ಸ್ಪೇನ್‌ನ ಟೊಲೆಡೊ ಬಳಿ 2 ರೈಲುಗಳು ಡಿಕ್ಕಿಯಾಗಿ ಭೀಕರ ಅಪಘಾತ; 46 ಜನ ಸಾವು

ಸ್ಪೇನ್‌ನ ಟೊಲೆಡೊ ನಗರದ ಬಳಿ ಇಂದು ಸಂಭವಿಸಿದ ಭೀಕರ ಹೈಸ್ಪೀಡ್ ರೈಲು ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 46ಕ್ಕೆ ಏರಿಕೆಯಾಗಿದ್ದು, ದೇಶಾದ್ಯಂತ ತೀವ್ರ ಆಘಾತ ಹಾಗೂ ಶೋಕ ವ್ಯಕ್ತವಾಗಿದೆ. ಸ್ಥಳೀಯ ಆಡಳಿತ ಮತ್ತು ತುರ್ತು ಸೇವಾ ಸಿಬ್ಬಂದಿ ಘಟನಾ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಮುಂದುವರಿಸಿದ್ದಾರೆ. ಇಂದು ಬೆಳಗ್ಗೆ 9 ಗಂಟೆಯ ವೇಳೆ ಮ್ಯಾಡ್ರಿಡ್ ಮತ್ತು ದಕ್ಷಿಣ ಅಂಡಲೂಸಿಯಾ ನಡುವೆ ಸಂಚರಿಸುತ್ತಿದ್ದ 'ರೆನ್ಫೆ' ಮತ್ತು 'ಐರಿಯೊ' ಕಂಪನಿಗಳ ಎರಡು ಹೈಸ್ಪೀಡ್ ರೈಲುಗಳು ಮುಖಾಮುಖಿಯಾಗಿವೆ. ಈ ಭೀಕರ ಸಂಘರ್ಷದ ತೀವ್ರತೆಗೆ ಐರಿಯೊ ರೈಲಿನ ಎರಡು ಬೋಗಿಗಳು ಸಂಪೂರ್ಣವಾಗಿ ಹಳಿ ತಪ್ಪಿ ಚೆಲ್ಲಾಪಿಲ್ಲಿಯಾಗಿವೆ.

ಸ್ಪೇನ್‌ನ ಟೊಲೆಡೊ ಬಳಿ 2 ರೈಲುಗಳು ಡಿಕ್ಕಿಯಾಗಿ ಭೀಕರ ಅಪಘಾತ; 46 ಜನ ಸಾವು
ಸ್ಪೇನ್‌ನ ಟೊಲೆಡೊ ಬಳಿ ಅಪಘಾತ
Image Credit source: X

Updated on: Oct 28, 2026 | 4:06 PM

ಟೊಲೆಡೊ, ಅಕ್ಟೋಬರ್ 28: ಸ್ಪೇನ್‌ನ ಟೊಲೆಡೊ ನಗರದ ಬಳಿ ಇಂದು ಬೆಳಗ್ಗೆ 2 ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 46 ಜನರು ಸಾವನ್ನಪ್ಪಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಅಪಘಾತದಲ್ಲಿ ಗಾಯಗೊಂಡವರ ಸಂಖ್ಯೆಯನ್ನು ಇನ್ನೂ ನಿಖರವಾಗಿ ಅಂದಾಜಿಸಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊ ಹಾಗೂ ಫೋಟೋಗಳಲ್ಲಿ ಅಪಘಾತದ ತೀವ್ರತೆ ಕಂಡುಬಂದಿದ್ದು, ರೈಲಿನ ಬೋಗಿಗಳು ಹಳಿ ತಪ್ಪಿ ಛಿದ್ರವಾಗಿ ಬಿದ್ದಿರುವುದನ್ನು ನೋಡಬಹುದು.

ಈ ಅಪಘಾತದ ಗಂಭೀರತೆಯನ್ನು ಪರಿಗಣಿಸಿ ರೈಲು ನಿರ್ವಾಹಕ ಸಂಸ್ಥೆ ‘ಅಡಿಫ್’ ಮ್ಯಾಡ್ರಿಡ್-ಅಂಡಲೂಸಿಯಾ ನಡುವಿನ ಪ್ರಮುಖ ಹೈಸ್ಪೀಡ್ ರೈಲು ಮಾರ್ಗದ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಗಾಯಗೊಂಡಿರುವ ನೂರಾರು ಪ್ರಯಾಣಿಕರಿಗೆ ತುರ್ತು ಚಿಕಿತ್ಸೆ ನೀಡಲು ಸಮೀಪದ ಉರ್ಡಾ ಪಟ್ಟಣದ ಕ್ರೀಡಾಂಗಣವನ್ನು ತಾತ್ಕಾಲಿಕ ವೈದ್ಯಕೀಯ ಶಿಬಿರವಾಗಿ ಪರಿವರ್ತಿಸಲಾಗಿದೆ. ಸ್ಪ್ಯಾನಿಷ್ ಸರ್ಕಾರವು ದುರಂತದ ನಿಖರ ಕಾರಣವನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.


ಇದನ್ನೂ ಓದಿ: ಅರ್ನಬ್ ಚಂಡಮಾರುತದಿಂದ ಆಂಧ್ರಪ್ರದೇಶ, ಒಡಿಶಾದಲ್ಲಿ ಭಾರಿ ಮಳೆ; ವಿಮಾನ, ರೈಲು ಸೇವೆ ರದ್ದು


ಇಂದು ಸ್ಥಳೀಯ ಸಮಯ ಬೆಳಿಗ್ಗೆ 9 ಗಂಟೆಯ ನಂತರ ‘ರೆನ್ಫೆ’ ಮತ್ತು ‘ಐರಿಯೊ’ ಕಂಪನಿಗೆ ಸೇರಿದ 2 ರೈಲುಗಳು ಪರಸ್ಪರ ಡಿಕ್ಕಿಯಾಗಿವೆ. ಇದರಿಂದಾಗಿ ಐರಿಯೊ ರೈಲಿನ ಎರಡು ಬೋಗಿಗಳು ಹಳಿ ತಪ್ಪಿವೆ. ಈ ದುರಂತವು ಮೋರಾ ಮತ್ತು ಆರ್ಗಾಜ್ ನಗರಗಳ ನಡುವೆ ಸಂಭವಿಸಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:04 pm, Wed, 28 October 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us