ಮೋದಿಯನ್ನ Good Friend ಎಂದ ಟ್ರಂಪ್, ಭಾರತಕ್ಕೆ ನೀಡುತ್ತಿರುವ ಕೊಡುಗೆ ಏನು?

|

Updated on: May 16, 2020 | 11:40 AM

ವಾಷಿಂಗ್ಟನ್: ಕ್ರೂರಿ ಕೊರೊನಾ ವೈರಸ್​ಗೆ ಇಡೀ ವಿಶ್ವವೇ ಪತರಗುಟ್ಟಿ ಹೋಗಿದೆ. ಈವರೆಗೆ ಜಗತ್ತಿನಲ್ಲಿ ಕೊರೊನಾ ಕ್ರಿಮಿಗೆ 3 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಕೊವಿಡ್ ವಿರುದ್ಧ ಹೋರಾಡಲು ಭಾರತದ ಜೊತೆ ಕೈಜೋಡಿಸುವುದಾಗಿ ವಿಶ್ವದ ದೊಡ್ಡಣ್ಣ ತಿಳಿಸಿದ್ದಾರೆ. ಕೊರೊನಾ ವಿರುದ್ಧ ಭಾರತದ ಜೊತೆಗೂಡಿ ಹೋರಾಟ ಮಾಡುತ್ತೇವೆ. ಲಸಿಕೆ ಅಭಿವೃದ್ಧಿಗೆ ಭಾರತದೊಂದಿಗೆ ಕೈಜೋಡಿಸುತ್ತೇವೆ. ಅಲ್ಲದೆ, ಭಾರತಕ್ಕೆ ಉಚಿತವಾಗಿ ವೆಂಟಿಲೇಟರ್ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ […]

ಮೋದಿಯನ್ನ Good Friend ಎಂದ ಟ್ರಂಪ್, ಭಾರತಕ್ಕೆ ನೀಡುತ್ತಿರುವ ಕೊಡುಗೆ ಏನು?
Follow us on

ವಾಷಿಂಗ್ಟನ್: ಕ್ರೂರಿ ಕೊರೊನಾ ವೈರಸ್​ಗೆ ಇಡೀ ವಿಶ್ವವೇ ಪತರಗುಟ್ಟಿ ಹೋಗಿದೆ. ಈವರೆಗೆ ಜಗತ್ತಿನಲ್ಲಿ ಕೊರೊನಾ ಕ್ರಿಮಿಗೆ 3 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಕೊವಿಡ್ ವಿರುದ್ಧ ಹೋರಾಡಲು ಭಾರತದ ಜೊತೆ ಕೈಜೋಡಿಸುವುದಾಗಿ ವಿಶ್ವದ ದೊಡ್ಡಣ್ಣ ತಿಳಿಸಿದ್ದಾರೆ.

ಕೊರೊನಾ ವಿರುದ್ಧ ಭಾರತದ ಜೊತೆಗೂಡಿ ಹೋರಾಟ ಮಾಡುತ್ತೇವೆ. ಲಸಿಕೆ ಅಭಿವೃದ್ಧಿಗೆ ಭಾರತದೊಂದಿಗೆ ಕೈಜೋಡಿಸುತ್ತೇವೆ. ಅಲ್ಲದೆ, ಭಾರತಕ್ಕೆ ಉಚಿತವಾಗಿ ವೆಂಟಿಲೇಟರ್ ನೀಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ನನ್ನ ಗುಡ್ ಫ್ರೆಂಡ್, ಭಾರತ ಮತ್ತು ನರೇಂದ್ರ ಮೋದಿ ಜೊತೆಗೆ ನಾವಿದ್ದೇವೆ. ಕಣ್ಣಿಗೆ ಕಾಣದ ಶತ್ರುವನ್ನು ಒಟ್ಟಾಗಿ ಎದುರಿಸಲಿದ್ದೇವೆ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.

Published On - 9:52 am, Sat, 16 May 20