ಪಾಕಿಸ್ತಾನಕ್ಕೆ ಮತ್ತೊಂದು ಸಂಕಷ್ಟ; ಭಾರತದ ಬಳಿಕ ಅಫ್ಘಾನಿಸ್ತಾನದಿಂದಲೂ ಪಾಕ್ಗೆ ನೀರು ಬಿಡದಿರಲು ನಿರ್ಧಾರ
ಅಫ್ಘಾನಿಸ್ತಾನ ಪಾಕಿಸ್ತಾನದ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಒತ್ತಡ ಹೇರುತ್ತಲೇ ಇದೆ. ಅಫ್ಘಾನ್ ಮತ್ತು ಪಾಕಿಸ್ತಾನದ ಗಡಿ ದಾಳಿಗಳ ನಂತರ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ಬಿಡುವ ನೀರಿನ ಮೇಲೆ ಹಿಡಿತವನ್ನು ಬಿಗಿಗೊಳಿಸಲು ನಿರ್ಧರಿಸಿದೆ. ತಾಲಿಬಾನ್ ಆಡಳಿತವು ಕುನಾರ್ ನದಿಗೆ ಅಣೆಕಟ್ಟು ನಿರ್ಮಿಸಲು ಯೋಜಿಸುತ್ತಿದೆ. ಭಾರತ ಈಗಾಗಲೇ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿರುವುದರಿಂದ ಭಾರೀ ಹೊಡೆತ ಅನುಭವಿಸುತ್ತಿರುವ ಪಾಕಿಸ್ತಾನಕ್ಕೆ ತಾಲಿಬಾನ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ.

ನವದೆಹಲಿ, ಅಕ್ಟೋಬರ್ 24: ಭಾರತ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಅಫ್ಘಾನಿಸ್ತಾನ (Afghanistan) ಕೂಡ ಈಗ ಗಡಿಯಾಚೆಗಿನ ನದಿಗಳಿಂದ ಪಾಕಿಸ್ತಾನಕ್ಕೆ ನೀರನ್ನು ನಿರ್ಬಂಧಿಸಲು ನಿರ್ಧರಿಸಿದೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ (Pakistan) ಯುದ್ಧದಲ್ಲಿ ತೊಡಗಿದ ಕೆಲವೇ ವಾರಗಳ ನಂತರ ಕಾಬೂಲ್ ಕುನಾರ್ ನದಿಗೆ ಸಾಧ್ಯವಾದಷ್ಟು ಬೇಗ ಅಣೆಕಟ್ಟು ನಿರ್ಮಿಸುವುದಾಗಿ ತಾಲಿಬಾನ್‌ನ (Taliban) ಸರ್ವೋಚ್ಚ ನಾಯಕ ಘೋಷಿಸುವ ಮೂಲಕ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಶಾಕ್ ನೀಡಿದ್ದಾರೆ.
ಪಾಕಿಸ್ತಾನ-ಅಫ್ಘಾನಿಸ್ತಾನ ಸಂಬಂಧಗಳು ಮತ್ತಷ್ಟು ಹದಗೆಟ್ಟಿವೆ. ಡುರಾಂಡ್ ರೇಖೆಯ ಉದ್ದಕ್ಕೂ ತನ್ನ ಗಡಿ ಪ್ರದೇಶಗಳ ಮೇಲೆ ದಾಳಿ ಮಾಡಿದ ನಂತರ, ತಾಲಿಬಾನ್ ಸರ್ಕಾರವು ಕುನಾರ್ ನದಿಯ ಮೇಲೆ ಅಣೆಕಟ್ಟು ನಿರ್ಮಿಸುವ ಮೂಲಕ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ನಿಲ್ಲಿಸಲು ನಿರ್ಧರಿಸಿದೆ. ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ (ಐಇಎ) ಸರ್ವೋಚ್ಚ ನಾಯಕ ಕುನಾರ್ ನದಿಯಲ್ಲಿ ಅಣೆಕಟ್ಟು ನಿರ್ಮಾಣವನ್ನು ಪ್ರಾರಂಭಿಸಲು ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ನಿಜವೇ ಆದರೆ ಪಾಕಿಸ್ತಾನದಲ್ಲಿ ನೀರಿನ ಬಿಕ್ಕಟ್ಟು ಎದುರಾಗುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ತಾಲಿಬಾನ್ ಅಂತ್ಯಕ್ಕೆ ಬಜರಂಗ ಬಲಿಯ ಗದೆಯೇ ಪರಿಹಾರ, ಕಾಂಗ್ರೆಸ್ನ್ನು ಕುಟುಕಿದ ಯೋಗಿ
ಕುನಾರ್ ನದಿಯ ಮೇಲೆ ಸಾಧ್ಯವಾದಷ್ಟು ವೇಗವಾಗಿ ಅಣೆಕಟ್ಟು ನಿರ್ಮಿಸುವ ಆದೇಶವನ್ನು ತಾಲಿಬಾನ್ ಸುಪ್ರೀಂ ನಾಯಕ ಮಾವ್ಲಾವಿ ಹಿಬತುಲ್ಲಾ ಅಖುಂಡ್ಜಾದಾ ಅವರು ನೀಡಿದ್ದಾರೆ. ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಯುದ್ಧ ಮಾಡಿ ನೂರಾರು ಜನರನ್ನು ಬಲಿತೆಗೆದುಕೊಂಡ ಕೆಲವೇ ವಾರಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರತದ ಖಡಕ್ ಸಂದೇಶವಾ? ಕಾಬೂಲ್ನಲ್ಲಿ ಭಾರತದ ರಾಯಭಾರ ಕಚೇರಿ ಪುನಾರಂಭ
ಕಾಶ್ಮೀರದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನು (IWT) ಸ್ಥಗಿತಗೊಳಿಸಿತ್ತು. ಅದಾದ ನಂತರ ಅಫ್ಘಾನಿಸ್ತಾನ ಕೂಡ ಇದೀಗ ಪಾಕಿಸ್ತಾನಕ್ಕೆ ನೀರಿನ ಹರಿವು ನಿಲ್ಲಿಸುವ ನಿರ್ಧಾರಕ್ಕೆ ಬಂದಿದೆ. ಸಿಂಧೂ ಜಲ ಒಪ್ಪಂದವು 1960ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸಹಿ ಹಾಕಲಾದ ನೀರು ಹಂಚಿಕೆ ಒಪ್ಪಂದವಾಗಿದೆ. ವಿಶ್ವಬ್ಯಾಂಕ್ ಮಧ್ಯಸ್ಥಿಕೆ ವಹಿಸಿದ ಈ ಒಪ್ಪಂದವು ಸಿಂಧೂ ನದಿ ವ್ಯವಸ್ಥೆಯಿಂದ ನೀರನ್ನು ನಿರ್ವಹಿಸುವ ಗುರಿಯನ್ನು ಹೊಂದಿತ್ತು. ಈ ಒಪ್ಪಂದ ಜಲಾನಯನ ಪ್ರದೇಶದ 6 ನದಿಗಳನ್ನು ವಿಭಜಿಸುತ್ತದೆ. ಬಿಯಾಸ್, ರಾವಿ ಮತ್ತು ಸಟ್ಲೆಜ್‌ನ ಪೂರ್ವ ನದಿಗಳ ಮೇಲೆ ಭಾರತಕ್ಕೆ ವಿಶೇಷ ಹಕ್ಕುಗಳಿದ್ದರೂ, ಪಾಕಿಸ್ತಾನವು ಸಿಂಧೂ, ಝೀಲಂ ಮತ್ತು ಚೆನಾಬ್‌ನ ಪಶ್ಚಿಮ ನದಿಗಳ ಅನಿಯಂತ್ರಿತ ಬಳಕೆಯ ಅವಕಾಶವನ್ನು ಹೊಂದಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




