ಮಾಸ್ಕೋ: ಮಹಾಮಾರಿ ಕೊರೊನಾ ವೈರೆಸ್ ಗುಪ್ತಗಾಮಿನಿಯಾಗಿ ಎಲ್ಲಾ ಕಡೆ ಸಂಚರಿಸಿ, ಮಾನವನ ದೇಹ ಹೊಕ್ಕುತ್ತಿದೆ. ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಸ್ಟೀನ್ಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಕುರಿತು ಖುದ್ದು ಮಿಖಾಯಿಲ್ ಮಿಸ್ಟೀನ್ ಮಾಹಿತಿ ನೀಡಿದ್ದಾರೆ.
ಸೋಂಕು ದೃಢವಾಗುತ್ತಿದ್ದಂತೆ ಮಾಹಿತಿ ನೀಡಿದ ಮಿಖಾಯಿಲ್ ಮಿಸ್ಟೀನ್, ತಮ್ಮ ಕ್ಯಾಬಿನೆಟ್ ಸಚಿವರ ಆರೋಗ್ಯದ ಹಿತ ದೃಷ್ಟಿಯಿಂದ ಸ್ವಯಂ ದಿಗ್ಬಂಧನಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟನ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿರುವ ಮಿಖಾಯಿಲ್ ಮಿಶುಸ್ಟಿನ್, ವೈದ್ಯರ ಸಲಹೆ ಮೇರೆಗೆ ಸ್ವಯಂ ದಿಗ್ಬಂಧನಕ್ಕೆ ಗುರಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದಾರೆ.