ಪಾಕಿಸ್ತಾನದಲ್ಲಿ ನನ್ನ ಪಕ್ಷವನ್ನು ನಿಷೇಧಿಸಿದರೆ ಬೇರೊಂದು ಪಕ್ಷ ರಚಿಸಿ ಚುನಾವಣೆ ಗೆಲ್ಲುವೆ: ಇಮ್ರಾನ್ ಖಾನ್

|

Updated on: Jul 15, 2023 | 7:43 PM

ಪಕ್ಷವನ್ನು ನಿಷೇಧಿಸಿದರೆ ಅದು ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎಂದು ಕೇಳಿದಾಗ ಅವರು ಪಕ್ಷವನ್ನು ನಿರ್ಬಂಧಿಸಿದರೆ  ನಾವು ಹೊಸ ಹೆಸರಿನೊಂದಿಗೆ ಪಕ್ಷವನ್ನು ರಚಿಸುತ್ತೇವೆ ಮತ್ತು ಚುನಾವಣೆಯಲ್ಲಿ ಗೆಲ್ಲುತ್ತೇವೆ. ಅವರು ನನ್ನನ್ನು ಅನರ್ಹಗೊಳಿಸಿ ಜೈಲಿಗೆ ತಳ್ಳಿದರೂ ಪಕ್ಷ ಗೆಲ್ಲುತ್ತದೆ ಎಂದ ಇಮ್ರಾನ್ ಖಾನ್

ಪಾಕಿಸ್ತಾನದಲ್ಲಿ ನನ್ನ ಪಕ್ಷವನ್ನು ನಿಷೇಧಿಸಿದರೆ ಬೇರೊಂದು ಪಕ್ಷ ರಚಿಸಿ ಚುನಾವಣೆ ಗೆಲ್ಲುವೆ: ಇಮ್ರಾನ್ ಖಾನ್
ಇಮ್ರಾನ್ ಖಾನ್
Follow us on

ಇಸ್ಲಾಮಾಬಾದ್ ಜುಲೈ15:  ಪಾಕಿಸ್ತಾನದಲ್ಲಿ (Pakistan) ಒಂದು ವೇಳೆ ತಮ್ಮ ಪಕ್ಷವನ್ನು ನಿಷೇಧಿಸಿದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿ ಹೊಸ ರಾಜಕೀಯ ಪಕ್ಷವನ್ನು ರಚಿಸಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ (Imran Khan) ಹೇಳಿರುವುದಾಗಿ ನಿಕ್ಕಿ ಏಷ್ಯಾ ಉಲ್ಲೇಖಿಸಿ ಡಾನ್ ವರದಿ ಮಾಡಿದೆ. ಮೇ 9 ರಂದು ಹಿಂಸಾತ್ಮಕ ರಾಷ್ಟ್ರವ್ಯಾಪಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮತ್ತು ಪ್ರತಿಭಟನಾಕಾರರ ಮೇಲೆ ದಬ್ಬಾಳಿಕೆ ನಂತರ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವನ್ನು ನಿಷೇಧಿಸುವಂತೆ ಅನೇಕ ಸರ್ಕಾರಿ ವ್ಯಕ್ತಿಗಳು ಕರೆ ನೀಡಿದ್ದರು.

ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಸಂಘಟನೆಯನ್ನು ನಿಷೇಧಿಸುವುದೊಂದೇ ಪರಿಹಾರ ಎಂದು ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಹೇಳಿದ್ದರು.

ರಕ್ಷಣಾ ಸಚಿವ ಖವಾಜಾ ಆಸಿಫ್, ಆ ನಿಟ್ಟಿನಲ್ಲಿ ಕ್ರಮವನ್ನು ಪರಿಗಣಿಸಲಾಗುತ್ತದೆ. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಮತ್ತು ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮೇಲೆ ನಿಷೇಧ ಹೇರುವ ಯಾವುದೇ ಕ್ರಮವನ್ನು ತಮ್ಮ ಪಕ್ಷ ವಿರೋಧಿಸುವುದಿಲ್ಲ ಎಂದು ಹೇಳಿದ್ದಾರೆ.

ಪಕ್ಷವನ್ನು ನಿಷೇಧಿಸಿದರೆ ಅದು ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎಂದು ಕೇಳಿದಾಗ ಅವರು ಪಕ್ಷವನ್ನು ನಿರ್ಬಂಧಿಸಿದರೆ  ನಾವು ಹೊಸ ಹೆಸರಿನೊಂದಿಗೆ ಪಕ್ಷವನ್ನು ರಚಿಸುತ್ತೇವೆ ಮತ್ತು ಚುನಾವಣೆಯಲ್ಲಿ ಗೆಲ್ಲುತ್ತೇವೆ. ಅವರು ನನ್ನನ್ನು ಅನರ್ಹಗೊಳಿಸಿ ಜೈಲಿಗೆ ತಳ್ಳಿದರೂ ಪಕ್ಷ ಗೆಲ್ಲುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: PM Modi UAE Visit: ಅರಬ್ ರಾಷ್ಟ್ರಕ್ಕೆ ಮೋದಿ ಆಗಮನ, ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಕ್ರೌನ್ ಪ್ರಿನ್ಸ್

ರಾಷ್ಟ್ರೀಯ ರಾಜಕೀಯವು ಮೂಲಭೂತವಾಗಿ ಬದಲಾಗಿದೆ. ಆದರೆ ಬೆಂಬಲಿಗರು ನಮ್ಮೊಂದಿಗೆ ಅಚಲವಾಗಿ ನಿಂತಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಮುಖ್ಯಸ್ಥರು ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ