ಲಂಡನ್ ಸಂಸತ್ತಿಗೆ 15 ಮಂದಿ ಭಾರತೀಯರು ಆಯ್ಕೆ

|

Updated on: Dec 14, 2019 | 6:32 AM

ಲಂಡನ್: ಬ್ರೆಕ್ಸಿಟ್​ ಹಿನ್ನೆಲೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೊಮ್ಮೆ ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ್ದಾರೆ. ಫಲಿತಾಂಶದ ಬಳಿಕ ಮಾತನಾಡಿರೋ ಬೋರಿಸ್ ಜಾನ್ಸನ್, ಬ್ರೆಕ್ಸಿಟ್‌ ಪೂರ್ಣಗೊಳಿಸಲು ಜನಾದೇಶ ಸಿಕ್ಕಿದೆ ಎಂದಿದ್ದಾರೆ. ಅಲ್ಲದೆ ಮುಂದಿನ ತಿಂಗಳೇ ಯುರೋಪಿಯನ್‌ ಒಕ್ಕೂಟದಿಂದ ಬ್ರಿಟನ್‌ನನ್ನು ಹೊರ ತರುತ್ತೇವೆ ಅಂತ ಆಶ್ವಾಸನೆ ನೀಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ. […]

ಲಂಡನ್ ಸಂಸತ್ತಿಗೆ 15 ಮಂದಿ ಭಾರತೀಯರು ಆಯ್ಕೆ
Follow us on

ಲಂಡನ್: ಬ್ರೆಕ್ಸಿಟ್​ ಹಿನ್ನೆಲೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಹಾಲಿ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತೊಮ್ಮೆ ಬ್ರಿಟನ್ ಪ್ರಧಾನಿ ಗದ್ದುಗೆ ಏರಿದ್ದಾರೆ.

ಫಲಿತಾಂಶದ ಬಳಿಕ ಮಾತನಾಡಿರೋ ಬೋರಿಸ್ ಜಾನ್ಸನ್, ಬ್ರೆಕ್ಸಿಟ್‌ ಪೂರ್ಣಗೊಳಿಸಲು ಜನಾದೇಶ ಸಿಕ್ಕಿದೆ ಎಂದಿದ್ದಾರೆ. ಅಲ್ಲದೆ ಮುಂದಿನ ತಿಂಗಳೇ ಯುರೋಪಿಯನ್‌ ಒಕ್ಕೂಟದಿಂದ ಬ್ರಿಟನ್‌ನನ್ನು ಹೊರ ತರುತ್ತೇವೆ ಅಂತ ಆಶ್ವಾಸನೆ ನೀಡಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಅಭೂತಪೂರ್ವ ಗೆಲುವಿಗೆ ಪ್ರಧಾನಿ ಮೋದಿ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.

ಹೌಸ್​ ಆಫ್ ಕಾಮನ್ಸ್:
ಅಂದ್ಹಾಗೆ ಬ್ರಿಟನ್ ಸಂಸತ್​ನ ಕೆಳಮನೆ ಹೌಸ್ ಆಫ್ ಕಾಮನ್ಸ್​ನ ಒಟ್ಟು ಬಲ 650 ಆಗಿದ್ದು, ಮ್ಯಾಜಿಕ್ ನಂಬರ್ 326 ಆಗಿದೆ. ಈ ಪೈಕಿ ಬೋರಿಸ್ ಜಾನ್ಸನ್​ ನೇತೃತ್ವದ ಕನ್ಸರ್ವೇಟಿವ್ ಪಕ್ಷ ಬರೋಬ್ಬರಿ 365 ಕ್ಷೇತ್ರಗಳಲ್ಲಿ ಗೆದ್ದು ಬೀಗಿದೆ. ಬದ್ಧ ವೈರಿ ಲೇಬರ್ ಪಕ್ಷ ಕೇವಲ 203 ಸೀಟು ಗೆದ್ದು ಹೀನಾಯ ಸೋಲು ಅನುಭವಿಸಿದೆ. ಇತರರು 82 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.

ಭಾರತೀಯ ಮೂಲದ ಬ್ರಿಟನ್ ಪ್ರಜೆಗಳ ಜಯಭೇರಿ:
ಬ್ರಿಟನ್ ಚುನಾವಣೆಯಲ್ಲಿ ಕನ್ಸರ್ವೇಟಿವ್‌ ಮತ್ತು ಲೇಬರ್‌ ಪಕ್ಷದಿಂದ 15 ಮಂದಿ ಭಾರತೀಯ ಮೂಲದ ಬ್ರಿಟನ್‌ ಪ್ರಜೆಗಳು ಜಯಭೇರಿ ಬಾರಿಸಿದ್ದಾರೆ. ಕಳೆದ ಸಲ ಹೌಸ್ ಆಫ್ ಕಾಮನ್ಸ್​ಗೆ ಆಯ್ಕೆಯಾಗಿದ್ದ ಭಾರತೀಯ ಮೂಲದ ಎಲ್ಲಾ 12 ಸಂಸದರು ಈ ಬಾರಿಯೂ ಆಯ್ಕೆಯಾಗಿದ್ದಾರೆ. ಜೊತೆಗೆ ಹೊಸದಾಗಿ ಮೂವರು ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಮೂಲಕ ಬ್ರಿಟನ್ ಸಂಸತ್​ಗೆ ಒಟ್ಟು 15 ಮಂದಿ ಭಾರತೀಯರು ಆಯ್ಕೆಯಾಗಿ ಇತಿಹಾಸ ಬರೆದಿದ್ದಾರೆ.

ಬ್ರಿಟನ್​ನಲ್ಲಿ ಭಾರತೀಯರ ರಣಕೇಕೆ:
ಚುನಾವಣೆಯಲ್ಲಿ ಗೆದ್ದ ಪ್ರಮುಖರನ್ನ ನೋಡ್ತಾ ಹೋಗೋದಾದ್ರೆ, ಕನ್ಸರ್ವೇಟಿವ್‌ ಪಕ್ಷದಿಂದ ಕಣಕ್ಕಿಳಿದಿದ್ದ ಪ್ರೀತಿ ಪಟೇಲ್ ಮತ್ತೊಮ್ಮೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇಂಗ್ಲೆಂಡ್​ನಲ್ಲಿ ಗೃಹ ಕಾರ್ಯದರ್ಶಿಯಾದ ಮೊದಲ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರೀತಿ ಪಟೇಲ್ ಪಾತ್ರರಾಗಿದ್ದರು. ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್‌ ಮತ್ತೊಮ್ಮೆ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೊದಲ ಬ್ರಿಟಿಷ್‌ ಸಿಖ್‌ ಮಹಿಳಾ ಸಂಸದೆಯಾಗಿ ಆಯ್ಕೆಯಾಗಿದ್ದ ಪ್ರೀತ್‌ ಕೌರ್‌ ಗಿಲ್, ಈ ಬಾರಿ ಮತ್ತೆ ಗೆದ್ದಿದ್ದಾರೆ. ಇನ್ನು ಬ್ರಿಟನ್‌ನಲ್ಲಿ ಸಿಖ್‌ ಸಾಂಪ್ರದಾಯಿಕ ಪೇಟ ಧರಿಸಿದ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ತನ್‌ಮನ್‌ಜೀತ್‌ ಸಿಂಗ್‌ ಧೇಸಿ ಕೂಡ ಗೆದ್ದಿದ್ದಾರೆ. ಬ್ರಿಟನ್​ನ ಈಲಿಂಗ್‌ ಸೌತ್‌ ಹಾಲ್‌ ಕ್ಷೇತ್ರದಿಂದ ವಿರೇಂದ್ರ ಶರ್ಮಾ ಜಯಭೇರಿ ಬಾರಿಸಿದ್ದಾರೆ. ಮಾಜಿ ಸಂಸದೆ ಕೀತ್‌ ವಾಜ್‌ ಅವರ ಸಹೋದರಿ ವಲೆರೀ ವಾಜ್‌ ಕೂಡ ವಿಜೇತರಾಗಿದ್ದಾರೆ.