ಪ್ರಧಾನಿ ಮೋದಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ಪುಟಿನ್, ಉಕ್ರೇನ್ ಯುದ್ಧ ಅಂತ್ಯಕ್ಕೆ ಮೋದಿ ಬಳಿ ಉತ್ತಮ ಪ್ಲ್ಯಾನ್​ಗಳಿವೆ ಎಂದ ರಷ್ಯಾ ಅಧ್ಯಕ್ಷ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಮೋದಿ ಬಳಿ ಶಾಂತಿಯುತ ಪರಿಹಾರಕ್ಕೆ 'ಉತ್ತಮ ಯೋಜನೆಗಳಿವೆ' ಎಂದು ಪುಟಿನ್ ಹೇಳಿದ್ದಾರೆ. ಭಾರತದ ನಿಲುವು ತಟಸ್ಥವಾಗಿದ್ದರೂ, ಸಂವಾದ ಮತ್ತು ರಾಜತಾಂತ್ರಿಕತೆ ಮೂಲಕ ಸಮಸ್ಯೆ ಬಗೆಹರಿಸಲು ಮೋದಿ ಒತ್ತು ನೀಡಿದ್ದಾರೆ. ಯುದ್ಧವನ್ನು ಕೊನೆಗೊಳಿಸಲು ಭಾರತ ಶಾಂತಿ ಪ್ರಯತ್ನಗಳಿಗೆ ಸಿದ್ಧವಿದೆ ಎಂದು ಮೋದಿ ಪುನರುಚ್ಚರಿಸಿದ್ದಾರೆ.

ಪ್ರಧಾನಿ ಮೋದಿ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ಪುಟಿನ್, ಉಕ್ರೇನ್ ಯುದ್ಧ ಅಂತ್ಯಕ್ಕೆ ಮೋದಿ ಬಳಿ ಉತ್ತಮ ಪ್ಲ್ಯಾನ್​ಗಳಿವೆ ಎಂದ ರಷ್ಯಾ ಅಧ್ಯಕ್ಷ
ನರೇಂದ್ರ ಮೋದಿ-ಪುಟಿನ್
Image Credit source: Narendra Modi X Account

Updated on: Oct 02, 2026 | 10:08 AM

ಮಾಸ್ಕೋ, ಅಕ್ಟೋಬರ್ 02: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಧಾನಿ ನರೇಂದ್ರ ಮೋದಿ ಅವರ ಉಕ್ರೇನ್‌ ಯುದ್ಧ ಅಂತ್ಯಗೊಳಿಸುವ ಪ್ರಯತ್ನಗಳನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಮೋದಿ ರಷ್ಯಾ ಜೊತೆ ಉತ್ತಮ ಮತ್ತು ಸ್ನೇಹಪರ ಸಂಬಂಧ ಹೊಂದಿದ್ದರೂ, ಉಕ್ರೇನ್‌ ಸಂಘರ್ಷವನ್ನು ಕೊನೆಗೊಳಿಸುವ ವಿಚಾರವನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದಾರೆ ಎಂದು ಪುಟಿನ್ ಹೇಳಿದ್ದಾರೆ. ಶಾಂತಿಯುತ ಪರಿಹಾರಕ್ಕಾಗಿ ಮೋದಿ ಬಳಿ “ತುಂಬಾ ಉತ್ತಮ ವಉಪಾಯಗಳಿವೆ” ಎಂದು ಅವರು ಹೇಳಿದ್ದಾರೆ.

ಮಾಸ್ಕೋದಲ್ಲಿ ನಡೆದ ವಾಲ್ಡೈ ಚರ್ಚಾ ವೇದಿಕೆಯಲ್ಲಿ ಮಾತನಾಡಿದ ಪುಟಿನ್, ಎರಡೂ ಬದಿಗಳಿಗೆ ಒಪ್ಪಿಗೆಯಾಗುವ ಪರಿಹಾರ ಕಂಡುಕೊಳ್ಳುವಲ್ಲಿ ಮೋದಿ ಆಸಕ್ತಿ ಹೊಂದಿದ್ದಾರೆ ಎಂದು ಹೇಳಿದರು. ಭಾರತದ ನಿಲುವು ತಟಸ್ಥವಾಗಿದ್ದರೂ, ಸಂಘರ್ಷ ಶೀಘ್ರ ಅಂತ್ಯಗೊಳ್ಳಬೇಕು ಎಂಬ ಆಸಕ್ತಿ ಮೋದಿಯವರಿಗಿದೆ ಎಂದು ಪುಟಿನ್ ವಿವರಿಸಿದರು. ಈ ವಿಚಾರದಲ್ಲಿ ಮೋದಿಯವರ ಅಭಿಪ್ರಾಯಗಳಿಗೆ ರಷ್ಯಾ ಕೃತಜ್ಞವಾಗಿದೆ ಎಂದೂ ಹೇಳಿದರು.

ಉಕ್ರೇನ್‌ ವಿಚಾರದಲ್ಲಿ ಮೋದಿಯವರ ನಿಲುವು ಏನು?

ರಷ್ಯಾ-ಉಕ್ರೇನ್‌ ಸಂಘರ್ಷವನ್ನು ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂಬುದು ಭಾರತದ ನಿಲುವಾಗಿದೆ. ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಪುಟಿನ್ ಅವರನ್ನು ಭೇಟಿಯಾದಾಗಲೂ ಮೋದಿ ಇದೇ ಸಂದೇಶವನ್ನು ಪುನರುಚ್ಚರಿಸಿದ್ದರು. ಸಂಘರ್ಷಗಳಿಗೆ ಪರಿಹಾರ ಕಂಡುಕೊಳ್ಳಲು ಭಾರತ ಶಾಂತಿ ಪ್ರಯತ್ನಗಳಿಗೆ ನೆರವಾಗಲು ಸಿದ್ಧವಿದೆ ಎಂದು ಮೋದಿ ಹೇಳಿದ್ದರು.

ಮತ್ತಷ್ಟು ಓದಿ:

ಮನ್ ಕಿ ಬಾತ್: ಸರ್ಜಿಕಲ್ ಸ್ಟ್ರೈಕ್‌ನಿಂದ ಜನಗಣತಿ ತನಕ ಹಲವು ವಿಷಯಗಳ ಬಗ್ಗೆ ಪ್ರಧಾನಿ ಮೋದಿ ಮಾತು

ಮೋದಿ ಅವರು ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆಯಲ್ಲೂ ಯುದ್ಧದ ಬದಲು ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡಿದ್ದಾರೆ. 2022ರಲ್ಲಿ ಯುದ್ಧ ಆರಂಭವಾದ ಬಳಿಕವೂ ಭಾರತ ಇದೇ ನಿಲುವನ್ನು ಮುಂದುವರಿಸಿದೆ.

ಪುಟಿನ್‌ರ ಮತ್ತೊಂದು ಹೇಳಿಕೆ

ಇದೇ ಸಂದರ್ಭದಲ್ಲಿ ಯುರೋಪಿಯನ್ ರಾಷ್ಟ್ರಗಳ ಮೇಲೆ ದಾಳಿ ಮಾಡುವ ಉದ್ದೇಶ ರಷ್ಯಾಕ್ಕೆ ಇಲ್ಲ ಎಂದು ಪುಟಿನ್ ಹೇಳಿದ್ದಾರೆ. ಆದರೆ ರಷ್ಯಾ ಮೇಲೆ ನೇರ ದಾಳಿ ನಡೆದರೆ, ತನ್ನ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪ್ರತಿಕ್ರಿಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆ ಉಕ್ರೇನ್‌ ಸಂಘರ್ಷದ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ರಷ್ಯಾ-ಪಾಶ್ಚಾತ್ಯ ಉದ್ವಿಗ್ನತೆಯ ನಡುವೆ ಬಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us