ಒಂದೊಮ್ಮೆ ಅಫ್ಘಾನಿಸ್ತಾನದೊಂದಿಗಿನ ಶಾಂತಿ ಮಾತುಕತೆ ವಿಫಲವಾದರೆ, ಅವರ ಮೇಲೆ ಯುದ್ಧ ಮಾಡುತ್ತೇವೆ ಎಂದ ಪಾಕಿಸ್ತಾನ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಫ್ಘಾನಿಸ್ತಾನ(Afghanistan)ಕ್ಕೆ ಬೆದರಿಕೆ ಹಾಕಿದ್ದಾರೆ.ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ವಿಫಲವಾದರೆ, ಬಹಿರಂಗ ಯುದ್ಧ ನಡೆಯಲಿದೆ ಮತ್ತು ಅಫ್ಘಾನಿಸ್ತಾನ ಅದಕ್ಕೆ ಸಿದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಬೆದರಿಕೆಗೆ ಅಫ್ಘಾನಿಸ್ತಾನ ಪ್ರತಿಕ್ರಿಯಿಸಿಲ್ಲ. ಆದರೆ ಗಡಿಯಲ್ಲಿ ಪ್ರಸ್ತುತ ಶಾಂತಿ ನೆಲೆಸಿದೆ ಮತ್ತು ಅದು ಹಾಗೆಯೇ ಉಳಿಯುವಂತೆ ರಾಜತಾಂತ್ರಿಕತೆ ಯಶಸ್ವಿಯಾಗಬೇಕು ಎಂದು ಆಸಿಫ್ ಹೇಳಿದ್ದಾರೆ

ಒಂದೊಮ್ಮೆ ಅಫ್ಘಾನಿಸ್ತಾನದೊಂದಿಗಿನ ಶಾಂತಿ ಮಾತುಕತೆ ವಿಫಲವಾದರೆ, ಅವರ ಮೇಲೆ ಯುದ್ಧ ಮಾಡುತ್ತೇವೆ ಎಂದ ಪಾಕಿಸ್ತಾನ
ಖವಾಜಾ ಆಸಿಫ್

Updated on: Oct 26, 2025 | 9:15 AM

ಇಸ್ಲಾಮಾಬಾದ್, ಅಕ್ಟೋಬರ್ 26: ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅಫ್ಘಾನಿಸ್ತಾನ(Afghanistan)ಕ್ಕೆ ಬೆದರಿಕೆ ಹಾಕಿದ್ದಾರೆ. ಇಸ್ತಾನ್‌ಬುಲ್‌ನಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆ ವಿಫಲವಾದರೆ, ಬಹಿರಂಗ ಯುದ್ಧ ನಡೆಯಲಿದೆ ಮತ್ತು ಅಫ್ಘಾನಿಸ್ತಾನ ಅದಕ್ಕೆ ಸಿದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ಬೆದರಿಕೆಗೆ ಅಫ್ಘಾನಿಸ್ತಾನ ಪ್ರತಿಕ್ರಿಯಿಸಿಲ್ಲ. ಆದರೆ ಗಡಿಯಲ್ಲಿ ಪ್ರಸ್ತುತ ಶಾಂತಿ ನೆಲೆಸಿದೆ ಮತ್ತು ಅದು ಹಾಗೆಯೇ ಉಳಿಯುವಂತೆ ರಾಜತಾಂತ್ರಿಕತೆ ಯಶಸ್ವಿಯಾಗಬೇಕು ಎಂದು ಆಸಿಫ್ ಹೇಳಿದ್ದಾರೆ.

ಸಂವಾದ ವಿಫಲವಾದರೆ, ಪಾಕಿಸ್ತಾನಕ್ಕೆ ಅಫ್ಘಾನಿಸ್ತಾನದೊಂದಿಗೆ ಬಹಿರಂಗ ಸಂಘರ್ಷದಲ್ಲಿ ತೊಡಗಿಸಿಕೊಳ್ಳದೆ ಬೇರೆ ದಾರಿಯಿಲ್ಲ ಎಂದು ಅವರು ಹೇಳಿದರು.

ಅಕ್ಟೋಬರ್ 9ರಂದು ಪಾಕಿಸ್ತಾನ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತ್ತು. ಅದು ತೆಹ್ರೀಕ್-ಇ-ತಾಲಿಬಾನ್ ಭಯೋತ್ಪಾದಕರಿಗೆ ಆಶ್ರಯ ನೀಡಿದೆ ಎಂದು ಆರೋಪಿಸಲಾಗಿತ್ತು. ಕಾಬೂಲ್​ನಲ್ಲಿರುವ ಟಿಟಿಪಿ ನೆಲೆಗಳ ಮೇಲೆ ವೈಮಾನಿಕ ದಾಳಿಗಳು ಹಾನಿಯನ್ನುಂಟುಮಾಡಿದ್ದವು. ಪಾಕಿಸ್ತಾನವು ಐಸಿಸ್ ಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ ಅಫ್ಘಾನಿಸ್ತಾನ ಪ್ರತೀಕಾರ ತೀರಿಸಿಕೊಂಡಿತ್ತು.

ನಂತರ ಎರಡೂ ದೇಶಗಳು ಗಡಿ ವಿವಾದಗಳು ಮತ್ತು ವಾಯುಪ್ರದೇಶ ಉಲ್ಲಂಘನೆಗಾಗಿ ಪರಸ್ಪರ ಆರೋಪ ಮಾಡಿಕೊಂಡವು. ಐದು ದಿನಗಳ ಕಾಲ ಡುರಾಂಡ್ ರೇಖೆಯ ಉದ್ದಕ್ಕೂ ಕಿಸ್ತಾನಿ ಮತ್ತು ಅಫಘಾನ್ ಸೇನೆಗಳ ನಡುವೆ ರಕ್ತಸಿಕ್ತ ಘರ್ಷಣೆಗಳು ನಡೆದವು. ಸೈನಿಕರು ಮತ್ತು ನಾಗರಿಕರು ಕೊಲ್ಲಲ್ಪಟ್ಟರು, ಮತ್ತು ಅಫಘಾನ್ ಕ್ರಿಕೆಟಿಗರು ಸಹ ತಮ್ಮ ಪ್ರಾಣವನ್ನು ಕಳೆದುಕೊಂಡರು.

ಮತ್ತಷ್ಟು ಓದಿ: ಅಫ್ಘಾನಿಸ್ತಾನ ಗಡಿ ಬಂದ್: ಪಾಕಿಸ್ತಾನದಲ್ಲಿ ಟೊಮೆಟೊ ಬೆಲೆ ಶೇ.400ರಷ್ಟು ಏರಿಕೆ

ಸೈನ್ಯಗಳು ಪರಸ್ಪರರ ಮಿಲಿಟರಿ ಪೋಸ್ಟ್‌ಗಳನ್ನು ವಶಪಡಿಸಿಕೊಂಡವು. ಉದ್ವಿಗ್ನತೆ ಹೆಚ್ಚುತ್ತಿರುವುದನ್ನು ನೋಡಿ, ಕತಾರ್ ಮಧ್ಯಸ್ಥಿಕೆ ವಹಿಸಲು ಮುಂದಾಯಿತು ಮತ್ತು ದೋಹಾದಲ್ಲಿ ಎರಡೂ ದೇಶಗಳನ್ನು ಮುಖಾಮುಖಿ ಮಾಡುವ ಮೂಲಕ ಎರಡು ದಿನಗಳ ತಾತ್ಕಾಲಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿತು, ಆದರೆ ಕದನ ವಿರಾಮವು ಹೆಚ್ಚು ಕಾಲ ಉಳಿಯಲಿಲ್ಲ.

ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಎರಡನೇ ಸುತ್ತಿನ ಶಾಂತಿ ಮಾತುಕತೆ ನಿನ್ನೆ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ಪ್ರಾರಂಭವಾಯಿತು ಮತ್ತು ಪ್ರಸ್ತುತ ನಡೆಯುತ್ತಿದೆ. ಎರಡೂ ದೇಶಗಳ ನಡುವೆ ಭವಿಷ್ಯದ ಹಿಂಸಾಚಾರವನ್ನು ತಡೆಗಟ್ಟಲು ಜಂಟಿ ಕಾರ್ಯವಿಧಾನವನ್ನು ಸ್ಥಾಪಿಸುವುದು, ಪರಸ್ಪರರ ಸಾರ್ವಭೌಮತ್ವಕ್ಕೆ ಪರಸ್ಪರ ಗೌರವವನ್ನು ಖಚಿತಪಡಿಸಿಕೊಳ್ಳುವುದು, ಪಾಕಿಸ್ತಾನದ ಭದ್ರತಾ ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ವ್ಯಾಪಾರ ನಿರ್ಬಂಧಗಳನ್ನು ತೆಗೆದುಹಾಕುವ ಬಗ್ಗೆ ಮಾತುಕತೆಗಳ ಬಗ್ಗೆ ಗಮನಹರಿಸಲಾಗುತ್ತದೆ..

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ತಿಂಗಳುಗಳ ನಂತರ, ಅಫ್ಘಾನಿಸ್ತಾನವು ಕುನಾರ್ ನದಿಗೆ ಸಾಧ್ಯವಾದಷ್ಟು ಬೇಗ ಅಣೆಕಟ್ಟುಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿದೆ, ಇದು ಪಾಕಿಸ್ತಾನಕ್ಕೆ ಸಮಸ್ಯೆಯನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:11 am, Sun, 26 October 25