ಮಾಲ್ಡೀವ್ಸ್ ಸರ್ಕಾರದ ಈ ನಿರ್ಧಾರದಿಂದ ಬಾಲಕನ ಪ್ರಾಣವೇ ಹೋಯ್ತು
ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಸಂಬಂಧಗಳು ಮೊದಲಿನಂತಿಲ್ಲ, ಮಾಲ್ಡೀವ್ಸ್ ಸಚಿವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಬಳಿಕ ಉಭಯ ದೇಶಗಳ ಸಂಬಂಧ ಹಳಸಿದೆ. ಅಂದಿನಿಂದ ಉದ್ವಿಗ್ನತೆ ನಿರಂತರವಾಗಿ ಹೆಚ್ಚುತ್ತಿದೆ. ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ತಪ್ಪು ನಿರ್ಧಾರದಿಂದ 14 ವರ್ಷದ ಅಮಾಯಕ ಜೀವ ಕಳೆದುಕೊಂಡಿದ್ದಾನೆ.

ಬಾಲಕನಿಗೆ ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದ ಕಾರಣ, ಭಾರತದ ವಿಮಾನದ ಅಗತ್ಯವಿತ್ತು ಆದರೆ ಮಾಲ್ಡೀವ್ಸ್ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆ ಚಿಕಿತ್ಸೆ ಸಿಗದೆ ಬಾಲಕ ಸಾವನ್ನಪ್ಪಿದ್ದಾನೆ. ವೈದ್ಯಕೀಯ ತುರ್ತು ಪರಿಸ್ಥಿತಿ ಸೇರಿದಂತೆ ಇತರೆ ಸಂದರ್ಭದಲ್ಲಿ ಸಹಾಯಕ್ಕೆ ಬರುವಂತೆ ಭಾರತವು ಮಾಲ್ಡೀವ್ಸ್ಗೆ ಎರಡು ನೌಕಾ ಹೆಲಿಕಾಪ್ಟರ್ಗಳು ಮತ್ತು ಒಂದು ಡೋರ್ನಿಯಲ್ ವಿಮಾನವನ್ನು ಒದಗಿಸಿತ್ತು.
ಭಾರತೀಯ ಸೈನಿಕರನ್ನು ವಾಪಸ್ ಕಳುಹಿಸುವ ಮಾಲ್ಡೀವ್ಸ್ ಸರ್ಕಾರದ ಒತ್ತಾಯದಿಂದಾಗಿ ಭಾರತೀಯರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಭಾರತಕ್ಕೆ ಮಾರ್ಚ್ 15 ರೊಳಗೆ ತನ್ನ ಸೈನಿಕರನ್ನು ಹಿಂತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದಾರೆ ಮುಯಿಝು ಕೇಳಿಕೊಂಡಿದ್ದಾರೆ.
ಮತ್ತಷ್ಟು ಓದಿ: Maldives controversy: ಪ್ರಧಾನಿ ಮೋದಿ ಮತ್ತು ಭಾರತೀಯರಿಗೆ ಲೇವಡಿ; ಭಾರತದಿಂದ ತಗಾದೆ; ಮಾಲ್ಡೀವ್ಸ್ನ ಮೂವರು ಸಚಿವರ ತಲೆದಂಡ
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಾತುಕತೆ ಮುಂದುವರೆದಿದೆ ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ. ಬಾಲಕನಿಗೆ ಬ್ರೈನ್ ಟ್ಯೂಮರ್ ಇತ್ತು, ಪಾರ್ಶ್ವವಾಯುವಿಗೆ ಒಳಗಾಗಿದ್ದ ಪರಿಸ್ಥಿತಿ ಚಿಂತಾಜನಕವಾಗಿತ್ತು.ಅವರ ಕುಟುಂಬವು ಅವರನ್ನು ಗಫ್ ಅಲಿಫ್ ವಿಲಿಂಗಿಲಿಯಲ್ಲಿರುವ ಅವರ ಮನೆಯಿಂದ ರಾಜಧಾನಿ ಮಾಲೆಗೆ ಕರೆದೊಯ್ಯಲು ಏರ್ ಆಂಬ್ಯುಲೆನ್ಸ್ ಅನ್ನು ವಿನಂತಿಸಿತು. ತಕ್ಷಣದ ವೈದ್ಯಕೀಯ ಸ್ಥಳಾಂತರ ವ್ಯವಸ್ಥೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ವರದಿಯ ಪ್ರಕಾರ, ಮೃತ ಬಾಲಕನ ತಂದೆ, ಸ್ಟ್ರೋಕ್ ಆದ ತಕ್ಷಣ ಅವನನ್ನು ಮಾಲೆಗೆ ಕರೆದೊಯ್ಯಲು ನಾನು ಐಲ್ಯಾಂಡ್ ಏವಿಯೇಷನ್‌ಗೆ ಕರೆ ಮಾಡಿದ್ದೇನೆ, ಆದರೆ ಅವರು ಪ್ರತಿಕ್ರಿಯಿಸಲಿಲ್ಲ. ಗುರುವಾರ ಬೆಳಗ್ಗೆ 8.30ಕ್ಕೆ ಅವರು ದೂರವಾಣಿ ಕರೆ ಸ್ವೀಕರಿಸಿದ್ದರು. ಬಾಲಕನ ಸಾವಿನ ಬಳಿಕ ಜನರು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ