Russia Ukraine War: ಉಕ್ರೇನ್​ ವಿರುದ್ಧ ಸಮರ ಸಾರಿದ ರಷ್ಯಾ; ಸೇನಾ ಕಾರ್ಯಾಚರಣೆ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​

ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ಘೋಷಿಸಿದ ಪುತಿನ್​ ನಿರ್ಧಾರವನ್ನು ಯುಎಸ್​ ಅಧ್ಯಕ್ಷ ಜೋ ಬೈಡನ್​ ಖಂಡಿಸಿದ್ದಾರೆ. ಈ ದಾಳಿಯಿಂದ ಉಂಟಾಗುವ ಸಾವು, ಹಾನಿ, ವಿನಾಶಗಳಿಗೆ ರಷ್ಯಾ ಮಾತ್ರ ಹೊಣೆಗಾರನಾಗಿರುತ್ತದೆ ಎಂದಿದ್ದಾರೆ.

Russia Ukraine War: ಉಕ್ರೇನ್​ ವಿರುದ್ಧ ಸಮರ ಸಾರಿದ ರಷ್ಯಾ; ಸೇನಾ ಕಾರ್ಯಾಚರಣೆ ಘೋಷಿಸಿದ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
| Updated By: Lakshmi Hegde

Updated on:Feb 24, 2022 | 1:24 PM

ನಮಗೆ ಉಕ್ರೇನ್​ ಮೇಲೆ ಯುದ್ಧ ಸಾರುವ ಇರಾದೆಯಿಲ್ಲ ಎಂದು ಹೇಳುತ್ತಲೇ ಬಂದಿದ್ದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ (Vladimir Putin)​ ಇಂದು ಉಕ್ರೇನ್​ ವಿರುದ್ಧ ಸೇನಾ ಕಾರ್ಯಾಚರಣೆ ಘೋಷಿಸಿದ್ದಾರೆ. ಟಿವಿ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್​ ಮೇಲೆ ಆಕ್ರಮಣಕ್ಕೆ ಆದೇಶ ನೀಡಿದ್ದಾರೆ. ಉಕ್ರೇನ್ (Ukraine)​ ಮೇಲೆ ಸೇನಾ ಕಾರ್ಯಾಚರಣೆ ನಡೆಸಲಾಗುವುದು. ಹಾಗಂತ ಮಾಸ್ಕೋ ಉಕ್ರೇನ್​ನ್ನು ಅತಿಕ್ರಮಣ ಮಾಡಿಕೊಳ್ಳಲು ಪ್ರಯತ್ನ ಮಾಡುವುದಿಲ್ಲ. ಗಡಿಯಲ್ಲಿ ಉಕ್ರೇನ್​ ನಿಯೋಜಿಸಿರುವ ಸೈನ್ಯವನ್ನು ಹಿಂಪಡೆಯುವಂತೆ ಮಾಡಲು ಮತ್ತು ಉಕ್ರೇನ್​ನಿಂದ ನಮ್ಮ ದೇಶಕ್ಕೆ ಎದುರಾಗಬಹುದಾದ ಅಪಾಯವನ್ನು ತಡೆಯುವುದಕ್ಕೋಸ್ಕರ ಈ ಕಾರ್ಯಾಚರಣೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಉಕ್ರೇನಿಯನ್​ ಸೇನಾಪಡೆಗಳು ಶಸ್ತ್ರಗಳನ್ನು ತ್ಯಜಿಸಿ ಕೂಡಲೇ ವಾಪಸ್​ ಹೋಗದೆ ಇದ್ದರೆ, ರಷ್ಯಾ ಮತ್ತು ಉಕ್ರೇನ್​​ ನಡುವೆ ಘರ್ಷಣೆ ಅನಿವಾರ್ಯವಾಗಲಿದೆ ಎಂದು ಪುತಿನ್ ಹೇಳಿದ್ದಾರೆ. ಹಾಗೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುತಿನ್​ ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ಘೋಷಣೆ ಮಾಡುತ್ತಿದ್ದಂತೆ ಅತ್ತ ಉಕ್ರೇನ್​​ನ ಕೈವ್ ಮತ್ತು ಖಾರ್ಕಿವ್ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಸ್ಫೋಟದ ಶಬ್ದ ಕೇಳಿಬಂದಿದೆ. ಇದರಿಂದಾಗಿ ಜನರು ತೀವ್ರ ಆತಂಕಕ್ಕೆ ಒಳಗಾಗುವಂತಾಯ್ತು ಎಂದು ವರದಿಯಾಗಿದೆ.

ಇನ್ನು ಪುತಿನ್​ ಯುಎಸ್​ ಮತ್ತು ಮೈತ್ರಿ ರಾಷ್ಟ್ರಗಳಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಉಕ್ರೇನ್​​ನ್ನು ನ್ಯಾಟೋ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ (North Atlantic Treaty Organization- NATO )ಕ್ಕೆ ಸೇರ್ಪಡೆಗೊಳಿಸಬಾರದು ಮತ್ತು ಮಾಸ್ಕೋ ಭದ್ರತಾ ಖಾತರಿ ಭರವಸೆ ನೀಡಬೇಕು ಎಂಬ ರಷ್ಯಾದ ಮನವಿಯನ್ನು ಯುಎಸ್​ ಮತ್ತು ಇತರ ಮೈತ್ರಿ ರಾಷ್ಟ್ರಗಳು ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ, ಹಾಗೇ, ರಷ್ಯಾ-ಉಕ್ರೇನ್​ ಮಧ್ಯೆ ಹೊರಗಿನವರು ಯಾರೇ ಹಸ್ತಕ್ಷೇಪ ಮಾಡಿದರೂ ನಾವು ಸುಮ್ಮನಿರುವುದಿಲ್ಲ. ಇತಹಾಸ ಕಂಡರಿಯದ ಪರಿಣಾಮವನ್ನು ಅವರು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಯುಎಸ್​ ಪ್ರತಿಕ್ರಿಯೆ: ಉಕ್ರೇನ್​ ಮೇಲೆ ಸೇನಾ ಕಾರ್ಯಾಚರಣೆ ಘೋಷಿಸಿದ ಪುತಿನ್​ ನಿರ್ಧಾರವನ್ನು ಯುಎಸ್​ ಅಧ್ಯಕ್ಷ ಜೋ ಬೈಡನ್​ ಖಂಡಿಸಿದ್ದಾರೆ. ಈ ದಾಳಿಯಿಂದ ಉಂಟಾಗುವ ಸಾವು, ಹಾನಿ, ವಿನಾಶಗಳಿಗೆ ರಷ್ಯಾ ಮಾತ್ರ ಹೊಣೆಗಾರನಾಗಿರುತ್ತದೆ. ಯುಎಸ್ ಹಾಗೂ ಅದರ ಮೈತ್ರಿ ರಾಷ್ಟ್ರಗಳು ಒಗ್ಗಟ್ಟಿನಿಂದ ಮತ್ತು ನಿರ್ಣಾಯಕವಾಗಿ ವರ್ತಿಸುತ್ತಿವೆ.  ಯುದ್ಧ ನಡೆದರೆ ಅದರ ಸಂಪೂರ್ಣ ಹೊಣೆ ರಷ್ಯಾದ್ದೇ ಆಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಇಡೀ ವಿಶ್ವದ ಜನರ ಪ್ರಾರ್ಥನೆ ಉಕ್ರೇನ್​ನೊಂದಿಗೆ ಇದೆ. ಉಕ್ರೇನ್​ ಜನರು ರಷ್ಯಾ ಸೇನಾ ಪಡೆಗಳಿಂದ ಅಪ್ರಚೋದಿತ ಮತ್ತು ಅನ್ಯಾಯಯುತ ದಾಳಿಗೆ ಒಳಗಾಗುತ್ತಿದ್ದಾರೆ.   ಪುತಿನ್​ ಕೊನೆಗೂ ಯುದ್ಧದ ದಾರಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದು ಪೂರ್ವ ಯೋಜಿತವಾಗಿದೆ. ಈ ಯುದ್ಧ ಖಂಡಿತವಾಗಿಯೂ ಜೀವ ಹಾನಿ ಉಂಟು ಮಾಡುತ್ತದೆ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಆಹಾರವನ್ನು ನುಂಗಲು ತೊಂದರೆಯಾಗುವುದು ಕೂಡ ಶ್ವಾಸಕೋಶದ ಕ್ಯಾನ್ಸರ್​ ಲಕ್ಷಣವಾಗಿರಬಹುದು; ಇಲ್ಲಿದೆ ತಜ್ಞರ ಸಲಹೆ

Published On - 9:22 am, Thu, 24 February 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ