ಒಕ್ಲಹೋಮ: ಯಾರೂ ಊಹಿಸಲಾಗದ, ನಂಬಲು ಅಸಾಧ್ಯವಾದ ಘಟನೆಯೊಂದು ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ. ಈ ಸುದ್ದಿ ತಿಳಿದ್ರೆ ನರ ಮನುಷ್ಯ ಇಂತಹ ಆಸೆಗಳನ್ನೂ ಹೊಂದಿದ್ದಾನೆಯೇ? ಎಷ್ಟು ನೀಚನೀತ ಎಂದು ಮನುಷ್ಯ ಜಾತಿ ಮೇಲೆಯೇ ಅಸಹ್ಯ ಮೂಡುತ್ತದೆ.
ಒಕ್ಲಹೋಮದಲ್ಲಿ 28 ವರ್ಷದ ಯುವಕನೊಬ್ಬ ಅಸ್ತವ್ಯಸ್ತನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗುಪ್ತಾಂಗದಲ್ಲಿ ರಕ್ತ ಸುರಿತಿತ್ತು. ಆತನಿಗೆ ಈ ಪರಿಸ್ಥಿತಿ ಬರಲು ಕಾರಣ ಏನು ಅನ್ನೋ ಪ್ರಶ್ನೆಗೆ ಅವನು ಬಿಚ್ಚಿಟ್ಟಿದ್ದು ಭಯಾನಕ ಕಥೆ. ಅದು ಯಾರು ಊಹಿಸಲಾಗದ ಸತ್ಯ ಕಥೆ.
53 ರ ವಯಸ್ಸಿನ ಬಾಬ್ ಲೀ ಅಲೆನ್ ಮತ್ತು 42 ವರ್ಷದ ಥಾಮಸ್ ಗೇಟ್ಸ್ ಎಂಬ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆಸ್ಪತ್ರೆಗೆ ದಾಖಲಾದ ಯುವಕ ಈ ಇಬ್ಬರ ಬಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿದ್ದ. ಈ ವೇಳೆ ಈ ಇಬ್ಬರು ಆ ಯುವಕನಿಗೆ ನೋವು ನಿಯಂತ್ರಿಸೂ ಮದ್ದು ಚುಚ್ಚಿ ಆತನ ಗುಪ್ತಾಂಗಕ್ಕೆ ಕತ್ತರಿ ಹಾಕಿದ್ದಾರೆ.
ಬ್ಲೇಡ್ನಿಂದ ಕತ್ತರಿಸಿ ಅದನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಆ ಇಬ್ಬರು ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ನರ ಭಕ್ಷಕನಾಗಿದ್ದು, ಗುಪ್ತಾಂಗಗಳನ್ನು ಬೇಯಿಸದೆ ತಿನ್ನುವ ಆಸೆಯನ್ನು ಹೊಂದಿದ್ದಾನಾಂತೆ. ಆತನಿಗೆ ಅದನ್ನು ತಿನ್ನುವುದು ಬಹಳ ಇಷ್ಟ ಎಂಬ ಭಯಾನಕ ಸಂಗತಿಯೊಂದು ತಿಳಿದು ಬಂದಿದೆ. ಈ ಸಂಗತಿ ತಿಳಿಯುತ್ತಿದ್ದಂತೆ ಬೇಟೆಗೆ ನಿಂತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಲಿಂಗ ಪರಿವರ್ತನೆ ಹೆಸರಿನಲ್ಲಿ ಗುಪ್ತಾಂಗವನ್ನೇ ತಿನ್ನುತಿದ್ದ ನರ ಭಕ್ಷಕ:
ಬಾಬ್ ಲೀ ಅಲೆನ್ ಮತ್ತು ಥಾಮಸ್ ಗೇಟ್ಸ್ ಇಬ್ಬರೂ ಅಕ್ರಮವಾಗಿ ಹುಡಗರಿಗೆ ಲಿಂಗ ಪರಿವರ್ತನೆ ಮಾಡುವ ದಂಧೆ ಮಾಡುತ್ತಿದ್ದರು. ವೆಬ್ ಸೈಟ್ಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹಾಗೂ 15 ವರ್ಷಗಳ ಅನುಭವವಿದೆ ಎಂದು ಸೈಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಆಸಕ್ತಿ ಇದ್ದ ಯುವಕರು ಇವರ ಬಳಿ ಬಂದು ಲಿಂಗ ಪರಿವರ್ತನೆ ಮಾಡಿಕೊಂಡು ಹಿಜ್ರಾಗಳಾಗುತ್ತಿದ್ದರು. ಈ ರೀತಿ ಯುವಕರ ಗುಪ್ತಾಂಗವನ್ನು ಕತ್ತರಿಸಿ ತಿನ್ನುವ ಕಾರ್ಯ ಮಾಡುತ್ತಿದ್ದರು. ಈ ಘಟನೆ ಅಮೆರಿಕ ಜನರ ನಿದ್ದೆ ಕೆಡಿಸಿದೆ.
Published On - 2:29 pm, Mon, 26 October 20