ಕ್ಲಿನಿಕ್​ನಲ್ಲಿ ಭಾರೀ ವಿಸ್ಫೋಟ, 19 ಮಂದಿ ಭಸ್ಮ

|

Updated on: Jul 01, 2020 | 8:46 AM

ಇರಾನ್: ಕ್ಲಿನಿಕ್‌ನಲ್ಲಿ ಅನಿಲ ಸ್ಫೋಟಗೊಂಡು 19 ಜನ ಮೃತಪಟ್ಟಿರುವ ಘಟನೆ ಇರಾನ್‌ನ ತೆಹ್ರಾನ್‌ನಲ್ಲಿರುವ ಕ್ಲಿನಿಕ್‌ನಲ್ಲಿ ನಡೆದಿದೆ. ಸಿನಾ ಅಟ್ಹಾರ್ ಆರೋಗ್ಯ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯಿಂದಾಗಿ ಉಂಟಾದ ಕಪ್ಪು ಹೊಗೆ ಆಕಾಶವನ್ನು ತುಂಬಿದ್ದರಿಂದ ಅಧಿಕಾರಿಗಳು ತಕ್ಷಣವೇ ಪ್ರದೇಶಕ್ಕೆ ವೈದ್ಯಕೀಯ ಘಟಕಗಳನ್ನು ಕಳುಹಿಸಿದರು. ವರದಿಗಳ ಪ್ರಕಾರ, ಅಗ್ನಿಶಾಮಕ ದಳ ಸಿಬ್ಬಂದಿ ಆರು ಮಂದಿಯ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಕ್ಲಿನಿಕ್ನ ನೆಲಮಾಳಿಗೆಯಲ್ಲಿ ಗ್ಯಾಸ್ ಡಬ್ಬಿಗಳು ಬೆಂಕಿಯನ್ನು ಹಿಡಿದಿದ್ದರಿಂದ ಸ್ಫೋಟ ಸಂಭವಿಸಿದ ನಂತರ ಕಟ್ಟಡವು ಬೆಂಕಿಯಿಂದ ಸುಟ್ಟು ಹೋಗಿದೆ. ಸದ್ಯ ಅಗ್ನಿಶಾಮಕ […]

ಕ್ಲಿನಿಕ್​ನಲ್ಲಿ ಭಾರೀ ವಿಸ್ಫೋಟ, 19 ಮಂದಿ ಭಸ್ಮ
Follow us on

ಇರಾನ್: ಕ್ಲಿನಿಕ್‌ನಲ್ಲಿ ಅನಿಲ ಸ್ಫೋಟಗೊಂಡು 19 ಜನ ಮೃತಪಟ್ಟಿರುವ ಘಟನೆ ಇರಾನ್‌ನ ತೆಹ್ರಾನ್‌ನಲ್ಲಿರುವ ಕ್ಲಿನಿಕ್‌ನಲ್ಲಿ ನಡೆದಿದೆ. ಸಿನಾ ಅಟ್ಹಾರ್ ಆರೋಗ್ಯ ಕೇಂದ್ರದಲ್ಲಿ ಸ್ಫೋಟ ಸಂಭವಿಸಿದ್ದು ಘಟನೆಯಿಂದಾಗಿ ಉಂಟಾದ ಕಪ್ಪು ಹೊಗೆ ಆಕಾಶವನ್ನು ತುಂಬಿದ್ದರಿಂದ ಅಧಿಕಾರಿಗಳು ತಕ್ಷಣವೇ ಪ್ರದೇಶಕ್ಕೆ ವೈದ್ಯಕೀಯ ಘಟಕಗಳನ್ನು ಕಳುಹಿಸಿದರು.

ವರದಿಗಳ ಪ್ರಕಾರ, ಅಗ್ನಿಶಾಮಕ ದಳ ಸಿಬ್ಬಂದಿ ಆರು ಮಂದಿಯ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಕ್ಲಿನಿಕ್ನ ನೆಲಮಾಳಿಗೆಯಲ್ಲಿ ಗ್ಯಾಸ್ ಡಬ್ಬಿಗಳು ಬೆಂಕಿಯನ್ನು ಹಿಡಿದಿದ್ದರಿಂದ ಸ್ಫೋಟ ಸಂಭವಿಸಿದ ನಂತರ ಕಟ್ಟಡವು ಬೆಂಕಿಯಿಂದ ಸುಟ್ಟು ಹೋಗಿದೆ. ಸದ್ಯ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ.