AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದ ತೈಲ ಕೇಂದ್ರದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮಗು ಸೇರಿ 13 ಜನ ಸಾವು

ಯುದ್ಧ ಆರಂಭವಾಗಿ 4 ವರ್ಷಗಳಲ್ಲೇ ಅತ್ಯಂತ ಭೀಕರ ಹಾಗೂ ಮಾರಕ ಡ್ರೋನ್ ದಾಳಿಯನ್ನು ರಷ್ಯಾದ ಭೂಭಾಗದ ಮೇಲೆ ಉಕ್ರೇನ್ ನಡೆಸಿದೆ. ಈ ಭೀಕರ ದಾಳಿಯಲ್ಲಿ ರಷ್ಯಾದ ಕೇಂದ್ರ ಪ್ರಾಂತ್ಯವಾದ ತಾತರ್‌ಸ್ತಾನ್‌ನಲ್ಲಿ ಮಗು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಉಕ್ರೇನ್ ಗಡಿಯಿಂದ 1,000 ಕಿ.ಮೀ.ಗೂ (620 ಮೈಲಿ) ಹೆಚ್ಚು ದೂರದಲ್ಲಿರುವ ನಿಜ್ನೆಕಾಮ್ಸ್ಕ್ ಎಂಬ ಕೈಗಾರಿಕಾ ನಗರದ ಪ್ರಮುಖ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿರುವುದಾಗಿ ಉಕ್ರೇನ್ ದೃಢಪಡಿಸಿದೆ.

ರಷ್ಯಾದ ತೈಲ ಕೇಂದ್ರದ ಮೇಲೆ ಉಕ್ರೇನ್ ಡ್ರೋನ್ ದಾಳಿ; ಮಗು ಸೇರಿ 13 ಜನ ಸಾವು
Ukraine AttackImage Credit source: AP
ಸುಷ್ಮಾ ಚಕ್ರೆ
|

Updated on: Aug 10, 2026 | 6:01 PM

Share

ಮೊಸ್ಕೋ, ಆಗಸ್ಟ್ 10: ರಷ್ಯಾದ ತಾತರ್‌ಸ್ತಾನ್ (Tatarstan) ಪ್ರದೇಶದ ನಿಜ್ನೆಕಾಮ್ಸ್ಕ್ ನಗರದ ಮೇಲೆ ಇಂದು ಉಕ್ರೇನ್ (Ukraine) ನಡೆಸಿದ ಡ್ರೋನ್ ದಾಳಿಯಲ್ಲಿ ಮಗು ಸೇರಿದಂತೆ 13 ಜನರು ಮೃತಪಟ್ಟಿದ್ದು, 75 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾದ (Russia) ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯ ಕುರಿತು ಉಕ್ರೇನ್ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾದ ಈ 4 ವರ್ಷಗಳಲ್ಲಿ ರಷ್ಯಾದ ಮೇಲೆ ಉಕ್ರೇನ್ ನಡೆಸಿದ ಅತಿ ಭೀಕರ ದಾಳಿ ಇದು ಎನ್ನಲಾಗುತ್ತಿದೆ.

ತೈಲ ಸಂಸ್ಕರಣಾಗಾರಗಳು ಸೇರಿದಂತೆ ರಷ್ಯಾದ ಒಳಗಿರುವ ಪ್ರಮುಖ ಗುರಿಗಳ ಮೇಲೆ ಉಕ್ರೇನ್ ನಡೆಸುತ್ತಿರುವ ದೀರ್ಘ ಶ್ರೇಣಿಯ ಡ್ರೋನ್ ದಾಳಿಗಳ ಸರಣಿಯಲ್ಲಿ ಇದು ಅತ್ಯಂತ ಭೀಕರ ದಾಳಿಯಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸಂಧಾನಕ್ಕೆ ಒಪ್ಪಿಸಲು ಮತ್ತು 4 ವರ್ಷಕ್ಕೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಈ ಯುದ್ಧವನ್ನು ಅಂತ್ಯಗೊಳಿಸಲು ಈ ಮಾದರಿಯ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಈ ವರ್ಷ ಎರಡೂ ದೇಶಗಳು ದೀರ್ಘ ಶ್ರೇಣಿಯ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿದ್ದು, ನಾಗರಿಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಉಕ್ರೇನ್ ಬಳಿ ಕಪ್ಪು ಸಮುದ್ರದ ಬಂದರಿನಲ್ಲಿ ದಾಳಿ; ಹಡಗಿನಲ್ಲಿ ಸಿಲುಕಿದ 13 ಭಾರತೀಯ ನಾವಿಕರು

ನಿಜ್ನೆಕಾಮ್ಸ್ಕ್ ಮೇಲಿನ ದಾಳಿಯಲ್ಲಿ ಈವರೆಗೆ 13 ಜನರು ಮೃತಪಟ್ಟಿರುವುದನ್ನು ಪ್ರಾದೇಶಿಕ ಪತ್ರಿಕಾ ಕಚೇರಿ ಇಂದು ಪತ್ರಿಕಾ ಪ್ರಕಟಣೆಯಲ್ಲಿ ದೃಢಪಡಿಸಿದೆ. ಈ ಘಟನೆಯಲ್ಲಿ 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಅವರಲ್ಲಿ 21 ಜನರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ.

ತೈಲ ಸಮೃದ್ಧ ಪ್ರದೇಶಕ್ಕೆ ಹೊಡೆತ:

ರಷ್ಯಾದ ತಾತರ್‌ಸ್ತಾನ್ ಪ್ರಾಂತ್ಯವು ಅಪಾರ ಇಂಧನ ಸಂಪನ್ಮೂಲಗಳನ್ನು ಹೊಂದಿದ್ದು, ಬೃಹತ್ ತೈಲ ಸಂಸ್ಕರಣಾಗಾರಗಳಿಗೆ ಹೆಸರುವಾಸಿಯಾಗಿದೆ. ರಷ್ಯಾದ ಆರ್ಥಿಕತೆಗೆ ಹೊಡೆತ ನೀಡಲು ಉಕ್ರೇನ್ ನಿರಂತರವಾಗಿ ಈ ಭಾಗದ ಮೇಲೆಯೇ ಪ್ರತೀಕಾರದ ದಾಳಿಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತೀಯರ ಸಾವು, ನಾಪತ್ತೆ: ಬಾಧಿತ ಕುಟುಂಬಗಳ ನೆರವಿಗೆ ನೋಡಲ್ ಅಧಿಕಾರಿ ನೇಮಕಕ್ಕೆ ಸುಪ್ರೀಂ ಆದೇಶ

ಇತ್ತೀಚಿನ ತಿಂಗಳುಗಳಲ್ಲಿ ಉಕ್ರೇನ್ ಪ್ರತಿದಿನವೂ ರಷ್ಯಾದ ತೈಲ ಸ್ಥಾವರಗಳ ಮೇಲೆ ಸುಧಾರಿತ ಡ್ರೋನ್‌ಗಳ ಮೂಲಕ ದಾಳಿ ನಡೆಸುತ್ತಿದೆ. ಈ ದಾಳಿಗಳಿಂದಾಗಿ ರಷ್ಯಾದಲ್ಲಿ ಇಂಧನ ಕೊರತೆ ಉಂಟಾಗಿದ್ದು, ತೈಲ ಸಂಸ್ಕರಣಾ ಸಾಮರ್ಥ್ಯ ಕ್ಷೀಣಿಸಿದೆ. ಉಕ್ರೇನ್ ಗಡಿಯಿಂದ ಸುಮಾರು 1,200 ಕಿಲೋಮೀಟರ್ ದೂರದಲ್ಲಿರುವ ನಿಜ್ನೆಕಾಮ್ಸ್ಕ್ ನಗರವು ಸುಮಾರು 2.4 ಲಕ್ಷ ಜನಸಂಖ್ಯೆಯನ್ನು ಹೊಂದಿದೆ.

ಉಕ್ರೇನ್ ಸ್ವದೇಶಿ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿದ ದೀರ್ಘ ಶ್ರೇಣಿಯ ಡ್ರೋನ್‌ಗಳು ಈಗ ರಷ್ಯಾದ ಗಡಿಯಿಂದ 2,000 ಕಿ.ಮೀ. ದೂರದಲ್ಲಿರುವ ಸೈಬೀರಿಯಾ ಪ್ರದೇಶದವರೆಗೂ ತಲುಪುತ್ತಿವೆ. ನಾವು ರಷ್ಯಾದ ಪ್ರತಿಯೊಂದು ದಾಳಿಗೂ ಸೂಕ್ತವಾದ ಪ್ರತ್ಯುತ್ತರ ನೀಡುತ್ತಿದ್ದೇವೆ. ರಷ್ಯಾ ಆರಂಭಿಸಿದ ಈ ಯುದ್ಧದ ಬಿಸಿ ಈಗ ಅವರ ಮನೆಗಳಿಗೇ ತಟ್ಟುತ್ತಿದೆ” ಎಂದು ಝೆಲೆನ್ಸ್ಕಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇನ್ನೊಂದೆಡೆ, ರಷ್ಯಾ ಕೂಡ ಉಕ್ರೇನ್ ನಗರಗಳ ಮೇಲೆ ಕ್ಷಿಪಣಿಗಳು, ಗ್ಲೈಡ್ ಬಾಂಬ್‌ಗಳು ಮತ್ತು ಡ್ರೋನ್‌ಗಳ ಮೂಲಕ ನಿರಂತರ ವಾಯು ದಾಳಿಗಳನ್ನು ಮುಂದುವರಿಸಿದೆ. ಮಧ್ಯ ಉಕ್ರೇನ್‌ನ ಡ್ನಿಪ್ರೊ ಪ್ರದೇಶದಲ್ಲಿದ್ದ ವಿಶ್ವ ಆರೋಗ್ಯ ಸಂಸ್ಥೆಯ (WHO) ಉಗ್ರಾಣದ ಮೇಲೆ ರಷ್ಯಾ 24 ಗಂಟೆಗಳಲ್ಲಿ 2 ಬಾರಿ ದಾಳಿ ನಡೆಸಿದ್ದು, ಗಡಿ ಭಾಗದ ಆಸ್ಪತ್ರೆಗಳಿಗೆ ಸರಬರಾಜು ಮಾಡಲು ಇರಿಸಲಾಗಿದ್ದ 4.1 ಕೋಟಿ ರೂ. ಮೌಲ್ಯದ ತುರ್ತು ವೈದ್ಯಕೀಯ ಸಾಮಗ್ರಿಗಳು ಭಸ್ಮವಾಗಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಬೆಂಗಳೂರಲ್ಲಿ ಅಬ್ಬರಿಸಿದ ವರುಣ: ಕೆರೆಗಳಂತಾದ ರಸ್ತೆಗಳು; ಸವಾರರು ಪರದಾಟ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಕಾವೇರಿ ನೀರು ವಿವಾದ: ತಮಿಳುನಾಡು ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಬಿಡದಿ ಟೌನ್​ಶಿಪ್​ ಯೋಜನೆಯ ಹಿಂದಿನ ಉದ್ದೇಶ ಏನು? ಸಿಎಂಗೆ ದೇವೇಗೌಡ ಪ್ರಶ್ನೆ
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸಂಪುಟದಿಂದ ವಜಾಕ್ಕೆ ಆಗ್ರಹಗಳ ಮಧ್ಯೆ ಸಚಿವ ನಾಗೇಂದ್ರಗೆ ಬಿಗ್ ರಿಲೀಫ್​
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಸ್ಟಾರ್ ಹೋಟೆಲ್​​​​​ ಬೆನ್ನಲ್ಲೇ ಕಾಸ್ಮೆಟಿಕ್ಸ್ ಅಂಗಡಿಗಳ ಮೇಲೆ ದಾಳಿ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಬೆಂಗಳೂರಲ್ಲಿ 105 ಮಂದಿ ಬಾಂಗ್ಲಾದೇಶದ ಅಕ್ರಮ ವಲಸಿಗರು ಪತ್ತೆ
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ಪ್ರಾಯಶ್ಚಿತ್ತ ಯಾತ್ರೆ ಅನ್ನೋರಿಗೆ ದೇವೇಗೌಡರಿಂದ ತಿರುಗೇಟು!
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್ ಸೇರಿ 6 ಆರೋಪಿಗಳು ವಿಚಾರಣೆಗೆ ಹಾಜರು
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಶಿವಗಂಗೆ ಬೆಟ್ಟದಲ್ಲಿ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್!
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ
ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹರ್ ಘರ್ ತಿರಂಗಾ ಯಾತ್ರೆ