ಸೆಲ್ಫಿ ಕ್ಲಿಕ್ಕಿಸಲು ಜಲಪಾತದ ತುದಿಗೆ ಹೋದ ಭಾರತೀಯ ಟೆಕ್ಕಿ ಕಾಲುಜಾರಿ ಸಾವು

|

Updated on: Sep 14, 2020 | 6:17 PM

ಜಲಪಾತದ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ ಭಾರತೀಯ ಮೂಲದ ಟೆಕ್ಕಿ ಒಬ್ಬಳು ಮೇಲಿಂದ ಕಾಲುಜಾರಿಬಿದ್ದು ಸಾವನ್ನಪ್ಪಿರೋ ಘಟನೆ ಅಮೆರಿಕದ ಅಟ್ಲಾಂಟಾ ನಗರದ ಬಳಿ ವರದಿಯಾಗಿದೆ. ಮೃತ ಸಾಫ್ಟ್​ವೇರ್​ ಇಂಜಿನಿಯರ್​ನ ಕಮಲಾ ಪೋಲಾವರಪು ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಿವಾಸಿಯಾಗಿರುವ ಕಮಲಾ ಅಮೆರಿಕದ ಸಾಫ್ಟ್​ವೇರ್​ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಮಲಾ ಕಳೆದ ಭಾನುವಾರ ತಾನು ಮದುವೆಯಾಗಲಿದ್ದ ಹುಡುಗನೊಟ್ಟಿಗೆ ಅಟ್ಲಾಂಟಾದಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಭೇಟಿಕೊಟ್ಟಿದರು. ಅಲ್ಲಿಂದ ತಮ್ಮ ನಿವಾಸಕ್ಕೆ ಮರಳುವಾಗ […]

ಸೆಲ್ಫಿ ಕ್ಲಿಕ್ಕಿಸಲು ಜಲಪಾತದ ತುದಿಗೆ ಹೋದ ಭಾರತೀಯ ಟೆಕ್ಕಿ ಕಾಲುಜಾರಿ ಸಾವು
Follow us on

ಜಲಪಾತದ ತುದಿಯಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುವ ವೇಳೆ ಭಾರತೀಯ ಮೂಲದ ಟೆಕ್ಕಿ ಒಬ್ಬಳು ಮೇಲಿಂದ ಕಾಲುಜಾರಿಬಿದ್ದು ಸಾವನ್ನಪ್ಪಿರೋ ಘಟನೆ ಅಮೆರಿಕದ ಅಟ್ಲಾಂಟಾ ನಗರದ ಬಳಿ ವರದಿಯಾಗಿದೆ. ಮೃತ ಸಾಫ್ಟ್​ವೇರ್​ ಇಂಜಿನಿಯರ್​ನ ಕಮಲಾ ಪೋಲಾವರಪು ಎಂದು ಗುರುತಿಸಲಾಗಿದೆ.
ಮೂಲತಃ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಿವಾಸಿಯಾಗಿರುವ ಕಮಲಾ ಅಮೆರಿಕದ ಸಾಫ್ಟ್​ವೇರ್​ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಕಮಲಾ ಕಳೆದ ಭಾನುವಾರ ತಾನು ಮದುವೆಯಾಗಲಿದ್ದ ಹುಡುಗನೊಟ್ಟಿಗೆ ಅಟ್ಲಾಂಟಾದಲ್ಲಿದ್ದ ತನ್ನ ಸಂಬಂಧಿಕರ ಮನೆಗೆ ಭೇಟಿಕೊಟ್ಟಿದರು. ಅಲ್ಲಿಂದ ತಮ್ಮ ನಿವಾಸಕ್ಕೆ ಮರಳುವಾಗ ಮಾರ್ಗದಲ್ಲಿ ಇದ್ದ ಬಾಲ್ಡ್​ ರಿವರ್​ ಜಲಪಾತಕ್ಕೆ ಭೇಟಿ ನೀಡಿದ್ದರು.

ಜಲಪಾತದ ಬಳಿ ಸೆಲ್ಫಿ ಕ್ಲಿಕ್ಕಿಸಲು ಜೋಡಿಯು ಅದರ ತುತ್ತತುದಿಗೆ ತಲುಪಿದ್ದರು. ಸೆಲ್ಫಿ ತೆಗೆಯುವಾಗ ಕಾಲುಜಾರಿ ಜೋಡಿಯ ಮೇಲಿಂದ ಕೆಳಕ್ಕೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳದಲ್ಲೇ ಇದ್ದವರು ಹುಡುಗನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಪಕ್ಕದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದ ಕಮಲಾರನ್ನು ಉಳಿಸಲು ಸಾಧ್ಯವಾಗಲಿಲ್ಲವಂತೆ.

ಇದೀಗ, ಟೆಕ್ಕಿಯ ಮೃತದೇಹವನ್ನು ಭಾರತಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಅಮೆರಿಕದ ತೆಲುಗು ಸಂಘವು ಮೃತದೇಹವನ್ನು ಭಾರತಕ್ಕೆ ರವಾನಿಸಲು ಪ್ರಕ್ರಿಯೆ ಆರಂಭಿಸಿದೆ ಎಂದು ಹೇಳಲಾಗಿದೆ.