ಕಾಂಗೋ: ನದಿಯಲ್ಲಿ ಎರಡು ಹಡಗುಗಳು ಡಿಕ್ಕಿ, 270 ಜನರಿದ್ದ ಹಡಗು ಮಗುಚಿ 80ಕ್ಕೂ ಅಧಿಕ ಮಂದಿ ಸಾವು

ನದಿಯಲ್ಲಿ ಹಡಗು ಮುಳಿಗಿದ ಪರಿಣಾಮ 80 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಕಾಂಗೋದಲ್ಲಿ ನಡೆದಿದೆ. ಕಾಂಗೋಲೀಸ್ ನೀರಿನಲ್ಲಿ ಮಾರಣಾಂತಿಕ ಹಡಗು, ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಹಡಗುಗಳು ಹೆಚ್ಚಾಗಿ ಸರಕುಗಳಿಂದ ತುಂಬಿರುತ್ತವೆ ಮತ್ತು ಅಪಘಾತಗಳಿಗೆ ಬಲಿಯಾಗುತ್ತವೆ.

ಕಾಂಗೋ: ನದಿಯಲ್ಲಿ ಎರಡು ಹಡಗುಗಳು ಡಿಕ್ಕಿ, 270 ಜನರಿದ್ದ ಹಡಗು ಮಗುಚಿ 80ಕ್ಕೂ ಅಧಿಕ ಮಂದಿ ಸಾವು

Updated on: Jun 13, 2024 | 8:29 AM

ಎರಡು ಹಡಗುಗಳ ನಡುವೆ ಡಿಕ್ಕಿಯಾದ ರಭಸಕ್ಕೆ 270 ಜನರಿದ್ದ ಹಡಗು ನದಿಯಲ್ಲಿ ಮಗುಚಿ 80ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಕಾಂಗೋದಲ್ಲಿ ನಡೆದಿದೆ. ಈ ಹಡಗು ಕಾಂಗೋದ ರಾಜಧಾನಿ ಕಿನ್ಶಾಸಾಗೆ ಹೋಗುತ್ತಿತ್ತು. ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಮೈ-ನ್ಡೊಂಬೆ ಪ್ರಾಂತ್ಯದ ಕ್ವಾ ನದಿಯಲ್ಲಿ ದೋಣಿ ಅಪಘಾತ ಸಂಭವಿಸಿದೆ.

ಕಾಂಗೋಲೀಸ್ ನೀರಿನಲ್ಲಿ ಮಾರಣಾಂತಿಕ ಹಡಗು, ಅಪಘಾತಗಳು ಸಾಮಾನ್ಯವಾಗಿದೆ, ಅಲ್ಲಿ ಹಡಗುಗಳು ಹೆಚ್ಚಾಗಿ ಸರಕುಗಳಿಂದ ತುಂಬಿರುತ್ತವೆ ಮತ್ತು ಅಪಘಾತಗಳಿಗೆ ಬಲಿಯಾಗುತ್ತವೆ.

ಮಧ್ಯ ಆಫ್ರಿಕಾದ ದೇಶದ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಕೆಲವೇ ಸುಸಜ್ಜಿತ ರಸ್ತೆಗಳಿವೆ. ಆದ್ದರಿಂದ ನದಿಯ ಮೂಲಕ ಪ್ರಯಾಣಿಸುವುದು ಸಾಮಾನ್ಯವಾಗಿದೆ.

ಮತ್ತಷ್ಟು ಓದಿ: ಉತ್ತರ ಪ್ರದೇಶ: ಗಂಗಾ ನದಿಯಲ್ಲಿ ದೋಣಿ ಮುಳುಗಿ 3 ಮಂದಿ ಸಾವು

ಈ ಹಿಂದೆ ಫೆಬ್ರವರಿ ತಿಂಗಳಲ್ಲೂ ಓವರ್‌ಲೋಡ್‌ನಿಂದ ಹಡಗು ಮುಳುಗಿ ಹತ್ತಾರು ಜನರು ಈ ಭಾಗದಲ್ಲಿ ಪ್ರಾಣ ಕಳೆದುಕೊಂಡಿದ್ದರು.

2023 ರಲ್ಲಿ ಇಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿತ್ತು. ಕಾಂಗೋ ನದಿಯಲ್ಲಿ ಹಡಗು ಮುಳುಗಿ ಕನಿಷ್ಠ 52 ಜನರು ಸಾವನ್ನಪ್ಪಿದ್ದರು. ಎಂಬಾಂಡಕಾ ಪಟ್ಟಣದ ಬಳಿ ಹಡಗು ಮಗುಚಿ ಬಿದ್ದಾಗ ಅದರಲ್ಲಿ 300ಕ್ಕೂ ಹೆಚ್ಚು ಮಂದಿ ಇದ್ದರು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us