AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಜಕ್ಕೂ ಮಂಜು-ಕಿರಣ್ ಬಿಗ್ ಬಾಸ್​​ನಿಂದ ಹೊರಹೋದ್ರಾ? ಇಲ್ಲಿದೆ ವಿವರ

‘ಬಿಗ್ ಬಾಸ್ ಕನ್ನಡ 13’ರ ಎರಡನೇ ವಾರದಲ್ಲಿ ವೋಟಿಂಗ್ ಲೈನ್ ಇಲ್ಲದಿದ್ದರೂ ಮಂಜು ಹಾಗೂ ಕಿರಣ್ ಎಲಿಮಿನೇಟ್ ಆಗಿರುವುದು ಪ್ರೇಕ್ಷಕರಿಗೆ ತೀವ್ರ ಅಚ್ಚರಿ ಮೂಡಿಸಿದೆ. ಇದು ನಿಜವಾದ ಎಲಿಮಿನೇಷನ್ ಅಥವಾ ಸೀಕ್ರೆಟ್ ರೂಮ್ ಪ್ರ್ಯಾಂಕ್ ಎನ್ನುವ ಚರ್ಚೆ ಶುರುವಾಗಿದ್ದು, ಶೀಘ್ರದಲ್ಲೇ ಸತ್ಯಾಸತ್ಯತೆ ಸ್ಪಷ್ಟವಾಗಲಿದೆ.

ನಿಜಕ್ಕೂ ಮಂಜು-ಕಿರಣ್ ಬಿಗ್ ಬಾಸ್​​ನಿಂದ ಹೊರಹೋದ್ರಾ? ಇಲ್ಲಿದೆ ವಿವರ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Sep 21, 2026 | 7:36 AM

Share

ಮುಖ್ಯಾಂಶಗಳು

  • ವೋಟಿಂಗ್ ಇಲ್ಲದೆ ಮಂಜು-ಕಿರಣ್ ಔಟ್
  • ಎಲಿಮಿನೇಷನ್​ನಲ್ಲಿ ಶಾಕಿಂಗ್ ಟ್ವಿಸ್ಟ್
  • ಸೀಕ್ರೆಟ್ ರೂಮ್‌ನಲ್ಲಿ ಪ್ರ್ಯಾಂಕ್ ಎಲಿಮಿನೇಷನ್ ಸ್ಪರ್ಧಿಗಳು?

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಎರಡನೇ ವಾರದಲ್ಲಿ ಅಚ್ಚರಿಯ ಎಲಿಮಿನೇಷನ್ ನಡೆದಿದೆ. ಅಗ್ನಿಪರೀಕ್ಷೆಯ ಸ್ಪರ್ಧಿಗಳು ಕಿರಿಕ್ ಮಾಡಿಕೊಂಡಿದ್ದು, ಇದು ಅವರಿಗೆ ತುಂಬಾನೇ ದೊಡ್ಡ ನಷ್ಟವನ್ನು ಉಂಟು ಮಾಡಿದೆ. ಹೌದು, ಮಂಜು, ಕಿರಣ್, ಲಿಖಿತ್ ಹಾಗೂ ಧನುಷ್ ಕೂಗಾಟ ನಡೆಸಿ, ಅರಚಾಟ ನಡೆಸಿ ಎಲ್ಲರಿಗೂ ಇರಿಟೇಷನ್ ಮಾಡಿದರು. ಈ ವಾರ ಯಾವುದೇ ವೋಟಿಂಗ್ ಲೈನ್ ಇಲ್ಲದಿದ್ದರೂ ಮಂಜು ಹಾಗೂ ಕಿರಣ್ ಎಲಿಮಿನೇಟ್ ಆಗಿದ್ದಾರೆ. ಇವರು ನಿಜಕ್ಕೂ ಎಲಿಮಿನೇಟ್ ಆದರೇ ಎನ್ನುವುದು ಸದ್ಯದ ಪ್ರಶ್ನೆ.

‘ಬಿಗ್ ಬಾಸ್’ನಲ್ಲಿ ಜನರ ವೋಟಿಂಗ್ ಇಲ್ಲದೆ ಎಲಿಮಿನೇಷನ್ ಮಾಡಿದ ಉದಾಹರಣೆಗಳು ಕಡಿಮೆ. ಆದರೆ, ಭಾನುವಾರ (ಸೆಪ್ಟೆಂಬರ್ 21) ಒಂದು ಅಪರೂಪದ ಘಟನೆ ನಡೆದಿದೆ. ನಾಮಿನೇಟ್ ಆಗಿದ್ದ ಸದಸ್ಯರ ಪೈಕಿ ಮಂಜು ಹಾಗೂ ಕಿರಣ್ ಅವರನ್ನು ಮನೆಯಿಂದ ಕಳುಹಿಸಲಾಗಿದೆ. ಇದು ಪ್ರ್ಯಾಂಕ್ ಎಲಿಮಿನೇಷನ್ ಇರಬಹುದು ಎನ್ನಲಾಗಿದೆ.

ಸಾಮಾನ್ಯವಾಗಿ ಎಲಿಮಿನೇಟ್ ಆದ ಬಳಿಕ ಎಲಿಮಿನೇಟ್ ಆದವರನ್ನು ವೇದಿಕೆ ಮೇಲೆ ಕರೆದು ಮಾತನಾಡಿಸಲಾಗುತ್ತದೆ. ಅಷ್ಟೇ ಅಲ್ಲ, ಇನ್​​ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಹಾಕಲಾಗುತ್ತದೆ. ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ಹೀಗಾಗಿ, ಅವರಿಬ್ಬರನ್ನು ಸೀಕ್ರೆಟ್​ ರೂಂನಲ್ಲಿ ಇಟ್ಟಿರುವ ಸಾಧ್ಯತೆ ದಟ್ಟವಾಗಿದೆ. ಇಂದು ಅದು ಸ್ಪಷ್ಟವಾಗಲಿದೆ.

ಇದನ್ನೂ ಓದಿ: ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಬೋಲ್ಡ್, ಬಿಗ್ ಬಾಸ್‌ನಲ್ಲಿ ಸೈಲೆಂಟ್; ಸೌಂದರ್ಯಾ ಶೆಟ್ಟಿ ನಡೆಗೆ ಫ್ಯಾನ್ಸ್ ಅಚ್ಚರಿ ಕಳೆದ ಸೀಸನ್ ಅಲ್ಲಿ ರಕ್ಷಿತಾ ಹಾಗೂ ಧ್ರುವಂತ್ ಅವರನ್ನು ಒಂದು ವಾರಗಳ ಕಾಲ ಸೀಕ್ರೆಟ್​ ರೂಂನಲ್ಲಿ ಇರಿಸಲಾಗಿತ್ತು. ಆದರೆ, ಈ ಬಾರಿ ಅಷ್ಟೆಲ್ಲ ದಿನ ಇವರನ್ನು ಸೀಕ್ರೆಟ್ ರೂಂನಲ್ಲಿ ಇರಿಸೋದು ಅನುಮಾನ ಎಂದು ಹೇಳಲಾಗುತ್ತಾ ಇದೆ. ಇನ್ನು, ಕೆಲವು ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:35 am, Mon, 21 September 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಎವರೆಸ್ಟ್ ಶಿಖರದ ಮೇಲೆ ಕನ್ನಡ ಧ್ವಜ ಹಾರಿಸಿ ಇತಿಹಾಸ ನಿರ್ಮಿಸಿದ ಕನ್ನಡಿಗರು!
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಉಕ್ರೇನ್‌ಗೆ ಕೈಕೊಟ್ಟ ಅಮೆರಿಕ: ಝೆಲೆನ್‌ಸ್ಕಿ ವಿರುದ್ಧ ಟ್ರಂಪ್ ಆಕ್ರೋಶ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಗಜಪಡೆಗೆ ಮಜ್ಜನದೊಂದಿಗೆ ಸಂಭ್ರಮದ ಸಿದ್ಧತೆಗಳಿಗೆ ಚಾಲನೆ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರು ದಸರಾ: ಅರಮನೆ ಆವರಣದಲ್ಲಿ ದಸರಾ ಗಜಪಡೆಗೆ ಮಜ್ಜನ
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಮೈಸೂರಿನಲ್ಲಿ ಈ ಬಾರಿ ದಸರಾ ಸಡಗರ ಹೇಗಿದೆ ನೋಡಿ!
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಪ್ರತಿಭಟನೆಗೆ ಸುಪ್ರೀಂ ಆದೇಶ ಪಾಲಿಸದ ಆರೋಪದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಬೆಳಗಾವಿಯ ಪ್ರಭಾವಿ ರಾಜಕಾರಣಿಗಳ ಒಡೆತನದ ಕ್ಲಬ್, ಹೋಟೆಲ್​ಗಳ ಮೇಲೆ ದಾಳಿ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಇಂದಿನಿಂದ ನವರಾತ್ರಿ ಆರಂಭ; ಹೊಸ ಕೆಲಸ ಆರಂಭಿಸಲು ಒಳ್ಳೆಯ ದಿನ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಶಿವಂ ಅಸೋಸಿಯೇಟ್ಸ್ ವಂಚನೆ ಪ್ರಕರಣ: ಇಡಿಯಿಂದ ವರದಿ ಸಲ್ಲಿಕೆ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ