ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆ ಭರ್ಜರಿ ಸುದ್ದಿಯಾಗಿದ್ದಳು. 37 ವರ್ಷದ ಈಕೆ ಒಂದೇ ಬಾರಿಗೆ 10ಮಕ್ಕಳಿಗೆ ಜನ್ಮನೀಡಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಎಂದು ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿತ್ತು. ಇದನ್ನು ನೋಡಿ ಲಕ್ಷಾಂತರ ಮಂದಿ..ಅಬ್ಬಾ..ಎಂದು ಉದ್ಗಾರ ತೆಗೆದಿದ್ದರು. ಸುಖವಾಗಿರಿ..ಆರೋಗ್ಯವಾಗಿರಿ ಎಂದು ಹಾರೈಸಿದ್ದರು. ಆದರೆ ಇದೊಂದು ಮಹಾ ಸುಳ್ಳು ಕತೆ ಎಂದು ಈಗ ದಕ್ಷಿಣ ಆಫ್ರಿಕಾ ಮೀಡಿಯಾಗಳು ವರದಿ ಮಾಡಿವೆ. ಅಷ್ಟೇ ಅಲ್ಲ, 10 ಮಕ್ಕಳನ್ನು ಹೆತ್ತಿದ್ದಾಗಿ ನಕಲಿ ಕತೆ ಸೃಷ್ಟಿಸಿದ ಸಿಥೋಲ್ರನ್ನು ಸದ್ಯ ಮನೋರೋಗ ಚಿಕಿತ್ಸಾ ವಾರ್ಡ್ಗೆ ದಾಖಲಿಸಲಾಗಿದೆ.
ತಮಾರಾ ಸಿಥೋಲ್ರನ್ನು ಜೂ.17ರಂದು, ಜೊಹಾನ್ಸ್ಬರ್ಗ್ನಲ್ಲಿರುವ ಆಕೆಯ ಸಂಬಂಧಿಕರ ಮನೆಯಿಂದ ಬಂಧಿಸಲಾಗಿದೆ. ಆಕೆ ಯಾವುದೇ ಅಪರಾಧ ಮಾಡಿದ್ದಾರೆಂದು ಅಲ್ಲ. ಬದಲಿಗೆ 10 ಮಕ್ಕಳನ್ನು ಹೆತ್ತಿದ್ದೇನೆ ಎಂದು ನಕಲಿ ಸುದ್ದಿ ಸೃಷ್ಟಿಸಿದ್ದಾಳೆ. ಇದು ಮಾನಸಿಕ ಕಾಯಿಲೆಯೂ ಆಗಿರಬಹುದು. ಹಾಗಾಗಿ ತಜ್ಞರ ಬಳಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾಗಿ ದಿ ಸನ್ ಮಾಧ್ಯಮ ವರದಿ ಮಾಡಿದೆ. ಮಹಿಳೆಯನ್ನು ಮೊದಲು ಪೊಲೀಸರು ಬಂಧಿಸಿ, ನಂತರ ಸಾಮಾಜಿಕ ಕಾರ್ಯಕರ್ತರ ವಶಕ್ಕೆ ಕೊಟ್ಟಿದ್ದಾರೆ. ಅವರು ಆಕೆಯನ್ನು ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ
ಕೆಲವೇ ದಿನಗಳ ಹಿಂದೆ ಅಂದರೆ, ಜೂನ್ ಎರಡನೇ ವಾರದಲ್ಲಿ ಈ ಮಹಿಳೆ ಭರ್ಜರಿ ಸುದ್ದಿಯಲ್ಲಿದ್ದಳು. ಒಟ್ಟು 10 ಮಕ್ಕಳನ್ನು ಹೆತ್ತಿದ್ದಾಳೆ. ಅವರಲ್ಲಿ ಏಳು ಗಂಡುಮಕ್ಕಳು, ಮೂರು ಹೆಣ್ಣುಮಕ್ಕಳು ಎಂದು ಹೇಳಲಾಗಿತ್ತು. ಮೊದಲು ಅವಳಿ ಮಕ್ಕಳು ಹುಟ್ಟಿದ್ದಾರೆ. ಈಗ 10 ಮಕ್ಕಳು ಹುಟ್ಟಿದ್ದಾರೆ. ನಾನೀಗ 12 ಮಕ್ಕಳ ತಾಯಿ ಎಂದು ಆಕೆ ಹೇಳಿಕೊಂಡಿದ್ದರು. ಅಲ್ಲದೆ, ಈ 10 ಮಕ್ಕಳಿಗೂ ಸಹಜ ಹೆರಿಗೆಯೇ ಆಗಿದೆ. ನಾನು 8 ಮಕ್ಕಳಿಗೆ ಜನ್ಮ ನೀಡುತ್ತೇನೆ ಎಂದು ಭಾವಿಸಿದ್ದೆ. ಆದರೆ 10 ಮಕ್ಕಳು ಹುಟ್ಟಿವೆ ಎಂದಿದ್ದರು.
ವಿಶ್ವದಾಖಲೆ ಎಂದು ಹೇಳುತ್ತಿದ್ದಂತೆ ಸಹಜವಾಗಿಯೇ ಸ್ಥಳೀಯ ಆಡಳಿತಗಳೂ ಗಮನಕೊಟ್ಟವು. ಆದರೆ 10 ಮಕ್ಕಳು ಇರುವ ಬಗ್ಗೆ ಒಂದೇ ಒಂದು ಪುರಾವೆಯೂ ಅವರಿಗೆ ಸಿಗಲಿಲ್ಲ. ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಪರಿಶೀಲನೆ ನಡೆಸಿದೆ. ಆದರೆ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ಯಾವುದೇ ಪುರಾವೆ ಸಿಕ್ಕಿಲ್ಲ ಎಂದು ಹೇಳಿಕೊಂಡಿದೆ. ಆದರೆ ಈ ಬಗ್ಗೆ ಇದುವರೆಗೂ ಒಂದು ಸ್ಪಷ್ಟತೆ ಸಿಕ್ಕಿಲ್ಲ. ಮಹಿಳೆಯ ಪರ ವಕೀಲರೂ ಕಾನೂನು ಪ್ರಕ್ರಿಯೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: World Record: ಒಂದೇ ಬಾರಿಗೆ ಹತ್ತು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ; ಗಿನ್ನಿಸ್ ದಾಖಲೆ ನಿರ್ಮಿಸಿದ ಅಮ್ಮ!
ಕಾಂಗ್ರೆಸ್ ಸಿದ್ಧಾಂತ ಏನೆಂದು ಅವರಿಗೆ ಗೊತ್ತಿಲ್ಲ: ಜಮೀರ್ ಅಹಮದ್ ವಿರುದ್ಧ ಕಾಂಗ್ರೆಸ್ ನಾಯಕರ ಆಕ್ರೋಶ
Published On - 5:06 pm, Wed, 23 June 21