ಭಾರತದ ಧ್ವಜಕ್ಕೆ ಅಗೌರವ, ಕೊನೆಗೂ ಕ್ಷಮೆಯಾಚಿಸಿದ ಅಮಾನತುಗೊಂಡ ಮಾಲ್ಡೀವ್ಸ್ ಸಚಿವೆ ಮರಿಯಮ್
ಮಾಲ್ಡೀವ್ಸ್(Maldives)ನ ಅಮಾನತುಗೊಂಡ ಸಚಿವೆ ಮರಿಯಮ್ ಶಿಯುನಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸುವ ಚಿತ್ರವನ್ನು ಹಂಚಿಕೊಂಡು ನಂತರ ಕ್ಷಮೆಯಾಚಿಸಿದ್ದಾರೆ. ಮರಿಯಮ್ ಶಿಯುನಾ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಡಳಿತ ಪಕ್ಷಕ್ಕೆ ಸೇರಿದವರು.

ಮಾಲ್ಡೀವಿಯನ್ ಸಚಿವರ ಪೋಸ್ಟ್ ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀಕ್ಷ್ಣವಾದ ಪ್ರತಿಕ್ರಿಯೆಗಳನ್ನು ಪಡೆಯಿತು. ಶಿಯುನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಮುಯಿಝುಗೆ ಒತ್ತಾಯಿಸಿದರು. ಗಲಾಟೆಯ ನಂತರ, ಶಿಯುನಾ ಕ್ಷಮೆಯಾಚಿಸುವ ಮೊದಲು ಪೋಸ್ಟ್ ಅನ್ನು ಅಳಿಸಿದ್ದಾರೆ.
ನನ್ನ ಪೋಸ್ಟ್ನಿಂದಾದ ಗೊಂದಲಕ್ಕಾಗಿ ನಾನು ಕ್ಷಮೆಯಚಿಸುತ್ತೇನೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ. 2024ರ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪ ಭೇಟಿ ನಂತರ ಮಾಲ್ಡೀವ್ಸ್ ಸಚಿವರು ನರೇಂದ್ರ ಮೋದಿಯವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿದ ಬಳಿಕ ಕಲಹದ ನಡುವೆ ಈ ಘಟನೆ ನಡೆದಿದೆ.
ಮತ್ತಷ್ಟು ಓದಿ: ಮಾಲ್ಡೀವ್ಸ್ ಸರ್ಕಾರದ ‘ಭಾರತ ವಿರೋಧಿ’ ನಿಲುವಿಗೆ ಅಲ್ಲಿನ ವಿರೋಧ ಪಕ್ಷಗಳು ಕೆಂಡಾಮಂಡಲ
ಈ ಘಟನೆ ಬಳಿಕವೂ ಮಾಲ್ಡೀವ್ಸ್ಗೆ ಭಾರತವು ಪ್ರಮುಖ ಆರ್ಥಿಕ ಪಾಲುದಾರನಾಗಿಯೇ ಉಳಿದಿದೆ. ಆಮದುಗಳ ಪ್ರಮುಖ ಮೂಲವಾಗಿದೆ ಮತ್ತು ದ್ವೀಪ ರಾಷ್ಟ್ರಕ್ಕೆ ಅಕ್ಕಿ ಮತ್ತು ಔಷಧದಂತಹ ಅಗತ್ಯ ಸರಕುಗಳ ಪ್ರಮುಖ ಪೂರೈಕೆದಾರನೂ ಆಗಿದೆ. ಇತ್ತೀಚಿನ ಘಟನೆಗಳು ಮಾಲ್ಡೀವ್ಸ್‌ನಲ್ಲಿ ಭಾರತ ವಿರೋಧಿ ಭಾವನೆ ಹೆಚ್ಚುತ್ತಿದೆ ಎಂದು ಸೂಚಿಸುತ್ತವೆ.
ಮಾಲ್ಡೀವ್ಸ್ ಇತ್ತೀಚೆಗೆ ಅಲ್ಲಿ ನಿಯೋಜಿಸಲಾದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂದಿರುಗಿಸಲು ವಿನಂತಿಸಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:58 am, Mon, 8 April 24