AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: ಲಾಂಗ್ ಡ್ರೈವ್ ತೆರಳಿದ್ದ ಮಹಿಳಾ ಟೆಕ್ಕಿ ಸಾವು; ಕಾರು ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣ

ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಮೂವರು ಯುವತಿಯರು ದುರ್ಮರಣಕ್ಕೀಡಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಲಾಂಗ್ ಡ್ರೈವ್ ತೆರಳಿದ್ದ ಮಹಿಳಾ ಟೆಕ್ಕಿ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಇನ್ನು ಬೆಂಗಳೂರಿಗೆ ಉದ್ಯೋಗ ಅರಸಿ ಹೊರಟಿದ್ದ ಯುವತಿಯರ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ.

ಪ್ರತ್ಯೇಕ ಘಟನೆ: ಲಾಂಗ್ ಡ್ರೈವ್ ತೆರಳಿದ್ದ ಮಹಿಳಾ ಟೆಕ್ಕಿ ಸಾವು; ಕಾರು ಅಪಘಾತದಲ್ಲಿ ಇಬ್ಬರು ಯುವತಿಯರು ದುರ್ಮರಣ
ಶ್ರೀನಿಧಿ ಭಟ್, ನಿಸರ್ಗ, ರೂಪಾ ಮೃತರು
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on: Oct 26, 2026 | 7:50 PM

Share

ಚಿಕ್ಕಬಳ್ಳಾಪುರ, ಅಕ್ಟೋಬರ್​​ 26: ಲಾಂಗ್ ಡ್ರೈವ್ ತೆರಳಿದ್ದಾಗ ಬೈಕ್ ಅಪಘಾತಗೊಂಡು ಮಹಿಳಾ ಟೆಕ್ಕಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸಾದಲಿ ಕ್ರಾಸ್​ನ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಶ್ರೀನಿಧಿ ಭಟ್(23) ಮೃತಪಟ್ಟಿದ್ದು, ಉತ್ತರ ಭಾರತ ಮೂಲದ ಹರ್ಷ ಚೌಹಾಣ್ ಸ್ಥಿತಿ ಚಿಂತಾಜನಕವಾಗಿದೆ. ಪೆರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಶ್ರೀನಿಧಿ ಭಟ್ ಮತ್ತು ಹರ್ಷ ಚೌಹಾಣ್​​ ಇಬ್ಬರು ಲಾಂಗ್ ಡ್ರೈವ್ ತೆರಳಿದ್ದರು. ಈ ವೇಳೆ ಸಾದಲಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಅತೀ ವೇಗ ಹಿನ್ನೆಲೆ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್​ಗೆ ಬೈಕ್​ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ನೆಲಮಂಗದಲ್ಲಿ 23 ಸಿಲಿಂಡರ್ ಸ್ಫೋಟದಲ್ಲಿ ದಂಪತಿ ಸಾವು; ಶೃಂಗೇರಿಯಲ್ಲಿ ನವವಿವಾಹಿತ ದಾರುಣ ಸಾವು

ಈ ಭೀಕರ ಅಪಘಾತದಲ್ಲಿ ಶ್ರೀನಿಧಿ ಭಟ್ ಮೃತಪಟ್ಟಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಸಾಫ್ಟ್‌ವೇರ್‌ ಇಂಜಿನಿಯರ್‌ ಹರ್ಷ ಚೌಹಾಣ್​​ಗೆ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಬಳಿ ಮೃತ ಶ್ರೀನಿಧಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

LIVE TV

ಬೆಂಗಳೂರಿಗೆ ಕೆಲಸ ಅರಿಸಿಕೊಂಡು ಬರುತ್ತಿದ್ದ ಯುವತಿಯರಿಬ್ಬರು ದುರಂತ ಸಾವು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯಲ್ಲಿ ಅಪಘಾತದಲ್ಲಿ ವಿಜಯಪುರ ಮೂಲದ ಇಬ್ಬರು ಯುವತಿಯರು ದಾರುಣ ಅಂತ್ಯಕಂಡ ಘಟನೆ ನಡೆದಿದೆ. ನಿಸರ್ಗ(20) ಹಾಗೂ ರೂಪಾ(21) ಮೃತ ದುರ್ದೈವಿಗಳು. ಐವರಿಗೆ ಗಂಭೀರ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 48ರಲ್ಲೇ ಭೀಕರ ಅಪಘಾತ

ವಿಜಯಪುರ ಮೂಲದ ಇವರು ತನ್ನ ಸಹಪಾಟಿ ಪೂಜಾ ಎಂಬಾಕೆ ಜೊತೆ ಬೆಂಗಳೂರಿಗೆ ತೆರಳುತಿದ್ದರು. ಬಿ-ಫಾರ್ಮಾ ಮುಗಿಸಿದ್ದ ಮೂವರು ಇಂಟರ್‌ವ್ಯೂಗೆಂದು ಬೆಂಗಳೂರಿಗೆ ಕಾರ್​ನಲ್ಲಿ ಬರುತ್ತಿದ್ದರು. ಆದರೆ ಕಾರು ಚಾಲಕ ಪವನ್ ಎಂಬಾತನ ಬೇಜವಾಬ್ದಾರಿಗೆ ದೊಡ್ಡ ದುರಂತ ನಡೆದಿದ್ದು, ಭೀಕರ ಅಪಘಾತ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆಯಲ್ಲಿ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ಗೆ ಹೊಡೆದು ಮುಂದೆ ಬರುತ್ತಿದ್ದ ಟಾಟಾ ಕಾರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರೂಪಾಮಾಳಿ ಹಾಗೂ ನಿಸರ್ಗ ಸಾವನಪ್ಪಿದ್ದಾರೆ.

ಇದನ್ನೂ ಓದಿ: ಚಿಕ್ಕಪೇಟೆಯಲ್ಲಿ ತಪ್ಪಿದ ಭಾರಿ ದುರಂತ: ಪಿ.ಎಸ್.ಲೇನ್ ರಸ್ತೆಯಲ್ಲಿ ಏಕಾಏಕಿ ಕುಸಿದ ಕಾಂಪೌಂಡ್​​; ಹಲವು ಬೈಕ್​​ಗಳು ಜಖಂ

ಇನ್ನು ರೂಪಾಗೆ ಮದುವೆ ಸಹ ನಿಶ್ಚಯವಾಗಿತ್ತು. ಮದುವೆ ದಿನಾಂಕ ಹಾಗೂ ಸಿದ್ಧತೆಯಲ್ಲಿದ್ದ ಪೊಷಕರಿಗೆ ಮಗಳ ಸಾವು ಬರಸಿಡಿಲು ಬಡಿದಂತಾಗಿದೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನ ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಧನ್ವೀರ್ ಗೌಡ ಮನೆಗೆ ಮುತ್ತಿಗೆ ಹಾಕುತ್ತೇವೆ’: ಝೈದ್ ಖಾನ್ ಫ್ಯಾನ್ಸ್ ಗರಂ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಸೀಗೆಗುಡ್ಡದಲ್ಲಿ ಜನವೋ ಜನ,ಜಿಲ್ಲಾಡಳಿತಕ್ಕೆ ಟೆನ್ಷನ್ ತಂದಿಟ್ಟ ಪ್ರೇಮದ ಊರಲಿ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಧನ್ವೀರ್ ಫೋಟೋಗೆ ಮಸಿ ಬಳಿದು ಝೈದ್ ಖಾನ್ ಅಭಿಮಾನಿಗಳ ಆಕ್ರೋಶ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ಅವಾಂಟ್ ಬಿಕೆಜಿ ಆಸ್ಪತ್ರೆಯಲ್ಲಿ AI ತಂತ್ರಜ್ಞಾನ ಪರಿಚಯ
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ರೈತನ ಮೆಣಸಿನಕಾಯಿ ಹೊಲಕ್ಕೆ ರಚಿತಾ ರಾಮ್‌, ರಶ್ಮಿಕಾ ಮಂದಣ್ಣ ಕಣ್ಗಾವಲು!
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಮಕ್ಕಳು ಅಂಗಳ ಅಗೆಯುವಾಗ ಕುಡಿಕೆಯಲ್ಲಿ ಪ್ರಾಚೀನ ನಾಣ್ಯಗಳು ಪತ್ತೆ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ಬಿಗ್ ಬಾಸ್ ಅಲ್ಲಿರೋ ಕುಮಾರಿ ವೇಸ್ಟ್; ನೇರವಾಗಿ ತೀರ್ಪು ನೀಡಿದ ಲಕ್ಷ್ಮಿ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ತಮ್ಮದೇ ಸರ್ಕಾರದ ವಿರುದ್ಧ ವಿಎಸ್ ಉಗ್ರಪ್ಪ ಉಗ್ರ ಸ್ವರೂಪ, ಖಡಕ್ ಎಚ್ಚರಿಕೆ
ಲಖನೌದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗುಂಡಿನ ದಾಳಿ
ಲಖನೌದಲ್ಲಿ ಕಾರು ಪಾರ್ಕಿಂಗ್ ವಿಚಾರಕ್ಕೆ ಗುಂಡಿನ ದಾಳಿ
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಕಾಮಗಾರಿ ವಿಳಂಬ: ಗುತ್ತಿಗೆದಾರರು, ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್