ಸ್ವಯಂ-ಗಡೀಪಾರು ಕಾರ್ಯಕ್ರಮ ಆರಂಭಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್

ಮತ್ತೆ ಅಕ್ರಮ ವಲಸಿಗರ ಗಡಿಪಾರು ಕ್ರಮವನ್ನು ಆರಂಭಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಬಾರಿ ತುಂಬಾ ವಿಶೇಷವಾಗಿದೆ. ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್​​ ಹಾಗೂ ಬೋನಸ್​​ ಕೂಡ ನೀಡಿದ್ದಾರೆ. ಟ್ರಂಪ್ ಸ್ವಯಂ-ಗಡೀಪಾರು ಕಾರ್ಯಕ್ರಮ ಎಂದು ಕರೆದಿದ್ದಾರೆ. ಈ ಯೋಜನೆಯಲ್ಲಿ ದೇಶವನ್ನು ಶಾಶ್ವತವಾಗಿ ನಿರ್ಗಮಿಸಲು ಯೋಜಿಸುವವರಿಗೆ ನಿರ್ಗಮನ ಬೋನಸ್ ಮತ್ತು ಉಚಿತ ವಿಮಾನ ಟಿಕೆಟ್ ಅನ್ನು ಒಳಗೊಂಡಿದೆ. ಈ ಬಗ್ಗೆ ಡೊನಾಲ್ಡ್ ಟ್ರಂಪ್ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಸ್ವಯಂ-ಗಡೀಪಾರು ಕಾರ್ಯಕ್ರಮ ಆರಂಭಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್
ಅಮೆರಿಕ ಅಧ್ಯಕ್ಷ ಡೊನಾಲ್ಡ್

Updated on: May 10, 2025 | 11:57 AM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅಕ್ರಮ ವಲಸಿಗರು (illegal immigrants) ಸ್ವಯಂಪ್ರೇರಣೆಯಿಂದ ದೇಶವನ್ನು ತೊರೆಯಲು ವಿಶೇಷ ಕಾರ್ಯಯೋಜನೆಯೊಂದಕ್ಕೆ ಸಹಿ ಹಾಕಿದ್ದಾರೆ. ತನ್ನ ದೇಶದಲ್ಲಿರುವ ಅಕ್ರಮ ವಲಸಿಗರಿಗೆ ದೇಶ ಬಿಡಲು ಈ ಹಿಂದೆ ಹೇಳಿದ್ದರು. ಇದೀಗ ದೇಶ ಬಿಟ್ಟು ಹೋಗಲು ವಿಶೇಷ ಕಾರ್ಯಕ್ರಮವೊಂದು ತಂದಿದ್ದಾರೆ. ಸ್ವಯಂ-ಗಡೀಪಾರು ಕಾರ್ಯಕ್ರಮ ಆರಂಭಿಸುವ ಮೂಲಕ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಯೋಜನೆಯಲ್ಲಿ ದೇಶವನ್ನು ಶಾಶ್ವತವಾಗಿ ನಿರ್ಗಮಿಸಲು ಯೋಜಿಸುವವರಿಗೆ ನಿರ್ಗಮನ ಬೋನಸ್ ಮತ್ತು ಉಚಿತ ವಿಮಾನ ಟಿಕೆಟ್ ಅನ್ನು ಒಳಗೊಂಡಿದೆ. ಈ ಬಗ್ಗೆ ಡೊನಾಲ್ಡ್ ಟ್ರಂಪ್ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಯೋಜನೆಗಾಗಿ ಒಂದು ಆ್ಯಪ್​​​​ನ್ನು ಕೂಡ ಬಿಡುಗಡೆ ಮಾಡಲಾಗಿದೆ. ಈ ಆ್ಯಪ್​​​ ಮೂಲಕ ಎಲ್ಲ ಮಾಹಿತಿಗಳನ್ನು ನೀಡಲಾಗುವುದು ಹಾಗೂ ಆ್ಯಪ್​​​ ಮೂಲಕವೇ ವಿಮಾನ ಬುಕ್​ ಕೂಡ ಮಾಡಬಹುದು.

ಸ್ವಯಂ- ಗಡೀಪಾರು ಬಗ್ಗೆ ಮಾತನಾಡಿದ ಅವರು, ಇಂದು, ಮೊದಲ ಸ್ವಯಂ-ಗಡೀಪಾರು ಕಾರ್ಯಕ್ರಮವನ್ನು ಪ್ರಾರಂಭಿಸಲು ನಾನು ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದೇನೆ. ಈ ವೇಳೆ ಅಕ್ರಮ ವಲಸಿಗರಿಗೆ ಗಂಭೀರ ಶಿಕ್ಷೆಯ ಎಚ್ಚರಿಕೆ ನೀಡಿದರು. ತಾವಾಗಿಯೇ ಹೊರಹೋಗದಿದ್ದರೆ ಒತ್ತಾಯದ ಮೂಲಕ ಗಡೀಪಾರು ಸೇರಿದಂತೆ, ಅನೇಕ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಮೆರಿಕದಲ್ಲಿ ಉಳಿದುಕೊಂಡಿರುವ ಅಕ್ರಮ ವಿದೇಶಿಯರನ್ನು ಈಗಾಗಲೇ ಒತ್ತಾಯಪೂರಕವಾಗಿ ಹೊರ ಹಾಕಲಾಗಿದೆ. ಎಲ್ಲಾ ಅಕ್ರಮ ವಿದೇಶಿಯರಿಗೆ ನಿಮ್ಮ ಉಚಿತ ವಿಮಾನವನ್ನು ಈಗಲೇ ಬುಕ್ ಮಾಡಿ ಎಂದು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:

ಅಕ್ರಮ ವಲಸಿಗರು ಅಮೆರಿಕವನ್ನು ತೊರೆಯುವುದನ್ನು ನಾವು ಸಾಧ್ಯವಾದಷ್ಟು ಸುಲಭಗೊಳಿಸುತ್ತಿದ್ದೇವೆ. ಯಾವುದೇ ಅಕ್ರಮ ವಲಸಿಗರು ವಿಮಾನ ನಿಲ್ದಾಣದಲ್ಲಿ ಬಂದು ನಮ್ಮ ದೇಶದಿಂದ ಉಚಿತ ವಿಮಾನಯಾಣವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಇನ್ನು ಟ್ರಂಪ್​​ ಸರ್ಕಾರ ಅಕ್ರಮ ವಲಸಿಗರು ತಮ್ಮ ಸ್ವಯಂ ಗಡೀಪಾರು ಮಾಡುವಿಕೆಗೆ ಮತ್ತಷ್ಟು ಪ್ರೋತ್ಸಾಹಿಸಲು ಬಹಳ ಮುಖ್ಯವಾದ ನಿರ್ಗಮನ ಬೋನಸ್ ಯೋಜನೆಗಳನ್ನು ತಂದಿದ್ದಾರೆ. ಒಂದು ವೇಳೆ ಅಕ್ರಮ ವಲಸಿಗರು ಅಮೆರಿಕ ಬಿಡಲು ನಿರಾಕರಿಸಿದ್ದಾರೆ ಅಥವಾ ಮತ್ತೆ ಇಲ್ಲಿ ಉಳಿಯಲು ಆಯ್ಕೆ ಮಾಡಿದ್ರೆ, ಅಕ್ರಮವಾಗಿ ಉಳಿದಿದ್ದಾರೆ. ಅವರಿಗೆ ಕಠಿಣ ಜೈಲು ಶಿಕ್ಷೆ, ದೊಡ್ಡ ಮಟ್ಟದ ಆರ್ಥಿಕ ದಂಡಗಳು, ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಎಲ್ಲಾ ವೇತನಗಳ ನಿರ್ಬಂಧ, ಜೈಲು ಶಿಕ್ಷೆ ಮತ್ತು ಸೆರೆವಾಸ, ಒತ್ತಾಯ ಪೂರಕ ಗಡೀಪಾರು ಸೇರಿದಂತೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಾಲ ನೀಡುವ ಐಎಂಎಫ್ ವೋಟಿಂಗ್​ನಲ್ಲಿ ಭಾರತ ಮತದಾನ ಮಾಡದ್ದು ಯಾಕೆ? ಇಲ್ಲಿದೆ ಕಾರಣ

ನಾವು ನಿಮ್ಮನ್ನು ಅಮೆರಿಕದಿಂದ ಹೊರಹಾಕಲು ಬಯಸುತ್ತೇವೆ, ಆದರೆ ನೀವು ನಿಜವಾಗಿಯೂ ಒಳ್ಳೆಯವರಾಗಿದ್ದರೆ, ನಾವು ನಿಮಗೆ ಮತ್ತೆ ಒಳಗೆ ಬರಲು ಸಹಾಯ ಮಾಡಲು ಪ್ರಯತ್ನಿಸುತ್ತೇವೆ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್​ ಹೇಳಿದ್ದಾರೆ. ಈ ದೇಶಕ್ಕೆ ಬೈಡನ್ ಮಾಡಿದ್ದನ್ನು ಎಂದಿಗೂ ವಿವರಿಸಲು ಸಾಧ್ಯವಿಲ್ಲ, ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಈ ಗಡೀಪಾರು ಬೋನಸ್ ಅಮೆರಿಕದ ತೆರಿಗೆದಾರರಿಗೆ ಶತಕೋಟಿ ಉಳಿಸಲಿದೆ ಎಂದು ಎಂದು ಅವರು ಮಾಜಿ ಅಧ್ಯಕ್ಷ ಜೋ ಬೈಡನ್ ಅವರನ್ನು ಟೀಕಿಸಿದರು. ವಾರದ ಆರಂಭದಲ್ಲಿ, ಯುಎಸ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಅವರು ಟ್ರಂಪ್ ಆಡಳಿತವು ತಮ್ಮ ತಾಯ್ನಾಡಿಗೆ ಸ್ವಯಂ-ಗಡೀಪಾರು ಮಾಡುವ ದಾಖಲೆರಹಿತ ವಲಸಿಗರಿಗೆ $1,000 (ಸುಮಾರು ₹ 83,500) ಮತ್ತು ಪ್ರಯಾಣ ಸಹಾಯವನ್ನು ನೀಡುತ್ತದೆ ಎಂದು ಹೇಳಿದರು.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ