AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಬೋಲ್ಡ್, ಬಿಗ್ ಬಾಸ್‌ನಲ್ಲಿ ಸೈಲೆಂಟ್; ಸೌಂದರ್ಯಾ ಶೆಟ್ಟಿ ನಡೆಗೆ ಫ್ಯಾನ್ಸ್ ಅಚ್ಚರಿ

ಸ್ಪ್ಲಿಟ್ಸ್‌ವಿಲ್ಲಾ ರಿಯಾಲಿಟಿ ಶೋನಲ್ಲಿ ಅತ್ಯಂತ ಬೋಲ್ಡ್ ಹಾಗೂ ಅಗ್ರೆಸಿವ್ ಆಗಿ ಮಿಂಚಿದ್ದ ಸೌಂದರ್ಯಾ ಶೆಟ್ಟಿ, ಬಿಗ್ ಬಾಸ್ ಮನೆಯಲ್ಲಿ ತೀರಾ ಸೈಲೆಂಟ್ ಆಗಿರುವುದು ವೀಕ್ಷಕರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ತಮಗಾಗುವ ಸಮಸ್ಯೆಗಳಿಗೆ ಧ್ವನಿ ಎತ್ತದೆ ಕಣ್ಣೀರಿಡುತ್ತಿರುವ ಅವರ ಆಟದ ಶೈಲಿ ಅಭಿಮಾನಿಗಳಿಗೆ ತೀವ್ರ ನಿರಾಸೆ ತಂದಿದ್ದು, ಹಳೆಯ ಆಕ್ರಮಣಕಾರಿ ಅವತಾರಕ್ಕೆ ಮರಳುತ್ತಾರಾ ಎಂಬ ಪ್ರಶ್ನೆ ಮೂಡಿದೆ.

ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಬೋಲ್ಡ್, ಬಿಗ್ ಬಾಸ್‌ನಲ್ಲಿ ಸೈಲೆಂಟ್; ಸೌಂದರ್ಯಾ ಶೆಟ್ಟಿ ನಡೆಗೆ ಫ್ಯಾನ್ಸ್ ಅಚ್ಚರಿ
ಸೌಂದರ್ಯಾImage Credit source: Colors Kannada / MTV
ರಾಜೇಶ್ ದುಗ್ಗುಮನೆ
|

Updated on: Sep 21, 2026 | 7:00 AM

Share

ಮುಖ್ಯಾಂಶಗಳು

  • ಸ್ಪ್ಲಿಟ್ಸ್‌ವಿಲ್ಲಾದಲ್ಲಿ ಬೋಲ್ಡ್... ಬಿಗ್ ಬಾಸ್‌ನಲ್ಲಿ ಸೈಲೆಂಟ್
  • ಧ್ವನಿ ಎತ್ತದೆ ಕಣ್ಣೀರಿಡುತ್ತಿದ್ದಾರಾ ಸೌಂದರ್ಯಾ ಶೆಟ್ಟಿ?
  • ಶೋಭಾ ಶೆಟ್ಟಿ ಹಾದಿಯಲ್ಲೇ ಸಾಗುತ್ತಿದ್ದಾರಾ ಸೌಂದರ್ಯಾ?

ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆಯುತ್ತಿರುವ ಸೌಂದರ್ಯಾ ಶೆಟ್ಟಿ ಅವರ ಆಟದ ವೈಖರಿ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ‘ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಶೋನಲ್ಲಿ ಅತ್ಯಂತ ಬೋಲ್ಡ್ ಹಾಗೂ ಅಗ್ರೆಸಿವ್ ಆಗಿ ಕಾಣಿಸಿಕೊಂಡಿದ್ದ ಸೌಂದರ್ಯಾ, ‘ಬಿಗ್ ಬಾಸ್’ ಮನೆಯಲ್ಲಿ ಮಾತ್ರ ತೀರಾ ಭಿನ್ನವಾಗಿ ನಡೆದುಕೊಳ್ಳುತ್ತಿರುವುದು ವೀಕ್ಷಕರನ್ನು ಅಚ್ಚರಿಗೀಡು ಮಾಡಿದೆ. ಹೀಗೇಕೆ ಎನ್ನುವ ಪ್ರಶ್ನೆಯನ್ನು ಫ್ಯಾನ್ಸ್ ಕೇಳುತ್ತಾ ಇದ್ದಾರೆ.

‘ಸ್ಪಿಲ್ಟ್ಸ್ ವಿಲ್ಲಾ’ ಶೋನಲ್ಲಿ ಸಹ-ಸ್ಪರ್ಧಿಗಳ ವಿರುದ್ಧ ಸದಾ ವಾಗ್ದಾಳಿ ನಡೆಸುತ್ತಿದ್ದ ಸೌಂದರ್ಯಾ, ಎದುರಾಳಿಗಳಿಗೆ ಕೌಂಟರ್ ಕೊಡುವಲ್ಲಿ ಹಾಗೂ ತನ್ನ ನಿಲುವನ್ನು ಗಟ್ಟಿಯಾಗಿ ಪ್ರತಿಪಾದಿಸುವಲ್ಲಿ ಮುಂಚೂಣಿಯಲ್ಲಿದ್ದರು. ಆದರೆ, ಬಿಗ್ ಬಾಸ್ ಮನೆಗೆ ಕಾಲಿಟ್ಟ ನಂತರ ಅವರ ಆಟ ಸಂಪೂರ್ಣ ಬದಲಾಗಿದೆ. ಬಿಗ್ ಬಾಸ್‌ನಲ್ಲಿ ತಮಗಾಗುವ ಸಣ್ಣಪುಟ್ಟ ಸಮಸ್ಯೆಗಳಿಗೂ ತಾವೇ ನಿಂತು ಹೋರಾಡುವ ಬದಲು, ಕಣ್ಣೀರಿಡುತ್ತಾ ಸುದೀಪ್ ಬಳಿ ನ್ಯಾಯ ಕೇಳುತ್ತಿರುವುದು ಅಭಿಮಾನಿಗಳಿಗೆ ಮತ್ತು ವೀಕ್ಷಕರಿಗೆ ನಿರಾಸೆ ಮೂಡಿಸಿದೆ.

ಸ್ಪ್ಲಿಟ್ಸ್‌ವಿಲ್ಲಾದ ಹಳೆಯ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುವ ನೆಟ್ಟಿಗರು, ‘ಅಂದು ಸಹ-ಸ್ಪರ್ಧಿಗಳ ಕ್ಯಾರೆಕ್ಟರ್ ಬಗ್ಗೆ ಮಾತನಾಡುತ್ತಿದ್ದ ಸೌಂದರ್ಯಾ, ಇಂದು ಬಿಗ್ ಬಾಸ್‌ನಲ್ಲಿ ತಮ್ಮ ಪರವಾಗಿ ಧ್ವನಿ ಎತ್ತಲು ಕೂಡ ಪರದಾಡುತ್ತಿದ್ದಾರೆ. ಬಿಗ್ ಬಾಸ್‌ನಲ್ಲಿ ಅವರು ತಮ್ಮ ನಿಜವಾದ ಆಟವನ್ನು ತೋರಿಸುತ್ತಿಲ್ಲವೇ?’ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಆಸಿಯಾನ ಅಣಕಿಸಿದ ವಿಡಿಯೋ ವೈರಲ್

ಒಟ್ಟಿನಲ್ಲಿ, ‘ಸ್ಪ್ಲಿಟ್ಸ್‌ವಿಲ್ಲಾ’ದಲ್ಲಿ ಆಕ್ರಮಣಕಾರಿಯಾಗಿದ್ದ ಸೌಂದರ್ಯಾ ಶೆಟ್ಟಿ ಬಿಗ್ ಬಾಸ್‌ನಲ್ಲಿ ‘ಸೈಲೆಂಟ್’ ಮೋಡ್‌ಗೆ ಜಾರಿದ್ದು, ಮುಂದಿನ ದಿನಗಳಲ್ಲಿ ತಮ್ಮ ಹಳೆಯ ಫೈರಿ ಅವತಾರಕ್ಕೆ ಮರಳುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಈ ಮೊದಲು ಶೋಭಾ ಶೆಟ್ಟಿ ತೆಲುಗು ಬಿಗ್ ಬಾಸ್​ನಲ್ಲಿ ಫೈಯರ್ ಬ್ರ್ಯಾಂಡ್ ಆಗಿ ಮಿಂಚಿದ್ದರು. ಆದರೆ, ಕನ್ನಡ ಬಿಗ್ ಬಾಸ್​​ ಅವರಿಗೆ ಉಸಿರುಗಟ್ಟಿಸಿತ್ತು. ಅವರು ಶೋನ ಅರ್ಧಕ್ಕೆ ತೊರೆದರು. ಸೌಂದರ್ಯಾ ಕೂಡ ಹೀಗೆ ಮಾಡುವರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More