Maldives Elections 2024: ಮಾಲ್ಡೀವ್ಸ್ ಸಂಸದೀಯ ಚುನಾವಣೆಯಲ್ಲಿ ಮುಯಿಝು ನೇತೃತ್ವದ ಪಕ್ಷಕ್ಕೆ ಗೆಲುವು

|

Updated on: Apr 22, 2024 | 11:13 AM

ಮಾಲ್ಡೀವ್ಸ್​ನಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಪಕ್ಷ ಗೆಲುವು ಸಾಧಿಸಿದೆ. ಒಟ್ಟು 93 ಕ್ಷೇತ್ರಗಳಲ್ಲಿ ಸಂಸದರನ್ನು ಆಯ್ಕೆ ಮಾಡಲು ಮತದಾನ ನಡೆದಿದೆ. ಮಾಲ್ಡೀವ್ಸ್‌ನಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಭಾರತ ಮತ್ತು ಚೀನಾದ ನೀತಿಗಳ ಮೇಲೆ ನಿಗಾ ಇಡುತ್ತಿರುವ ದೇಶದ ಅಧ್ಯಕ್ಷ ಮುಯಿಝು ಅವರಿಗೆ ಈ ಚುನಾವಣೆಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿತ್ತು.

Maldives Elections 2024: ಮಾಲ್ಡೀವ್ಸ್ ಸಂಸದೀಯ ಚುನಾವಣೆಯಲ್ಲಿ ಮುಯಿಝು ನೇತೃತ್ವದ ಪಕ್ಷಕ್ಕೆ ಗೆಲುವು
ಮೊಹಮ್ಮದ್ ಮುಯಿಝು
Follow us on

ಮಾಲ್ಡೀವ್ಸ್‌(Maldives)ನಲ್ಲಿ ಭಾನುವಾರ ನಡೆದ ಸಂಸತ್ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು(Mohammed Muizzu) ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಬಹುಮತ ಸಾಧಿಸಿದೆ. ಒಟ್ಟು 93 ಕ್ಷೇತ್ರಗಳಲ್ಲಿ ಸಂಸದರನ್ನು ಆಯ್ಕೆ ಮಾಡಲು ಮತದಾನ ನಡೆದಿದೆ. ಮಾಲ್ಡೀವ್ಸ್‌ನಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಭಾರತ ಮತ್ತು ಚೀನಾದ ನೀತಿಗಳ ಮೇಲೆ ನಿಗಾ ಇಡುತ್ತಿರುವ ದೇಶದ ಅಧ್ಯಕ್ಷ ಮುಯಿಝು ಅವರಿಗೆ ಈ ಚುನಾವಣೆಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿತ್ತು.

72.96 ರಷ್ಟು ಮತದಾನವಾಗಿದೆ, ಇದರಲ್ಲಿ 1,04,826 ಪುರುಷರು ಮತ್ತು 1,02,867 ಮಹಿಳೆಯರು ಸೇರಿದ್ದಾರೆ. ಅಂಕಿಅಂಶಗಳ ಪ್ರಕಾರ, 2009 ರಲ್ಲಿ 78.15 ಶೇಕಡಾ, 2014 ರಲ್ಲಿ 78.80 ಶೇಕಡಾ ಮತ್ತು 2019 ರಲ್ಲಿ 81.80 ಶೇಕಡಾ ಜನರು ಮತ ಚಲಾಯಿಸಿದ್ದರು.

ಮುಯಿಝುವಿನ ಈ ಗೆಲುವು ಭಾರತ-ಮಾಲ್ಡೀವ್ಸ್ ಸಂಬಂಧವನ್ನು ಮತ್ತಷ್ಟು ದುರ್ಬಲಗೊಳಿಸಬಹುದು, ಏಕೆಂದರೆ ಕಳೆದ ವರ್ಷ ಅಧಿಕಾರಕ್ಕೆ ಬಂದ ನಂತರ ಅಧ್ಯಕ್ಷ ಮುಯಿಝು ಇಂಡಿಯಾ ಔಟ್ ಎಂಬ ಘೋಷಣೆ ಕೂಗಿದ್ದರು. ಮೂಲಗಳ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಕೇವಲ 12 ಸ್ಥಾನಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸ್ಥಾನಗಳು ಬೇರೆ ಪಕ್ಷಗಳ ಪಾಲಾಗಿದೆ ಎಂದು ತಿಳಿದುಬಂದಿದೆ.

ಮತ್ತಷ್ಟು ಓದಿ: ದ್ವೀಪರಾಷ್ಟ್ರದಿಂದ ಭಾರತೀಯ ಸೇನೆ ಹಿಂತೆಗೆದುಕೊಳ್ಳುವಂತೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಆಗ್ರಹ

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮೊಹಮ್ಮದ್ ಸೋಲಿಹ್ ಅವರನ್ನು ಸೋಲಿಸುವ ಮೂಲಕ ಮುಯಿಝು ಅಧ್ಯಕ್ಷರಾದರು. ಸೊಲಿಹ್ ಅವರ ಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷವು ಪ್ರಸ್ತುತ ಸಂಸತ್ತಿನಲ್ಲಿ ಬಹುಮತವನ್ನು ಹೊಂದಿತ್ತು. ಇದು ಮುಯಿಜ್ಜುಗೆ ಹೊಸ ಬಿಲ್‌ಗಳನ್ನು ಅಂಗೀಕರಿಸಲು ಕಷ್ಟಕರವಾಗಿತ್ತು.

ಅಂತಹ ಪರಿಸ್ಥಿತಿಯಲ್ಲಿ, ಹೊಸ ಕಾನೂನುಗಳನ್ನು ಮಾಡಲು, ಹಾಲಿ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಅವರ ಪಕ್ಷವು ಸಂಸತ್ತಿನ ಚುನಾವಣೆಯಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ