Love Better: ಯುವಕರು ಬ್ರೇಕ್ಅಪ್‌ನಿಂದ ಚೇತರಿಸಿಕೊಳ್ಳಲು $4 ಮಿಲಿಯನ್ ಖರ್ಚು ಮಾಡಲು ಮುಂದಾದ ನ್ಯೂಜಿಲ್ಯಾಂಡ್ ಸರ್ಕಾರ
ನ್ಯೂಜಿಲೆಂಡ್ ಯುವಕರು 'ಬ್ರೇಕ್ಅಪ್' ಅನ್ನು ಉತ್ತಮವಾಗಿ ನಿಭಾಯಿಸಲು ಮತ್ತು ಮತ್ತು ಸಂಬಂಧಗಳ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ನಿರ್ಮಿಸಲು ಸಹಾಯ ಮಾಡುವ ನಿಟ್ಟಿನಲ್ಲಿ 'ಲವ್ ಬೆಟರ್' ಅಭಿಯಾನವನ್ನು ಪ್ರಾರಂಭಿಸಿದೆ.
ವೆಲ್ಲಿಂಗ್ಟನ್: ಯುವಕರಿಗೆ ಬ್ರೇಕ್ಅಪ್‌ನಿಂದ (Breakup) ಚೇತರಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ನ್ಯೂಜಿಲೆಂಡ್ (New Zealand) ಸರ್ಕಾರವು ‘ಲವ್ ಬೆಟರ್’ (Love Better) ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ‘ಬ್ರೇಕಪ್‌ಗಳು ನೋವುಂಟುಮಾಡುತ್ತವೆ ಎಂದು ನಮಗೆ ತಿಳಿದಿದೆ’ ಎಂದು ಬುಧವಾರ ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ವರದಿಯಾಗಿತ್ತು. ಇತ್ತೀಚಿನ ದಿನಗಳಲ್ಲಿ, ಯುವ ಪೀಳಿಗೆಗಳಲ್ಲಿ ‘ನೊಂದರೂ ಉತ್ತಮವಾಗಿ ಜೀವನ ನಡೆಸುವ’ ಮನೋಭಾವವನ್ನು ಬೆಳೆಸಲು ಕುಟುಂಬ ಹಾನಿ ತಡೆಗಟ್ಟುವಿಕೆಗೆ ಈ ಯೋಜನೆ ಸರ್ಕಾರದ ಉಪಾಯವಾಗಿದೆ. ಯುವಕರು ‘ಬ್ರೇಕ್ಅಪ್’ ಅನ್ನು ಉತ್ತಮವಾಗಿ ನಿಭಾಯಿಸಲು ಮತ್ತು ಮತ್ತು ಸಂಬಂಧಗಳ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ನಿರ್ಮಿಸಲು ಸಹಾಯ ಮಾಡುವ ನಿಟ್ಟಿನಲ್ಲಿ ‘ಲವ್ ಬೆಟರ್’ ಅಭಿಯಾನವನ್ನು ಪ್ರಾರಂಭಿಸಿದೆ.
“ಈ ಉಪಕ್ರಮವು ರಚನಾತ್ಮಕ ಅನುಭವಗಳ ಮೂಲಕ ಯುವಕರನ್ನು ಬೆಂಬಲಿಸುತ್ತದೆ, ಅವರು ಭವಿಷ್ಯದ ಸಂಬಂಧಗಳನ್ನು ಹೇಗೆ ಬೆಳೆಸಬೇಕು, ಇದು ಧನಾತ್ಮಕವಾಗಿ ಅವರ ಜೀವನದ ಮೇಲೆ ಪರಿಣಾಮ ಬೀರಬೇಕು ಎಂಬುದೇ ಈ ಯೋಜನೆಯ ಉದ್ದೇಶ” ಎಂದು ವರದಿಯಲ್ಲಿ ಹೇಳಲಾಗಿದೆ. ನ್ಯೂಜಿಲೆಂಡ್‌ನ ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಮೂರು ವರ್ಷಗಳ ಅವಧಿಯಲ್ಲಿ ಸುಮಾರು $4 ಮಿಲಿಯನ್‌ನ ಯೋಜಿತ ಬಜೆಟ್‌ನೊಂದಿಗೆ ಅಭಿಯಾನವನ್ನು ನಡೆಸುತ್ತದೆ.
“ಪ್ರೀತಿ ಮತ್ತು ನೋವಿನ ಆರಂಭಿಕ ಅನುಭವಗಳನ್ನು ಎದುರಿಸಲು ನಮಗೆ ಬೆಂಬಲ ಬೇಕು ಎಂದು 1,200 ಕ್ಕೂ ಹೆಚ್ಚು ಯುವಕರು ನಮಗೆ ಹೇಳಿದರು ಅದಲ್ಲದೆ ಬ್ರೇಕ್ಅಪ್ ನೋವನ್ನು ಸಾಮಾನ್ಯ ಸವಾಲಾಗಿ ಗುರುತಿಸಲಾಗಿದೆ. ನ್ಯೂಜಿಲೆಂಡ್ ಕುಟುಂಬ ಮತ್ತು ಲೈಂಗಿಕ ಹಿಂಸೆಯ ಅಂಕಿಅಂಶಗಳು ಅವಮಾನಕರ ಫಲಿತಾಂಶವನ್ನು ಹೊಂದಿದೆ ಇದನ್ನು ತಡೆಯಲು ನಮಗೆ ನವೀನ ವಿಧಾನಗಳ ಅಗತ್ಯವಿದೆ” ಎಂದು ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗದ ಸಹಾಯಕ ಸಚಿವ ಪ್ರಿಯಾಂಕಾ ರಾಧಾಕೃಷ್ಣನ್ ಹೇಳಿದ್ದಾರೆ.
ಇದನ್ನೂ ಓದಿ: ನೀರೊಳಗೆ ದಾಳಿ ನಡೆಸಬಲ್ಲ ಪರಮಾಣು ಡ್ರೋನ್ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ
ಸರ್ಕಾರಿ ಸಮೀಕ್ಷೆಯನ್ನು ಉಲ್ಲೇಖಿಸಿ, ಗಾರ್ಡಿಯನ್ ವರದಿಯು ‘ನ್ಯೂಜಿಲೆಂಡ್‌ನ ಜನಸಂಖ್ಯೆಯಲ್ಲಿ 87% 16-24 ವರ್ಷ ವಯಸ್ಸಿನವರು, ಸಂಬಂಧದಲ್ಲಿದ್ದವರು ಸಾಮಾನ್ಯ ಬ್ರೇಕ್ಅಪ್ಗಿಂತ ಹೆಚ್ಚಿನ ಹಾನಿಯನ್ನು ಅನುಭವಿಸಿದ್ದಾರೆ’ ಎಂದು ಹೇಳಿದೆ.
“ಯುವಕರು ನಮಗೆ ಪ್ರೀತಿ ಮತ್ತು ನೋವನ್ನು ನಿಭಾಯಿಸಲು ಬೆಂಬಲ ಬೇಕು – ಮತ್ತು ನಿರ್ದಿಷ್ಟವಾಗಿ ಹೇಗೆ ಬ್ರೇಕ್ಅಪ್ ಮಾಡುವುದು ಉತ್ತಮ ಎಂಬುದರ ಕುರಿತು ಮಾರ್ಗದರ್ಶನ ಬೇಕು ಎಂದು ಹೇಳಿದರು. ಇಂದು ನಾವು ಲವ್‌ಬೆಟರ್ ಎಂಬ ವಿಶ್ವ-ಪ್ರಮುಖ ಅಭಿಯಾನವನ್ನು ಪ್ರಾರಂಭಿಸಿದ್ದೇವೆ, ಇದು ನಮ್ಮ ಯುವಕರನ್ನು ಬೆಂಬಲಿಸಲು ಸಹಾಯ ಮಾಡುತ್ತದೆ. ಬ್ರೇಕ್-ಅಪ್‌ಗಳು ನೋವುಂಟುಮಾಡುತ್ತವೆ. ಅದು ಸಹಜ. ಆದರೆ ಯುವಕರು ತಮಗೆ ಅಥವಾ ಇತರರಿಗೆ ಹಾನಿಯಾಗದಂತೆ ಇದನ್ನು ಎದುರಿಸಲು ದಾರಿ ಇದೆ ಎಂದು ತಿಳಿದುಕೊಳ್ಳಲು ನಾವು ಬೆಂಬಲಿಸಲು ಬಯಸುತ್ತೇವೆ. ನಿಮ್ಮ ಹತ್ತಿರವಿರುವ ವೇದಿಕೆಗೆ ಲವ್‌ಬೆಟರ್ ಬರುವುದನ್ನು ಗಮನಿಸಿ!” ರಾಧಾಕೃಷ್ಣನ್ ಅವರ ಸಾಮಾಜಿಕ ಜಾಲತಾಣ ಒಂದರಲ್ಲಿ ಬರೆದಿದ್ದಾರೆ.
Published On - 12:34 pm, Sat, 25 March 23