಾಸ್ತ್ರ ಮತ್ತು ಇತರ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಸಿಂಟಿಲೇಟರ್ ಎಂಬ ವಿಶೇಷ ಕ್ಯಾಮೆರಾ ಬಳಸಿ ಅವುಗಳನ್ನು ಪತ್ತೆ ಮಾಡಬಹುದು.
GRB ಭೂಮಿಗೆ ತುಂಬಾನೇ ಹತ್ತಿರ ಆಗಿದ್ದು ಅದರ ಸಾಮೀಪ್ಯದಿಂದಾಗಿ, ಇದು 10 ಗಂಟೆಗಳ ಕಾಲ ನಡೆಯಿತು ಮತ್ತು ಗ್ರಹಕ್ಕೆ ಆಘಾತ ತರಂಗ ಕಳುಹಿಸಿತು. ಅದೃಷ್ಟವಶಾತ್, ಅತ್ಯಂತ ಶಕ್ತಿಯುತವಾದ ಗಾಮಾ-ಕಿರಣ ಸ್ಫೋಟವು ಸಾಕಷ್ಟು ದೂರದಲ್ಲಿದೆ ಆದ್ದರಿಂದ ಅದು ಗ್ರಹಕ್ಕೆ ಹಾನಿಯಾಗಲಿಲ್ಲ. ಸ್ಫೋಟವು ಗ್ರಹಕ್ಕೆ ಹತ್ತಿರದಲ್ಲಿ ಸಂಭವಿಸಿದ್ದರೆ, ಅದು ಭೂಮಿಯ ಮೇಲಿನ ಜೀವಕ್ಕೆ ಅಪಾಯಕಾರಿ ಎಂದು ಸಾಬೀತಾಗಿದೆ. ವಿಜ್ಞಾನಿಗಳ ಪ್ರಕಾರ, ಈ ರೀತಿಯ ಸ್ಫೋಟವು ಸೂರ್ಯನಿಂದ ಹೊರಹೊಮ್ಮುವ ಹಾನಿಕಾರಕ ಅಲ್ಟ್ರಾ ವೈಲೆಟ್ (UV) ಕಿರಣಗಳಿಂದ ಭೂಮಿಯನ್ನು ರಕ್ಷಿಸುವ ಓಝೋನ್ ಪದರಕ್ಕೆ ಹಾನಿಯುಂಟು ಮಾಡುತ್ತದೆ.
Published On - 7:54 pm, Tue, 18 October 22