ನೊಬೆಲ್ ಶಾಂತಿ ಪುರಸ್ಕಾರವನ್ನು ಡೊನಾಲ್ಡ್​ ಟ್ರಂಪ್​ಗೆ ಅರ್ಪಿಸಿದ ಮಚಾಡೊ

ವೆನೆಜುವೆಲಾದ ಪ್ರಮುಖ ವಿರೋಧ ಪಕ್ಷದ ನಾಯಕಿ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತೆ ಮಾರಿಯಾ ಕೊರಿನಾ ಮಚಾಡೊ 2025 ರ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಘೋಷಿಸಲಾಗಿದೆ. ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ನಂತರ ಮಾರಿಯಾ ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರು ಪ್ರಶಸ್ತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಅರ್ಪಿಸಿದ್ದಾರೆ. ಪ್ರಶಸ್ತಿ ಗೆದ್ದ ನಂತರ, ಮಾರಿಯಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅದನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸಿದರು. ಬಳಲುತ್ತಿರುವ ವೆನೆಜುವೆಲಾದ ಜನರೊಂದಿಗೆ ನಿಂತಿದ್ದಕ್ಕಾಗಿ ಟ್ರಂಪ್ ಅವರನ್ನು ಅವರು ಶ್ಲಾಘಿಸಿದರು.

ನೊಬೆಲ್ ಶಾಂತಿ ಪುರಸ್ಕಾರವನ್ನು ಡೊನಾಲ್ಡ್​ ಟ್ರಂಪ್​ಗೆ ಅರ್ಪಿಸಿದ ಮಚಾಡೊ
ಡೊನಾಲ್ಡ್​ ಟ್ರಂಪ್, ಮಚಾಡೊ

Updated on: Oct 11, 2025 | 10:15 AM

ವಾಷಿಂಗ್ಟನ್, ಅಕ್ಟೋಬರ್ 11: ಒಂದೊಡೆ ನೊಬೆಲ್ ಶಾಂತಿ ಪುರಸ್ಕಾರ(Nobel Peace Prize) ತನ್ನ ಕೈತಪ್ಪಿ ಹೋಗಿದ್ದಕ್ಕೆ ಡೊನಾಲ್ಡ್​ ಟ್ರಂಪ್ ಆಕ್ರೋಶಭರಿತರಾಗಿದ್ದಾರೆ. ಇನ್ನೊಂದೆಡೆ ನೊಬೆಲ್ ಪುರಸ್ಕೃತೆ ಆ ಪ್ರಶಸ್ತಿಯನ್ನು ಡೊನಾಲ್ಡ್​ ಟ್ರಂಪ್​ಗೆ ಅರ್ಪಿಸುತ್ತೇನೆ ಎಂದು ಹೇಳಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾಡೊ ಶುಕ್ರವಾರ ತಮ್ಮ ನೊಬೆಲ್ ಶಾಂತಿ ಪ್ರಶಸ್ತಿಯನ್ನು ವೆನೆಜುವೆಲಾದ ಜನರಿಗೆ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ತಮ್ಮ ದೇಶದ ಪ್ರಜಾಪ್ರಭುತ್ವ ಪರ ಚಳವಳಿಗೆ ನೀಡಿದ ಬೆಂಬಲಕ್ಕಾಗಿ ಸಮರ್ಪಿಸುತ್ತೇನೆ ಎಂದರು.

ಪ್ರಶಸ್ತಿ ಗೆದ್ದ ನಂತರ, ಮಾರಿಯಾ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅದನ್ನು ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸಿದರು.  ವೆನೆಜುವೆಲಾದ ಜನರೊಂದಿಗೆ ನಿಂತಿದ್ದಕ್ಕಾಗಿ ಟ್ರಂಪ್ ಅವರನ್ನು ಶ್ಲಾಘಿಸಿದರು. ವೆನೆಜುವೆಲಾದ ಹೋರಾಟವನ್ನು ಗುರುತಿಸಲಾಗಿದೆ. ಇದು ಸ್ವಾತಂತ್ರ್ಯದ ಗುರಿಯನ್ನು ಸಾಧಿಸಲು ನಮಗೆ ಸಹಾಯ ಮಾಡುತ್ತದೆ. ನಾವು ವಿಜಯದ ಅಂಚಿನಲ್ಲಿದ್ದೇವೆ ಮತ್ತು ಇಂದು ಅಧ್ಯಕ್ಷ ಟ್ರಂಪ್, ಅಮೆರಿಕದ ಜನರು, ಲ್ಯಾಟಿನ್ ಅಮೆರಿಕದ ಜನರು ಮತ್ತು ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ  ವಿಶ್ವಾಸ ಹೆಚ್ಚಾಗಿದೆ.

ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸುವಲ್ಲಿ ಅವರು ನಮ್ಮ ಪ್ರಮುಖ ಮಿತ್ರರಾಗಿದ್ದಾರೆ. ನಾನು ಈ ಪ್ರಶಸ್ತಿಯನ್ನು ವೆನೆಜುವೆಲಾದ ಜನರಿಗೆ ಮತ್ತು ಈ ಪ್ರಯತ್ನದಲ್ಲಿ ನಮಗೆ ಬೆಂಬಲ ನೀಡಿದ ಅಧ್ಯಕ್ಷ ಟ್ರಂಪ್‌ಗೆ ಅರ್ಪಿಸುತ್ತೇನೆ ಎಂದು ಮಾರಿಯಾ ಹೇಳಿದರು.

ಮತ್ತಷ್ಟು ಓದಿ: Donald Trump: 8 ಯುದ್ಧ ನಿಲ್ಲಿಸಿದರೂ ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಕೈ ತಪ್ಪಿದ್ದೇಕೆ?; ಇಲ್ಲಿವೆ 4 ಕಾರಣ

ನಾರ್ವೇಜಿಯನ್ ನೊಬೆಲ್ ಸಂಸ್ಥೆಯ ನಿರ್ದೇಶಕ ಕ್ರಿಶ್ಚಿಯನ್ ಬರ್ಗ್ ಅವರು ಪ್ರಶಸ್ತಿ ಘೋಷಣೆಗೂ ಮುನ್ನ ಮಾರಿಯಾ ಅವರಿಗೆ ವೈಯಕ್ತಿಕವಾಗಿ ಕರೆ ಮಾಡಿ ಅವರ ಗೆಲುವಿನ ಬಗ್ಗೆ ತಿಳಿಸಿದ್ದರು. ಇದರ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಳ್ಳಲಾಗಿದೆ.

ಕ್ರಿಶ್ಚಿಯನ್ ಸ್ವತಃ ಮಾರಿಯಾಗೆ ಕರೆ ಮಾಡಿ ಈ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ಹಾಗೂ ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಹೇಳಿದಾಗ ತನಗೆ ನಂಬಲಾಗಲಿಲ್ಲ ಎಂದರು. ನಾನು ವೆನೆಜುವೆಲಾದ ಜನರ ಪರವಾಗಿ ಕೃತಜ್ಞನಾಗಿದ್ದೇನೆ. ಇದು ಖಂಡಿತವಾಗಿಯೂ ನಮ್ಮ ಜನರು ಪಡೆಯಬಹುದಾದ ಅತ್ಯಂತ ದೊಡ್ಡ ಗೌರವವಾಗಿದೆ, ಅವರು ನಿಜವಾಗಿಯೂ ಇದಕ್ಕೆ ಅರ್ಹರು ಎಂದು ಅವರು ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ