AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜವರಾಯನ ಅಟ್ಟಹಾಸ: ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 6 ಮಂದಿ ದಾರುಣ ಸಾವು

ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಹಾಗೂ ಉಡುಪಿಯಲ್ಲಿ ನಡೆದ ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ದಂಪತಿ ಹಾಗೂ ಇಬ್ಬರು ಯುವತಿಯರು ಸೇರಿದಂತೆ ಒಟ್ಟು 6 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಉದ್ಯೋಗ ಅರಸಿ ಹೊರಟ ಇಬ್ಬರ ಕನಸು ದಾರಿಯಲ್ಲೇ ಅಂತ್ಯಕಂಡಿದ್ದರೆ, ಸುಂದರ ಬದುಕಿನ ಕನಸು ಕಂಡಿದ್ದ ದಂಪತಿಯನ್ನು ಕಾರು ಬಲಿಪಡೆದಿದೆ. ಇವೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಜವರಾಯನ ಅಟ್ಟಹಾಸ: ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 6 ಮಂದಿ ದಾರುಣ ಸಾವು
ಪ್ರತ್ಯೇಕ ಅಪಘಾತಗಳಲ್ಲಿ ಒಟ್ಟು 6 ಮಂದಿ ದಾರುಣ ಸಾವು
ಪ್ರಸನ್ನ ಹೆಗಡೆ
|

Updated on: Oct 26, 2026 | 12:49 PM

Share

ಚಿಕ್ಕಬಳ್ಳಾಪುರ/ತುಮಕೂರು, ಅಕ್ಟೋಬರ್​​ 26: ರಸ್ತೆ ಅಪಘಾತಗಳ ಸಂಖ್ಯೆ ಬೆಂಗಳೂರಿನಲ್ಲಿ ಐದು ವರ್ಷಗಳಲ್ಲಿ ಸುಮಾರು ಶೇ 70ರಷ್ಟು ಹೆಚ್ಚಾಗಿರುವ ಆಘಾತಕಾರಿ ಅಂಕಿಅಂಶ ಬಹಿರಂಗಗೊಂಡಿರುವ ನಡುವೆಯೇ ರಾಜ್ಯದ ವಿವಿಧೆಡೆ ನಡೆದಿರುವ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು 6 ಮಂದಿ ದಾರುಣ ಅಂತ್ಯಕಂಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ದಂಪತಿ, ತುಮಕೂರಿನ ಶಿರಾದಲ್ಲಿ ಇಬ್ಬರು ಯುವತಿಯರು ಸೇರಿದಂತೆ ಚಿತ್ರದುರ್ಗದ ಹಿರಿಯೂರು ಮತ್ತು ಉಡುಪಿಯ ಕೋಟದಲ್ಲಿ ತಲಾ ಓರ್ವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕಾರುಗಳ ನಡುವೆ ಡಿಕ್ಕಿ: ಯುವತಿಯರು ಸಾವು

ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಾವರೆಕೆರೆಯಲ್ಲಿ ಕಾರುಗಳ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಯುವತಿಯರು ಮೃತಪಟ್ಟಿದ್ದಾರೆ. ನಿಸರ್ಗ(20) ಮತ್ತು ರೂಪಾ(21) ಮೃತರಾಗಿದ್ದು, ಅಪಘಾತದಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತುದೆ. ಮೃತ ಯುವತಿಯರು ಜಾಬ್ ಇಂಟರ್​ವ್ಯೂಗೆಂದು ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಒಟ್ಟು ಮೂವರು ಯುವತಿಯರು ಹಾಗೂ ಚಾಲಕ ಸೇರಿ ನಾಲ್ವರು ಕಾರಲ್ಲಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿವೈಡರ್ ಗೆ ಡಿಕ್ಕಿಯಾದ ಬಳಿಕ ಮತ್ತೊಂದು ಕಾರಿಗೆ ಗುದ್ದಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಶಿರಾ ಡಿವೈಎಸ್ಪಿ, ಶಿರಾ ಗ್ರಾಮಾಂತರ ಸಿಪಿಐ ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಅಪಘಾತಗಳ ರಾಜಧಾನಿಯಾದ ಬೆಂಗಳೂರು! ಆ್ಯಕ್ಸಿಡೆಂಟ್ ಪ್ರಮಾಣ ತೀವ್ರ ಹೆಚ್ಚಳ

ಕಾರು ಡಿಕ್ಕಿಯಾಗಿ ದಂಪತಿ ದುರ್ಮರಣ

ಸ್ಕೂಟರ್​​ಗೆ ಕಾರು ಡಿಕ್ಕಿಯಾದ ಪರಿಣಾಮ ದಂಪತಿ ಸ್ಥಳದಲ್ಲೇ ಅಸುನೀಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಗ್ರಾಮದ ಬಳಿ ನಡೆದಿದೆ. ಚಿಂತಾಮಣಿಯ ಷಣ್ಮುಖ(27), ಮಿಥುಲ್(24) ಮೃತ ದುರ್ದೈವಿಗಳಾಗಿದ್ದಾರೆ. ವರ್ಷದ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಇವರು ಕಾಲಿಟ್ಟಿದ್ದರು ಎನ್ನಲಾಗಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂತಾಮಣಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಮಾರುತಿ(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಮಧು ಎಂಬವರಿಗೆ ಹಿರಿಯೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಉಡುಪಿ ಜಿಲ್ಲೆಯ ಕೋಟ ಜಂಕ್ಷನ್​​ನಲ್ಲಿಯೂ ನಡೆದ ಭೀಕರ ಅಪಘಾತಕ್ಕೆ ಸ್ಥಳೀಯ ಆರ್‌ಎಸ್‌ಎಸ್‌ ಮುಖಂಡ ದಾರುಣವಾಗಿ ಪ್ರಾಣಬಿಟ್ಟಿದ್ದಾರೆ. ಗುರುದಾಸ್ ಶೆಣೈ ಮೃತರಾಗಿದ್ದು, ಸೈಕಲ್ ತಳ್ಳಿಕೊಂಡು ರಸ್ತೆ ದಾಟುತ್ತಿದ್ದ ಇವರಿಗೆ ವೇಗವಾಗಿ ಬಂದ ಕಾರು ಗುದ್ದಿದೆ. ನಿಯಂತ್ರಣ ಕಳೆದುಕೊಂಡು ಕಾರೂ ಪಲ್ಟಿಯಾದ ಪರಿಣಾಮ, ಚಾಲಕ ಪ್ರದೀಪ್ ಕಾಂಚನ್ ಎಂಬವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಬ್ರಹ್ಮಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು
ಬಾಳೆಗೊನೆಯಲ್ಲಿ ಡ್ರಗ್ ಸಾಗಾಟ: ಪ್ರಗತಿಪರ ಯುವ ರೈತನ ಕರಾಳ ಮುಖ ಬಯಲು