Plane Crash: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಟೇಕ್ ಆಪ್ ಆದ ಕೂಡಲೇ ವಿಮಾನ ಪತನ, ಓರ್ವ ಸಾವು, ಮೂವರಿಗೆ ಗಾಯ

|

Updated on: Jul 05, 2023 | 9:52 AM

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಿಂಗಲ್ ಇಂಜಿನ್ ವಿಮಾನವೊಂದು ಪತನಗೊಂಡಿದ್ದು ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ

Plane Crash: ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಟೇಕ್ ಆಪ್ ಆದ ಕೂಡಲೇ ವಿಮಾನ ಪತನ, ಓರ್ವ ಸಾವು, ಮೂವರಿಗೆ ಗಾಯ
ವಿಮಾನ ಪತನ
Follow us on

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಸಿಂಗಲ್ ಇಂಜಿನ್ ವಿಮಾನವೊಂದು ಪತನಗೊಂಡಿದ್ದು ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಫೆರಡಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಪ್ರಕಾರ, ನಾಲ್ಕು ಜನರಿದ್ದ ಸೆಸ್ನಾ 172, ಮುರ್ರಿಯೆಟಾದ ಫ್ರೆಂಚ್ ವ್ಯಾಲಿ ವಿಮಾನ ನಿಲ್ದಾಣದ ಬಳಿ ಸುಮಾರು 2.45ಕ್ಕೆ ಅಪಘಾತಕ್ಕೀಡಾಯಿತು.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ತನಿಖೆ ನಡೆಸುತ್ತದೆ. ಡೌನ್​ಟೌನ್ ಲಾಸ್ ಏಂಜಲೀಸ್​ನ ಆಗ್ನೇಯಕ್ಕೆ ಸುಮಾರು 85 ಮೈಲಿಗಳಷ್ಟು ದೂರದಲ್ಲಿ ಘಟನೆ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದು ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನವು ಟೇಕ್​ ಆಫ್ ಆದ ಕೂಡಲೇ ಘಟನೆ ಸಂಭವಿಸಿದೆ.

ಮತ್ತಷ್ಟು ಓದಿ: Nepal Aircraft Crash: ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನ

ಮತ್ತೊಂದು ಘಟನೆ

ಅಮೆರಿಕದಲ್ಲಿ ವಿಮಾನ ಪತನ ನಾಲ್ವರು ಸಾವು
ಅಮೆರಿಕದ ನಿರ್ಬಂಧಿತ ವಾಯು ಪ್ರದೇಶ ಪ್ರವೇಶಿಸಿದ್ದ ಸಣ್ಣ ವಾಣಿಜ್ಯ ವಿಮಾನವೊಂದು ನಾಲ್ಕು ಮಂದಿ ಮೃತಪಟ್ಟಿದ್ದರು. ದಾರಿತಪ್ಪಿ ಬಂದಿದ್ದ ವಿಮಾನವನ್ನು ಎಚ್ಚರಿಸಲು ಅಮೆರಿಕ ಯುದ್ಧ ವಿಮಾನಗಳು ಹರಸಾಹಸ ಪಟ್ಟಿದ್ದು, ವಿಮಾನಗಳ ವೇಗದಿಂದಾಗಿ ಶಬ್ದಕ್ಕೆ ಇಡೀ ನಗರ ಬೆಚ್ಚಿ ಬಿದ್ದಿತ್ತು.

ಟೆನ್ನಿಸೀಯಾ ಎಲಿಜಬೆತ್ ಟೌನ್​ನಿಂದ ಲಾಂಗ್​ ಐಲ್ಯಾಂಡ್​ನ ಮ್ಯಾಕ್ ಅರ್ಥರ್ ವಿಮಾನ ನಿಲ್ದಾಣಕ್ಕೆ 4 ಮಂದಿಯಷ್ಟೇ ಇದ್ದಂತ ಸಣ್ಣ ವಿಮಾನ ತೆರಳುತ್ತಿತ್ತು, ಈ ವೇಳೆ ಸಂಪರ್ಕ ಕಳೆದುಕೊಂಡು ವಾಷಿಂಗ್ಟನ್​ನ ನಿಷೇಧಿತ ವಾಯುನೆಲೆಯನ್ನು ಪ್ರವೇಶಿಸಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ