
ಕೈವ್, ಆಗಸ್ಟ್ 29: ಉಕ್ರೇನ್‌ನ ರಾಜಧಾನಿ ಕೈವ್‌ಗೆ ಸಮೀಪದಲ್ಲಿರುವ ಬುಚಾ ಜಿಲ್ಲೆಯ ಮೇಲೆ ರಷ್ಯಾ (Russia War) ಇಂದು ಭೀಕರ ದಾಳಿ ನಡೆಸಿದ್ದು, 37 ಜನರು ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾದೇಶಿಕ ಸೇನಾ ಆಡಳಿತದ ಮುಖ್ಯಸ್ಥ ತೈಮುರ್ ಟ್ಕಾಚೆಂಕೊ ಮಾತನಾಡಿ, ಈ ದಾಳಿಯಿಂದ ಭಾರಿ ಬೆಂಕಿ ಕಾಣಿಸಿಕೊಂಡು ಮನೆಗಳು ಹಾಗೂ ಹೋಟೆಲ್ಗಳಿಗೆ ಆವರಿಸಿದೆ. ಈ ದಾಳಿಯಲ್ಲಿ 50 ವಸತಿ ಕಟ್ಟಡಗಳು ತೀವ್ರವಾಗಿ ಹಾನಿಗೊಳಗಾಗಿವೆ ಎಂದು ತಿಳಿಸಿದ್ದಾರೆ.
ವಸತಿ ಪ್ರದೇಶಗಳು ಮತ್ತು ಮನೆಗಳ ಬಳಿ ಯುದ್ಧಸಾಮಗ್ರಿಗಳನ್ನು ಸಂಗ್ರಹಿಸಿಡುವುದನ್ನು ಕಾನೂನು ನಿಷೇಧಿಸಿದೆ. ಈ ನಿಯಮ ಮೀರಿ ಮದ್ದುಗುಂಡು ಸಂಗ್ರಹಿಸಿಟ್ಟ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕ್ರಿಮಿನಲ್ ತನಿಖೆಗೆ ಆದೇಶಿಸಲಾಗಿದೆ ಎಂದು ಝೆಲೆನ್‌ಸ್ಕಿ ತಿಳಿಸಿದ್ದಾರೆ.
Since yesterday evening and throughout the day today, I have been receiving reports on the situation in the village of Myla, Kyiv region, where detonation began following a Russian strike. A terrible situation and terrible negligence on the part of those who stored explosives… pic.twitter.com/YyRpBxQ8Kz
— Volodymyr Zelenskyy / Володимир Зеленський (@ZelenskyyUa) August 29, 2026
ದಾಳಿಯ ರಭಸಕ್ಕೆ ಗೋದಾಮಿನಲ್ಲಿದ್ದ ಮದ್ದುಗುಂಡುಗಳು ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿದ್ದು, ಈ ಬೆಂಕಿ ಸುತ್ತಮುತ್ತಲಿನ ಮನೆಗಳಿಗೆ ಆವರಿಸಿದೆ. ಈ ಘಟನೆಯಲ್ಲಿ 50ಕ್ಕೂ ಹೆಚ್ಚು ವಸತಿ ಕಟ್ಟಡಗಳು ಮತ್ತು ವೃದ್ಧಾಶ್ರಮವೊಂದು ತೀವ್ರವಾಗಿ ಹಾನಿಗೊಳಗಾಗಿದೆ.
ಇದನ್ನೂ ಓದಿ: ರಷ್ಯಾದ ತೈಲ ಕೇಂದ್ರದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮಗು ಸೇರಿ 13 ಜನ ಸಾವು
ವಸತಿ ಪ್ರದೇಶಗಳ ಬಳಿ ಯುದ್ಧಸಾಮಗ್ರಿ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸಿಡುವುದನ್ನು ಉಕ್ರೇನ್ ಕಾನೂನು ನಿಷೇಧಿಸಿದೆ. ಈ ನಿಯಮವನ್ನು ಉಲ್ಲಂಘಿಸಿ ವಸತಿ ಪ್ರದೇಶದ ಬಳಿ ಗೋದಾಮು ನಿರ್ಮಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ
ದಾಳಿಯಿಂದ ವೃದ್ಧರು ಮತ್ತು ವಿಕಲಚೇತನರ ಆರೈಕೆ ಕೇಂದ್ರಕ್ಕೂ ಹಾನಿಯಾಗಿದೆ. ಇದುವರೆಗೆ 370ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ತೆರವು ಕಾರ್ಯಾಚರಣೆ ಮುಂದುವರಿದಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಪೂರ್ಣಪ್ರಮಾಣದ ಯುದ್ಧ ಆರಂಭವಾಗಿ ನಾಲ್ಕೂವರೆ ವರ್ಷಗಳಿಗಿಂತಲೂ ಹೆಚ್ಚು ಸಮಯ ಕಳೆದಿದ್ದು, ಕಳೆದ 3 ದಿನಗಳಿಂದ ಕೈವ್‌ನಲ್ಲಿ ಸತತವಾಗಿ ವೈಮಾನಿಕ ದಾಳಿಗಳು ನಡೆಯುತ್ತಿವೆ. ಇದರಿಂದಾಗಿ ಸಾರ್ವಜನಿಕ ಜೀವನ ಮತ್ತು ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ.
ಕಳೆದ ಮೂರು ದಿನಗಳಿಂದ ಕೈವ್ ನಗರದ ಮೇಲೆ ರಷ್ಯಾ ಸತತವಾಗಿ ವೈಮಾನಿಕ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿದ್ದು, ಸಾರ್ವಜನಿಕ ಜೀವನ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 pm, Sat, 29 August 26