ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು; ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ

Indian Tourists to Maldives: ಮಾಲ್ಡೀವ್ಸ್ ದೇಶಕ್ಕೆ ಪ್ರವಾಸ ಹೋಗುವ ಭಾರತೀಯರ ಸಂಖ್ಯೆ 2023ಕ್ಕೆ ಹೋಲಿಸಿದರೆ 2024ರಲ್ಲಿ ಗಣನೀಯವಾಗಿ ತಗ್ಗಿದೆ. 2023ರಲ್ಲಿ ಮಾರ್ಚ್ 2ರವರೆಗೆ ಹೋಗಿದ್ದ ಭಾರತೀಯ ಪ್ರವಾಸಿಗರ ಸಂಖ್ಯೆಗೆ ಹೋಲಿಸಿದರೆ 2024ರಲ್ಲಿ ಶೇ. 33ರಷ್ಟು ಕಡಿಮೆ ಆಗಿದೆ. ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಬಗ್ಗೆ ಮಾಲ್ಡೀವ್ಸ್​ನ ಕೆಲ ಸಚಿವರು ಮತ್ತು ಸಂಸದರು ಅವಹೇಳನ ಮಾಡಿದ ಪರಿಣಾಮ ಇದು ಎಂದು ಭಾವಿಸಲಾಗಿದೆ.

ಮಾಲ್ಡೀವ್ಸ್​ಗೆ ಹೋಗೋದು ಬಿಟ್ಟ ಭಾರತೀಯರು; ದ್ವೀಪ ರಾಷ್ಟ್ರದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತ
ಮಾಲ್ಡೀವ್ಸ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2024 | 4:12 PM

ನವದೆಹಲಿ, ಮಾರ್ಚ್ 15: ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತವನ್ನು ಅವಹೇಳನ ಮಾಡಿದ ಪರಿಣಾಮವಾಗಿ ಮಾಲ್ಡೀವ್ಸ್ ದೇಶ ಭಾರತೀಯರ ಪ್ರವಾಸಿಗರಿಂದ ಬಾಯ್ಕಾಟ್ ಅಭಿಯಾನಕ್ಕೆ (Boycott Maldives by Indians) ತುತ್ತಾದಂತಿದೆ. ಭಾರತೀಯ ಸೇನೆಯ ಮೊದಲ ಬ್ಯಾಚು ಮಾಲ್ಡೀವ್ಸ್​ನಿಂದ ಕಾಲ್ತೆಗೆಯುತ್ತಿರುವ ಹೊತ್ತಿನಲ್ಲೇ ಭಾರತೀಯ ಪ್ರವಾಸಿಗರ ಸಂಖ್ಯೆ ಮಾಲ್ಡೀವ್ಸ್​ನಲ್ಲಿ ಇಳಿಮುಖವಾಗುತ್ತಿದೆ. ಪ್ರತೀ ವರ್ಷ ಅತಿಹೆಚ್ಚು ಭಾರತೀಯ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿದ್ದ ಮಾಲ್ಡೀವ್ಸ್ ದೇಶಕ್ಕೆ ಈಗ ಭಾರತೀಯರ ಅನುಪಸ್ಥಿತಿ ಕಾಡುತ್ತಿದೆ. ಭಾರತದಿಂದ ಮಾಲ್ಡೀವ್ಸ್​ಗೆ ಪ್ರವಾಸ ಹೋಗುವವರ ಸಂಖ್ಯೆಯಲ್ಲಿ ಬಹಳ ಕಡಿಮೆ ಆಗಿದೆ. 2023ರಲ್ಲಿ ಮಾಲ್ಡೀವ್ಸ್​ಗೆ ಹೋದ ಪ್ರವಾಸಿಗರಲ್ಲಿ ಭಾರತೀಯರು ಟಾಪ್ ಆಗಿದ್ದರು. 2024ರಲ್ಲಿ ಆರನೇ ಸ್ಥಾನಕ್ಕೆ ಇಳಿದಿದೆ. ಪ್ರವಾಸೋದ್ಯಮವೇ ಪ್ರಮುಖ ಆದಾಯ ಮೂಲವಾಗಿರುವ ಮಾಲ್ಡೀವ್ಸ್​ಗೆ ಇದು ಆತಂಕದ ಮತ್ತು ಸವಾಲಿನ ವಿಚಾರವಾಗಿದೆ.

ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2023ರಲ್ಲಿ 17 ಲಕ್ಷ ಪ್ರವಾಸಿಗರು ಆ ದೇಶಕ್ಕೆ ಭೇಟಿ ನೀಡಿದ್ದರು. ಈ ಪೈಕಿ 2.09 ಲಕ್ಷ ಜನರು ಭಾರತೀಯರೇ ಆಗಿದ್ದರು. ರಷ್ಯಾ ಮತ್ತು ಚೀನಾದ ಪ್ರವಾಸಿಗರು ನಂತರದ ಸ್ಥಾನ ಹೊಂದಿದ್ದರು. 2024ರಲ್ಲಿ ಮಾರ್ಚ್ 2ರವರೆಗೂ ದೊರೆತ ಅಂಕಿ ಅಂಶದ ಪ್ರಕಾರ ಮಾಲ್ಡೀವ್ಸ್​ಗೆ ಪ್ರವಾಸ ಹೋದ ಭಾರತೀಯರ ಸಂಖ್ಯೆಯಲ್ಲಿ ಶೇ. 33ರಷ್ಟು ಇಳಿಮುಖವಾಗಿದೆ.

ಇದನ್ನೂ ಓದಿ: ವೈದ್ಯರಿಗೆ ಗಿಫ್ಟ್, ಉಚಿತ ಟೂರ್ ಪ್ಯಾಕೇಜ್ ಇತ್ಯಾದಿ ಕೊಡುವಂತಿಲ್ಲ; ಫಾರ್ಮಾ ಕಂಪನಿಗಳಿಗೆ ಸರ್ಕಾರ ಲಕ್ಷ್ಮಣರೇಖೆ

2023ರಲ್ಲಿ ಮಾರ್ಚ್ 2ರವರೆಗೆ 41,224 ಭಾರತೀಯರು ಮಾಲ್ಡೀವ್ಸ್​ಗೆ ಪ್ರವಾಸ ಹೋಗಿದ್ದರು. ಈ ವರ್ಷ (2024) ಇದೇ ಅವಧಿಯಲ್ಲಿ ಮಾಲ್ಡೀವ್ಸ್​ಗೆ ತೆರಳಿದ ಭಾರತೀಯರ ಸಂಖ್ಯೆ 27,224 ಎನ್ನಲಾಗಿದೆ.

ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್​ಗೆ ಯಾಕೆ ಮುಖ್ಯ?

ಮಾಲ್ಡೀವ್ಸ್​ನಲ್ಲಿ ಬಿಸಿಲ ಬೇಗೆ ಇರುವ ಅವಧಿಯು ಪೀಕ್ ಸೀಸನ್ ಆಗಿರುವುದಿಲ್ಲ. ಈ ಸಂದರ್ಭದಲ್ಲಿ ಯೂರೋಪ್ ಪ್ರವಾಸಿಗರು ಬರುವುದಿಲ್ಲ. ಇಂಥ ಕಾಲಘಟ್ಟದಲ್ಲಿ ಮಾಲ್ಡೀವ್ಸ್​ಗೆ ಭಾರತೀಯರು ಹೋಗುತ್ತಾರೆ. ಇದು ಅಲ್ಲಿಯ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ಸಿಕ್ಕಂತೆ. ಈಗ ಭಾರತದಿಂದ ಮಾಲ್ಡೀವ್ಸ್​ಗೆ ಹೋಗುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗುತ್ತಿದೆ.

ಇದನ್ನೂ ಓದಿ: ಡಿಎ, ಡಿಆರ್ ಶೇ. 4ರಷ್ಟು ಹೆಚ್ಚಳ; ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಖುಷಿ ಸುದ್ದಿ

ಪ್ರಧಾನಿ ಮೋದಿಗೆ ಅವಹೇಳನ ಮಾಡಿದ ಪರಿಣಾಮ

ಜನವರಿ 6ರಂದು ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿ ವಿಹಾರ ನಡೆಸಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಮಾಲ್ಡೀವ್ಸ್​ನ ಕೆಲ ಸಚಿವರು ಮತ್ತು ಸಂಸದರು ಮೋದಿ ಮತ್ತು ಭಾರತವನ್ನು ಅವಹೇಳಹನ ಮಾಡಿದ್ದರು. ಈ ತಪ್ಪಿಗೆ ಸಚಿವರ ತಲೆದಂಡವಾಯಿತಾದರೂ ಭಾರತೀಯರ ಬಾಯ್ಕಾಟ್ ಅಭಿಯಾನ ಶುರುವಾಯಿತು. ಪರಿಣಾಮವಾಗಿ ರಾತ್ರೋರಾತ್ರಿ ಮಾಲ್ಡೀವ್ಸ್​ಗೆ ಫ್ಲೈಟ್ ಟಿಕೆಟ್ ಬುಕಿಂಗ್​ಗಳು ರದ್ದಾದವು. ಮಾಲ್ಡೀವ್ಸ್​ಗೆ ಪ್ರವಾಸದ ಪ್ಲಾನ್ ಹಾಕಿದ್ದವರು ಪರ್ಯಾಯ ಸ್ಥಳಗಳಿಗೆ ತಮ್ಮ ಪ್ಲಾನ್ ಬದಲಿಸಿದರು. ಇದರ ಬಿಸಿಯನ್ನು ಮಾಲ್ಡೀವ್ಸ್ ಪ್ರವಾಸೋದ್ಯಮ ಈಗ ಅನುಭವಿಸುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ