ಮಾಲ್ಡೀವ್ಸ್ ಸರ್ಕಾರದ ‘ಭಾರತ ವಿರೋಧಿ’ ನಿಲುವಿಗೆ ಅಲ್ಲಿನ ವಿರೋಧ ಪಕ್ಷಗಳು ಕೆಂಡಾಮಂಡಲ
ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಮತ್ತು ಡೆಮೋಕ್ರಾಟ್ ಪಕ್ಷ ಅಲ್ಲಿನ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ. ನೆರೆಹೊರೆಯ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ಕಡೆಗಣಿಸುವುದು ಮತ್ತು ಚೀನಾದ ಜತೆಗೆ ಬಾಂಧ್ಯವವನ್ನು ವೃದ್ಧಿಸಿಕೊಳ್ಳುವುದು ದೊಡ್ಡ ಅಪಾಯಕಾರಿಯಾಗಿದೆ. ಇದರಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಾಜಕೀಯ ಮತ್ತು ಮಿಲಿಟರಿ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು
ಮಾಲ್ಡೀವ್ಸ್ (Maldives )ಸಚಿವರು ಮಾಡಿದ ಒಂದು ಟ್ವೀಟ್ ಇದೀಗ ಆ ದೇಶವನ್ನು ಮುಳುಗುವ ಸ್ಥಿತಿಗೆ ತಂದುಬಿಟ್ಟಿದೆ. ಮಾಲ್ಡೀವ್ಸ್ ಸರ್ಕಾರದ ಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ (Narendra MOdi) ಅವರ ವಿರುದ್ಧ ಮಾಡಿದ ಅವಹೇಳನಕಾರಿ ಫೋಸ್ಟ್ ಅಲ್ಲಿನ ಆಡಳಿತವನ್ನು ತಲೆಕೆಳಗೆ ಮಾಡಿದೆ. ಇದೀಗ ಅಲ್ಲಿನವರೇ ಮಾಲ್ಡೀವ್ಸ್ ಸರ್ಕಾರವನ್ನು ವಿರೋಧಿಸುತ್ತಿದ್ದಾರೆ. ಮಾಲ್ಡೀವ್ಸ್‌ನ ಪ್ರಮುಖ ವಿರೋಧ ಪಕ್ಷಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಮತ್ತು ಡೆಮೋಕ್ರಾಟ್ ಪಕ್ಷ ಅಲ್ಲಿನ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ.
ನೆರೆಹೊರೆಯ ರಾಷ್ಟ್ರಗಳ ಜತೆಗಿನ ಸಂಬಂಧವನ್ನು ಕಡೆಗಣಿಸುವುದು ಮತ್ತು ಚೀನಾದ ಜತೆಗೆ ಬಾಂಧ್ಯವವನ್ನು ವೃದ್ಧಿಸಿಕೊಳ್ಳುವುದು ದೊಡ್ಡ ಅಪಾಯಕಾರಿಯಾಗಿದೆ. ಇದರಿಂದ ಹಿಂದೂ ಮಹಾಸಾಗರ ಪ್ರದೇಶದಲ್ಲಿ ರಾಜಕೀಯ ಮತ್ತು ಮಿಲಿಟರಿ ಮೇಲೆ ಪರಿಣಾಮವನ್ನು ಉಂಟು ಮಾಡಬಹುದು ಎಂದು ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು 2023ರ ಚುನಾವಣೆಯಲ್ಲಿ ಭಾರತವನ್ನು ವಿರೋಧಿಸಿ ಗೆದ್ದರು, ಅದು ಮತ ಬ್ಯಾಂಕಿಂಗ್ಗಾಗಿ ಮಾಡಿದ್ದು, ನಂತರ ಭಾರತದ ಪರ ನೀತಿಯನ್ನು ರೂಪಿಸಿದರು. ನಮ್ಮ ದೇಶದ ಜತೆಗೆ ಅಭಿವೃದ್ಧಿ ಸಂಬಂಧವನ್ನು ಭಾರತ ಹೊಂದಿದೆ. ಅಭಿವೃದ್ಧಿ ಪಾಲುದಾರರನ್ನು ದೂರು ಮಾಡುವುದು ಸರಿಯಲ್ಲ, ಅದರಿಂದ ಮಾಲ್ಡೀವ್ಸ್‌ಗೆ ದೊಡ್ಡ ನಷ್ಟ ಉಂಟಾಗಬಹುದು ಎಂದು ಹೇಳಿದ್ದಾರೆ.
ಭಾರತವು ಮಾಲ್ಡೀವ್ಸ್ ಜತೆಗೆ ದೀರ್ಘಾವಧಿಯ ಅಭಿವೃದ್ಧಿ ಸಂಬಂಧವನ್ನು ಹೊಂದಿದೆ. ಹಾಗೂ ಭಾರತ ಮತ್ತು ಮಾಲ್ಡೀವ್ಸ್ ಜತೆಗೆ ದೀರ್ಘಾವಧಿ ಸ್ನೇಹವನ್ನು ಹೊಂದಿದೆ. ಮಾಲ್ಡೀವ್ಸ್ ಸರ್ಕಾರ ವಿದೇಶಿ ನೀತಿಯನ್ನು ಪಾಲಿಸಬೇಕು ಹಾಗೂ ಸರ್ಕಾರವು ಸಾಂಪ್ರದಾಯಿಕವಾಗಿ ಸಂಬಂಧವನ್ನು ಮುಂದುವರಿಸಬೇಕು ಎಂದು ಎರಡು ವಿರೋಧ ಪಕ್ಷಗಳು ಹೇಳಿದೆ.
ಇದನ್ನೂ ಓದಿ:ಮಾಲ್ಡೀವ್ಸ್ ಸರ್ಕಾರದ ಈ ನಿರ್ಧಾರದಿಂದ ಬಾಲಕನ ಪ್ರಾಣವೇ ಹೋಯ್ತು
ಹಿಂದೂ ಮಹಾಸಾಗರದ ಸ್ಥಿರತೆ ಮತ್ತು ಭದ್ರತೆಯು ಮಾಲ್ಡೀವ್ಸ್‌ನ ಸ್ಥಿರತೆ ಮತ್ತು ಭದ್ರತೆಗೆ ಅತ್ಯಗತ್ಯ ಎಂದು ಎಂಡಿಪಿ ಪಕ್ಷದ ಅಧ್ಯಕ್ಷ ಫಯಾಜ್ ಇಸ್ಮಾಯಿಲ್, ಸಂಸತ್ತಿನ ಉಪ ಸ್ಪೀಕರ್ ಅಹ್ಮದ್ ಸಲೀಂ, ಡೆಮಾಕ್ರಟ್ ಪಕ್ಷದ ಮುಖ್ಯಸ್ಥ ಎಂಪಿ ಹಸನ್ ಲತೀಫ್ ಮತ್ತು ಸಂಸದೀಯ ನಾಯಕ ಅಲಿ ಅಜೀಂ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆಗಳನ್ನು ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಭಾರತದ ಲಕ್ಷದ್ವೀಪ ದ್ವೀಪಗಳಿಗೆ ಭೇಟಿ ನೀಡಿದ ನಂತರ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು. ಈ ಹೇಳಿಕೆ ರಾಜತಾಂತ್ರಿಕ ವಿವಾದವನ್ನು ಸೃಷ್ಟಿಸಿತ್ತು. ಹಾಗೂ ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮದಲ್ಲಿ ದೊಡ್ಡ ನಷ್ಟವನ್ನು ಉಂಟು ಮಾಡಿತ್ತು. ಇನ್ನು ಚೀನಾದ ಜತೆಗೆ ಮಾಲ್ಡೀವ್ಸ್ ಸಂಬಂಧವನ್ನು ಬೆಳಸಿಕೊಳ್ಳಲು ಮುಂದಾಗಿದೆ. ಇದು ಭಾರತದ ಕೆಂಗಣ್ಣಿಗೆ ಕಾರಣವಾಗಿದೆ. ಮಾಲ್ಡೀವ್ಸ್‌ನ ಈ ನಡೆಗೆ ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾಲ್ಡೀವ್ಸ್ ಬಾಯ್ಕಾಟ್ ಅಭಿಯಾನ ಕೂಡ ಆರಂಭಿಸಲಾಗಿದೆ.
ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ