ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದೆ. ಮುಂಬೈ ದಾಳಿ ಮಾದರಿಯಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ವಿಯೆನ್ನಾದ 6 ಕಡೆ ಏಕಕಾಲಕ್ಕೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ.
ಉಗ್ರರ ಫೈರಿಂಗ್‌ನಲ್ಲಿ ಓರ್ವ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಇನ್ನು ಪೊಲೀಸರು ಓರ್ವ ಶಂಕಿತ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಉಗ್ರರು ಹಿಲ್ಟನ್ ಹೋಟೆಲ್‌ನಲ್ಲಿ ಪ್ರವಾಸಿಗರನ್ನು ಬಂಧಿಯಾಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಜೊತೆಗೆ ಇತರೆ ಕೆಲ ಪ್ರದೇಶಗಳಲ್ಲಿ ಸಹ ಗುಂಡಿನ ದಾಳಿಯ ನಡೆಯುತ್ತಿದೆ. ಸದ್ಯ ಆಸ್ಟ್ರಿಯಾ ಸರಕಾರ ಸೇನೆಯನ್ನು ಕಣಕ್ಕಿಳಿಸಿದ್ದು, ವಿಯೆನ್ನಾ ನಗರದಾದ್ಯಂತ ಹೈ ಅಲರ್ಟ ಘೋಷಿಸಲಾಗಿದೆ. ಸಾರಿಗೆ ವ್ಯವಸ್ಥೆ ಸ್ಥಗಿತಗೊಳಿಸಿ ಭದ್ರತಾ ಪಡೆಗಳು ತಮ್ಮ ವಶಕ್ಕೆ ತೆಗೆದುಕೊಂಡಿವೆ.