ಅಫ್ಘಾನ್ ಗಡಿಯಲ್ಲಿ ಸೇಡಿನ ದಾಳಿ; ತಾಲಿಬಾನ್ನಿಂದ 12 ಪಾಕಿಸ್ತಾನಿ ಸೈನಿಕರ ಹತ್ಯೆ
ಶನಿವಾರ ತಡರಾತ್ರಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಯಿತು. ಈ ಭೀಕರ ಗಡಿ ಘರ್ಷಣೆಯಲ್ಲಿ 12 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನಿ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತೀಕಾರವಾಗಿ ತಾಲಿಬಾನ್ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಿದೆ. ಇಬ್ಬರು ಪಾಕ್ ಸೈನಿಕರನ್ನು ಅಫ್ಘಾನ್ ಗಡಿಯಲ್ಲಿ ಸೆರೆಹಿಡಿಯಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ನವದೆಹಲಿ, ಅಕ್ಟೋಬರ್ 12: ಅಫ್ಘಾನ್ ಮತ್ತು ಪಾಕಿಸ್ತಾನಿ ಸೈನಿಕರ ನಡುವಿನ ಪ್ರಮುಖ ಗಡಿ ಘರ್ಷಣೆಯಲ್ಲಿ 12 ಪಾಕಿಸ್ತಾನಿ (Pakistan) ಸೈನಿಕರು ಸಾವನ್ನಪ್ಪಿದ್ದಾರೆ. ಡುರಾಂಡ್ ಲೈನ್ ಬಾರ್ಡರ್ನಲ್ಲಿ ಈ ಘರ್ಷಣೆ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ (Afghanistan) ಪಾಕಿಸ್ತಾನಿ ಮಿಲಿಟರಿ ನಡೆಸಿದ ದಾಳಿಗೆ ಅಫ್ಘಾನ್ ಪಡೆಗಳು ನೀಡಿದ ಪ್ರತಿಕ್ರಿಯೆಯಾಗಿ ಈ ಹಿಂಸಾತ್ಮಕ ಘರ್ಷಣೆ ನಡೆದಿದೆ ಎನ್ನಲಾಗಿದೆ. ಕಾಬೂಲ್ನಲ್ಲಿ ಪಾಕಿಸ್ತಾನದ ನಡೆಸಿದ್ದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಈ ದಾಳಿ ನಡೆಸಿದ್ದು, ಈ ಸಂಘರ್ಷದಲ್ಲಿ ತಮಗೆ ಗೆಲುವು ಸಿಕ್ಕಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
“ಕುನಾರ್ ಮತ್ತು ಹೆಲ್ಮಂಡ್ ಪ್ರಾಂತ್ಯಗಳಲ್ಲಿ ಡುರಾಂಡ್ ರೇಖೆಯ ಸುತ್ತ ಪಾಕಿಸ್ತಾನಿ ಸೇನೆಯಿಂದ ಹಲವಾರು ಹೊರಠಾಣೆಗಳನ್ನು ತಾಲಿಬಾನ್ ಪಡೆಗಳು ವಶಪಡಿಸಿಕೊಂಡಿವೆ” ಎಂದು ಅಫ್ಘಾನ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೇರೆಯವರನ್ನು ಬೆದರಿಸಲು ನಮ್ಮ ಪ್ರದೇಶ ಬಳಸಲು ಯಾರಿಗೂ ಅವಕಾಶ ನೀಡವುದಿಲ್ಲ, ಪಾಕ್ಗೆ ಭಾರತ, ಅಫ್ಘಾನಿಸ್ತಾನ ಎಚ್ಚರಿಕೆ
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿದ್ದು, ಗಡಿ ಘರ್ಷಣೆ ಸಂಭವಿಸಿದೆ. ಅಕ್ಟೋಬರ್ 9ರಂದು ಪಾಕಿಸ್ತಾನವು ಅಫ್ಘಾನಿಸ್ತಾನದ ಪೂರ್ವ ಪ್ರಾಂತ್ಯಗಳಲ್ಲಿ ವೈಮಾನಿಕ ದಾಳಿಯನ್ನು ಪ್ರಾರಂಭಿಸಿತು. ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ಹಿರಿಯ ಕಮಾಂಡರ್‌ಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ದಾಳಿ ನಡೆಸಿತು. ಇದರಲ್ಲಿ ಟಿಟಿಪಿ ನಾಯಕ ನೂರ್ ವಾಲಿ ಮೆಹ್ಸೂದ್ ಮೇಲೂ ದಾಳಿ ನಡೆಸಲಾಗಿತ್ತು.
Afghan Taliban launches coordinated attacks on Pakistani border posts from Paktia, Khost, Jalalabad, Helmand
Afghan troopers have reportedly captured several Pakistani checkpoints in Khost’s Zazi Maidan district
Sources also claim Paki soldiers were killed,
Fuck Pakistan 🖕 pic.twitter.com/ShMGU9Q7p8
— Sumit (@SumitHansd) October 11, 2025
ಈ ವೈಮಾನಿಕ ದಾಳಿಗೆ ಪ್ರತಿಕ್ರಿಯೆಯಾಗಿ, ಅಫ್ಘಾನ್ ಪಡೆಗಳು ಡುರಾಂಡ್ ರೇಖೆಯ ಬಳಿಯ ಪಾಕಿಸ್ತಾನಿ ಮಿಲಿಟರಿ ಪೋಸ್ಟ್‌ಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದವು. ಅಫ್ಘಾನ್ ಪಡೆಗಳು ನಂಗರ್ಹಾರ್ ಮತ್ತು ಕುನಾರ್ ಪ್ರಾಂತ್ಯಗಳಲ್ಲಿನ ಹಲವಾರು ಪಾಕಿಸ್ತಾನಿ ಹೊರಠಾಣೆಗಳನ್ನು ಯಶಸ್ವಿಯಾಗಿ ಗುರಿಯಾಗಿಸಿಕೊಂಡಿವೆ. “ಇಂದು ರಾತ್ರಿಯ ದಾಳಿಯಲ್ಲಿ ಪಾಕಿಸ್ತಾನಿ ಕಡೆಯ ಸೌಲಭ್ಯಗಳು ಮತ್ತು ಉಪಕರಣಗಳು ನಾಶವಾದವು” ಎಂದು ನಿನ್ನೆ ಮಧ್ಯರಾತ್ರಿ ಅಫ್ಘಾನ್ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ.
ಇದನ್ನೂ ಓದಿ: Video: ಪಾಕಿಸ್ತಾನದ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಆತ್ಮಾಹುತಿ ದಾಳಿ, 7 ಪೊಲೀಸರು, 6 ಉಗ್ರರು ಸಾವು
ಈ ಘರ್ಷಣೆಯ ಸಮಯದಲ್ಲಿ ಪಾಕಿಸ್ತಾನಿ ಮಿಲಿಟರಿ ಸೌಲಭ್ಯಗಳು ಮತ್ತು ಉಪಕರಣಗಳು ನಾಶವಾದವು, ಪಾಕಿಸ್ತಾನದ ಕಡೆಯಿಂದ ಗಮನಾರ್ಹ ಸಾವುನೋವುಗಳು ಸಂಭವಿಸಿವೆ ಎಂದು ಅಫಘಾನ್ ರಕ್ಷಣಾ ಸಚಿವಾಲಯದ ಮೂಲಗಳು ಹೇಳಿವೆ. ಘಟನೆಯ ಕುರಿತು ಪಾಕಿಸ್ತಾನಿ ಮಿಲಿಟರಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




