Hong Kong: ಹಾಂಗ್ಕಾಂಗ್ ವಿಮಾನದಲ್ಲಿ ಕ್ಯಾಥೆ ಪೆಸಿಫಿಕ್ ವಿಮಾನದ ಟೈರ್ ಸ್ಫೋಟ, 11 ಮಂದಿಗೆ ಗಾಯ
ಹಾಂಕ್ಕಾಂಗ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಥೆ ಪೆಸಿಫಿಕ್(Cathay Pacific) ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ 11 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ.
ಹಾಂಕ್ಕಾಂಗ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ಯಾಥೆ ಪೆಸಿಫಿಕ್(Cathay Pacific) ವಿಮಾನದ ಟೈರ್ ಸ್ಫೋಟಗೊಂಡ ಪರಿಣಾಮ 11 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿವೆ. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಹಾಂಗ್ಕಾಂಗ್ನಿಂದ ಲಾಸ್ ಏಂಜಲೀಸ್ಗೆ ಹೊರಟಿದ್ದ ವಿಮಾನದಲ್ಲಿ 17 ಸಿಬ್ಬಂದಿ ಹಾಗೂ 293 ಪ್ರಯಾಣಿಕರಿದ್ದರು.
ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಈ ಪೈಕಿ 9 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಐದು ಡೋರ್ ಎಸ್ಕೇಪ್ ಸ್ಲೈಡ್ಗಳನ್ನು ಬಳಸಿಕೊಂಡು ಪ್ರಯಾಣಿಕರು ವಿಮಾನದಿಂದ ಇಳಿದಿದ್ದಾರೆ.
ಮತ್ತಷ್ಟು ಓದಿ: Air India: ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಸ್ವೀಡನ್ನಲ್ಲಿ ತುರ್ತು ಭೂಸ್ಪರ್ಶ
ವಿಮಾನದ ಟೈರ್ಗಳು ಹೆಚ್ಚು ಬಿಸಿಯಾಗಿದ್ದ ಕಾರಣ ಸಿಡಿದಿದೆ, ವಿಮಾನದಿಂದ ಕೆಳಗಿಳಿಯುವ ವೇಳೆ ಕೆಲ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗಾಗಿ ವಿಮಾನಯಾನ ಸಂಸ್ಥೆಯು ಕ್ಷಮೆಯಾಚಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ