ಯುದ್ಧ ನಿಲ್ಲಿಸಲು ಪುಟಿನ್ ರೆಡಿ, ಆದರೆ ನಾಯಕರ ವೈಯಕ್ತಿಕ ದ್ವೇಷವೇ ಅಡ್ಡಿ: ಟ್ರಂಪ್ ಸ್ಫೋಟಕ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ-ಉಕ್ರೇನ್ ಯುದ್ಧ ಹಾಗೂ ಇರಾನ್ ಸಂಘರ್ಷದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ವ್ಲಾಡಿಮಿರ್ ಪುಟಿನ್ ಶಾಂತಿ ಒಪ್ಪಂದಕ್ಕೆ ಸಿದ್ಧರಾಗಿದ್ದರೂ, ಅವರ ಮತ್ತು ಝೆಲೆನ್ಸ್ಕಿ ನಡುವಿನ ವೈಯಕ್ತಿಕ ದ್ವೇಷವೇ ರಾಜತಾಂತ್ರಿಕತೆಗೆ ಅಡ್ಡಿಯಾಗಿದೆ ಎಂದಿದ್ದಾರೆ. ಅಲ್ಲದೆ, ಇರಾನ್‌ನ 9 ತೈಲ ಟ್ಯಾಂಕರ್‌ಗಳನ್ನು ಅಮೆರಿಕ ಧ್ವಂಸಗೊಳಿಸಿದೆ ಎಂದು ಹೇಳಿ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿಸಿದ್ದಾರೆ.

ಯುದ್ಧ ನಿಲ್ಲಿಸಲು ಪುಟಿನ್ ರೆಡಿ, ಆದರೆ ನಾಯಕರ ವೈಯಕ್ತಿಕ ದ್ವೇಷವೇ ಅಡ್ಡಿ: ಟ್ರಂಪ್ ಸ್ಫೋಟಕ ಹೇಳಿಕೆ
ಟ್ರಂಪ್
Image Credit source: News 18

Updated on: Sep 10, 2026 | 10:33 AM

ವಾಷಿಂಗ್ಟನ್, ಸೆಪ್ಟೆಂಬರ್ 10: ರಷ್ಯಾ ಮತ್ತು ಉಕ್ರೇನ್ ನಡುವಿನ ಭೀಕರ ಯುದ್ಧವನ್ನು ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶಾಂತಿ ಒಪ್ಪಂದಕ್ಕೆ ಸಿದ್ಧರಾಗಿದ್ದಾರೆ, ಆದರೆ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ತೀವ್ರ ವೈಯಕ್ತಿಕ ದ್ವೇಷವೇ ರಾಜತಾಂತ್ರಿಕತೆಗೆ ಅಡ್ಡಿಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಇರಾನ್ ಸಂಘರ್ಷದ ಕುರಿತು ಮಾತನಾಡಿದ ಅವರು, ಅಮೆರಿಕ ಸೇನೆಯು ಇರಾನ್‌ನ 9 ತೈಲ ಟ್ಯಾಂಕರ್‌ಗಳನ್ನು ಸಂಪೂರ್ಣವಾಗಿ ಹೊಡೆದುರುಳಿಸಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪುಟಿನ್ ಜೊತೆ ಉತ್ತಮ ಸಂಭಾಷಣೆ: ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಸಮಾವೇಶಕ್ಕೆ ತೆರಳುವ ಮುನ್ನ ಮಾತನಾಡಿದ ಟ್ರಂಪ್, “ನಾನು ಪುಟಿನ್ ಜೊತೆ ಉತ್ತಮ ಮಾತುಕತೆ ನಡೆಸಿದ್ದೇನೆ. ಅವರು ಒಪ್ಪಂದ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಝೆಲೆನ್ಸ್ಕಿ ಕೂಡ ಇದಕ್ಕೆ ಒಪ್ಪಿದರೆ ಒಳ್ಳೆಯದು. ಆದರೆ ಪರಸ್ಪರ ದ್ವೇಷಿಸುವ ಈ ಇಬ್ಬರು ನಾಯಕರು ಒಟ್ಟಿಗೆ ಕುಳಿತು ಮಾತನಾಡುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಇರಾನ್‌ನ 9 ಹಡಗುಗಳು ಧ್ವಂಸ: ಮಧ್ಯಪ್ರಾಚ್ಯದ ಉದ್ವಿಗ್ನತೆಯ ಬಗ್ಗೆ ಗುಡುಗಿದ ಟ್ರಂಪ್, “ಅಮೆರಿಕ ನೌಕಾಪಡೆ ಇರಾನ್‌ನ ಒಂಬತ್ತು ಹಡಗು ಮತ್ತು ತೈಲ ಟ್ಯಾಂಕರ್‌ಗಳನ್ನು ಧ್ವಂಸಗೊಳಿಸಿದೆ. ದಾಳಿಗಳು ನಮ್ಮಿಂದಲೇ ನಡೆದಿವೆ ಮತ್ತು ಮುಂದಿನ ದಿನಗಳಲ್ಲಿ ಇರಾನ್ ಇನ್ನೂ ಹೆಚ್ಚಿನ ಹೊಡೆತ ಎದುರಿಸಬೇಕಾಗುತ್ತದೆ” ಎಂದು ಗುಡುಗಿದರು.

ಚುನಾವಣೆ ಹಾಗೂ ಪರಮಾಣು ಬೆದರಿಕೆ: ಇರಾನ್ ಅಮೆರಿಕ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಟ್ರಂಪ್, ಅಮೆರಿಕದಲ್ಲಿ ದುರ್ಬಲ ಆಡಳಿತ ಬಂದರೆ ತಾನು ಸುಲಭವಾಗಿ ಪರಮಾಣು ಅಸ್ತ್ರ ಹೊಂದಬಹುದು ಎಂಬುದು ಇರಾನ್ ಲೆಕ್ಕಾಚಾರ. ಆದರೆ ನಾವು ಕೇವಲ ಪರಮಾಣು ಒಪ್ಪಂದಕ್ಕೆ ಸೀಮಿತವಾಗದೆ, ಹಿಂದೆಂದೂ ಚರ್ಚಿಸದ ಕಠಿಣ ಷರತ್ತುಗಳನ್ನು ಅವರ ಮುಂದಿಡಲಿದ್ದೇವೆ ಎಂದರು.

ಮತ್ತಷ್ಟು ಓದಿ: ಉಕ್ರೇನ್ ನೆಲದಲ್ಲೇ ನಿಂತು ಪಾಶ್ಚಿಮಾತ್ಯರಿಗೆ ಜೈಶಂಕರ್ ಪಾಠ: ರಷ್ಯಾ ತೈಲ ಖರೀದಿ ನಿಲ್ಲಿಸಿದರೆ ಯುದ್ಧ ಮುಗಿಯುವುದಿಲ್ಲ

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಸಂಘರ್ಷ: ಇತ್ತೀಚೆಗೆ ಕೆಂಪು ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ನೌಕಾ ಹಡಗುಗಳ ಮೇಲೆ ಕ್ಷಿಪಣಿ ದಾಳಿಗಳು ನಡೆದ ಬೆನ್ನಲ್ಲೇ, ಅಮೆರಿಕವು ಇರಾನ್‌ನ ತೈಲ ಸಾಗಣೆ ಹಡಗುಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿರುವುದು ಸಂಘರ್ಷವನ್ನು ಮತ್ತಷ್ಟು ಕಾವೇರಿಸಿದೆ.

ಉಕ್ರೇನ್ ಶಾಂತಿ ಸೂತ್ರಕ್ಕೆ ಅಮೆರಿಕ ಒತ್ತಡ: ಯುರೋಪಿಯನ್ ಮಿತ್ರರಾಷ್ಟ್ರಗಳು ಉಕ್ರೇನ್‌ಗೆ ನಿರಂತರ ಶಸ್ತ್ರಾಸ್ತ್ರ ಪೂರೈಸುತ್ತಿದ್ದರೂ, ಯುದ್ಧವನ್ನು ತಕ್ಷಣ ನಿಲ್ಲಿಸಲು ರಷ್ಯಾ ಜೊತೆ ಮಾತುಕತೆ ನಡೆಸಬೇಕೆಂದು ಟ್ರಂಪ್ ಆರಂಭದಿಂದಲೂ ಪ್ರತಿಪಾದಿಸುತ್ತಿದ್ದಾರೆ. ಆದರೆ ಉಕ್ರೇನ್ ತನ್ನ ಭೂಪ್ರದೇಶವನ್ನು ಬಿಟ್ಟುಕೊಡದೆ ಒಪ್ಪಂದಕ್ಕೆ ಬರಲು ಸಿದ್ಧವಿಲ್ಲದಿರುವುದು ಮಾತುಕತೆಗೆ ದೊಡ್ಡ ಹಿನ್ನಡೆಯಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us