ಈ ತಿಂಗಳ ಆರಂಭದಲ್ಲಿ ಡಚ್ ಗಡಿ ಬಳಿಯ ಕಸ್ಟಮ್ಸ್ ಕಚೇರಿಯಲ್ಲಿ ತಮ್ಮ ಕೈಚಳಕ ತೋರಿರುವ ಮೂರು ಕಳ್ಳರು ಸುಮಾರು 57 ಕೋಟಿ ರೂ. ಹಣವನ್ನು ಕದ್ದಿದ್ದಾರೆ ಎಂದು ಜರ್ಮನ್ ಪೊಲೀಸರು ತಿಳಿಸಿದ್ದಾರೆ.
ಡಚ್ ಗಡಿ ಬಳಿಯ ಕಸ್ಟಮ್ಸ್ ಕಚೇರಿಗೆ German Customs Office ಖನ್ನ ಹಾಕಲು ಭರ್ಜರಿ ಪ್ಲಾನ್ ಮಾಡಿದ್ದ ಖದೀಮರು ಕಚೇರಿಯ ಪಕ್ಕದಲ್ಲಿದ್ದ ಕಟ್ಟಡದ ಗೋಡೆಯಲ್ಲಿ ರಂಧ್ರವನ್ನು ಕೊರೆದಿದ್ದಾರೆ. ನಂತರ ಕಸ್ಟಮ್ಸ್ ಕಚೇರಿಯ ನೆಲಮಾಳಿಗೆಗೆ ಹೋಗಲು ಡ್ರಿಲ್ ಅನ್ನು ಬಳಸಿ ರಂಧ್ರ ಕೊರೆದು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಂಕಿತರ ಸುಳಿವು ಕೊಟ್ಟವರಿಗೆ 88 ಲಕ್ಷ ರೂ. ಬಹುಮಾನ!
ವಿಚಿತ್ರ ಸಂಗತಿಯೆಂದರೆ ಜರ್ಮನ್ ಪೊಲೀಸರು ಶಂಕಿತರ ಬಂಧನಕ್ಕೆ ತೀವ್ರ ಹುಡುಕಾಟ ನೆಡೆಸುತ್ತಿದ್ದು, ಶಂಕಿತರ ಸುಳಿವು ಕೊಟ್ಟವರಿಗೆ 88 ಲಕ್ಷ ಬಹುಮಾನ ನೀಡುವುದಾಗಿ ಬಹಿರಂಗ ಘೋಷಣೆ ಹೊರಡಿಸಿದ್ದಾರೆ.
Published On - 11:55 am, Fri, 13 November 20