ಪಾಪ್ ಬ್ಯೂಟಿ ಮಡೋನಾಗೂ ಕೊರೊನಾ! ಆದ್ರೆ ಪಾರ್ಟಿಯಲ್ಲಿ ಮಾಡಿದ್ದೇನು?

|

Updated on: May 04, 2020 | 1:51 PM

ನ್ಯೂಯಾರ್ಕ್: ಕೊರೊನಾ ಕಾಲದಲ್ಲಿಯಾದರೂ ಸೆಲೆಬ್ರಿಟಿಗಳು ಇಂದಷ್ಟು ಸಾಮಾಜಿಕ ಕಳಕಳಿ ಹೊಂದಿರಬೇಕಲ್ವಾ? ಸದಾ ತಾವುಂಟು, ಮೂರು ಲೋಕವುಂಟು ಎಂದು ಮೋಜಿನಲ್ಲಿಯೇ ಇದ್ದರೆ ಹೇಗೆ? ಅಂದಕಾಲತ್ತಿಲ್ ಪಾಪ್ ಲೋಕದ ಅಧಿದೇವತೆ, ಸಿಂಗರ್ ಮಡೋನಾ ಇನ್ನೂ ಜ್ಞಾಪಕ ಇರಬೇಕಲ್ಲವಾ? ಈ ಪಾಪ್ ಸಿಂಗರ್ ಮಡೋನಾಗೆ ಇದೀಗ ಕೊರೊನಾ ಸೋಂಕು ಅಂಟಿಕೊಂಡಿದೆ. ಮಡೋನಾ ಮೋಜುಮಸ್ತಿಗೆ ಕೊನೆಯೇನೂ ಇಲ್ಲ ಎಂಬಂತಾಗಿದೆ. ಮೊನ್ನೆ ಭರ್ಜರಿ ಪಾರ್ಟಿ ಮಾಡಿರುವ ಮಡೋನಾ ಗೆಳೆಯ, ಖ್ಯಾತ ಫೋಟೋಗ್ರಾಫರ್ ಸ್ಟೀವನ್ ಕ್ಲೇನ್ ಹುಟ್ಟುಹಬ್ಬದಂದು ಜೋರಾಗಿಯೇ ಪಾರ್ಟಿ ಮಾಡಿದ್ದಾರೆ. ತನಗೆ ಕೊರೊನಾ ಸೋಂಕು […]

ಪಾಪ್ ಬ್ಯೂಟಿ ಮಡೋನಾಗೂ ಕೊರೊನಾ! ಆದ್ರೆ ಪಾರ್ಟಿಯಲ್ಲಿ ಮಾಡಿದ್ದೇನು?
Follow us on

ನ್ಯೂಯಾರ್ಕ್: ಕೊರೊನಾ ಕಾಲದಲ್ಲಿಯಾದರೂ ಸೆಲೆಬ್ರಿಟಿಗಳು ಇಂದಷ್ಟು ಸಾಮಾಜಿಕ ಕಳಕಳಿ ಹೊಂದಿರಬೇಕಲ್ವಾ? ಸದಾ ತಾವುಂಟು, ಮೂರು ಲೋಕವುಂಟು ಎಂದು ಮೋಜಿನಲ್ಲಿಯೇ ಇದ್ದರೆ ಹೇಗೆ? ಅಂದಕಾಲತ್ತಿಲ್ ಪಾಪ್ ಲೋಕದ ಅಧಿದೇವತೆ, ಸಿಂಗರ್ ಮಡೋನಾ ಇನ್ನೂ ಜ್ಞಾಪಕ ಇರಬೇಕಲ್ಲವಾ? ಈ ಪಾಪ್ ಸಿಂಗರ್ ಮಡೋನಾಗೆ ಇದೀಗ ಕೊರೊನಾ ಸೋಂಕು ಅಂಟಿಕೊಂಡಿದೆ.

ಮಡೋನಾ ಮೋಜುಮಸ್ತಿಗೆ ಕೊನೆಯೇನೂ ಇಲ್ಲ ಎಂಬಂತಾಗಿದೆ. ಮೊನ್ನೆ ಭರ್ಜರಿ ಪಾರ್ಟಿ ಮಾಡಿರುವ ಮಡೋನಾ ಗೆಳೆಯ, ಖ್ಯಾತ ಫೋಟೋಗ್ರಾಫರ್ ಸ್ಟೀವನ್ ಕ್ಲೇನ್ ಹುಟ್ಟುಹಬ್ಬದಂದು ಜೋರಾಗಿಯೇ ಪಾರ್ಟಿ ಮಾಡಿದ್ದಾರೆ.

ತನಗೆ ಕೊರೊನಾ ಸೋಂಕು ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಸಾಮಾಜಿಕ/ ದೈಹಿಕ ಅಂತರಕ್ಕೆ ತಿಲಾಂಜಲಿಯಿಟ್ಟ ಮಡೋನಾ ಗೆಳೆಯ ಸ್ಟೀವನ್ ಕ್ಲೇನ್​ನನ್ನು ಬಾಚಿ ತಬ್ಬಿಕೊಂಡಿದ್ದಾರೆ. ನ್ಯೂಯಾರ್ಕ್​ನ ಬ್ರಿಡ್ಜ್​ಹ್ಯಾಂಪ್ಟನ್ ನಲ್ಲಿ ನೆರೆಹೊರೆಯವರಾದ ಮಡೋನಾ- ಸ್ಟೀವನ್ ನಿವಾಸದಲ್ಲಿ ಈ ಪಾರ್ಟಿ ನಡೆದಿದೆ. ಮಡೋನಾ ಈ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.


Published On - 1:35 pm, Mon, 4 May 20