ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿರುವ ಮೋದಿ ಭಾರತಕ್ಕೆ ಅತ್ಯುತ್ತಮ ನಾಯಕ ಎಂದು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್

ಖ್ಯಾತ ಹಾಲಿವುಡ್ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್(Mary Millben) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಹೊಗಳಿದ್ದಾರೆ. ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಎಂದು ಮೇರಿ ಹೇಳಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಜನರು ಮೋದಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ, ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿರುವ ಮೋದಿ ಭಾರತಕ್ಕೆ ಅತ್ಯುತ್ತಮ ನಾಯಕ ಎಂದು ಹೊಗಳಿದ ಅಮೆರಿಕದ ಗಾಯಕಿ ಮೇರಿ ಮಿಲ್ಬೆನ್
ಮೇರಿ
Image Credit source: India Today

Updated on: Jan 19, 2024 | 9:50 AM

ಖ್ಯಾತ ಹಾಲಿವುಡ್ ನಟಿ ಹಾಗೂ ಗಾಯಕಿ ಮೇರಿ ಮಿಲ್ಬೆನ್(Mary Millben) ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ(Narendra Modi) ಯನ್ನು ಹೊಗಳಿದ್ದಾರೆ. ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಾಯಕ ಎಂದು ಮೇರಿ ಹೇಳಿದ್ದಾರೆ. ಅಮೆರಿಕದಲ್ಲಿ ಬಹಳಷ್ಟು ಜನರು ಮೋದಿಯನ್ನು ಮತ್ತೆ ನೋಡಲು ಬಯಸುತ್ತಿದ್ದಾರೆ, ಇದರಿಂದ ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಹೇಳಿದರು.

41 ವರ್ಷದ ಮಿಲ್ಬೆನ್ ಪ್ರಧಾನಿ ಮತ್ತೊಮ್ಮೆ ಗೆಲ್ಲುವ ಹಾದಿಯಲ್ಲಿದ್ದಾರೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ, ಅಮೆರಿಕದಲ್ಲಿ ಪ್ರಧಾನಿಗೆ ಸಾಕಷ್ಟು ಬೆಂಬಲವಿದೆ. ಅನೇಕ ಮಂದಿ ಪ್ರಧಾನಿಯನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಯನ್ನು ಅಲಂಕರಿಸುವುದ ನೋಡಲು ಬಯಸುತ್ತಾರೆ.

ಜನಗಣಮನ ಹಾಗೂ ಓಂ ಜೈ ಜಗದೀಶ ಹರೇ ಕಾರ್ಯಕ್ರಮದ ಬಳಿಕ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಿದೆ.
ಭಾರತವು 2024ರ ಲೋಕಸಭಾ ಚುನಾವಣೆಯತ್ತ ಸಾಗುತ್ತಿದೆ, ಈ ನವೆಂಬರ್​ನಲ್ಲಿ ಅಮೆರಿಕ ಅಧ್ಯಕ್ಷಈಯ ಚುನಾವಣೆಯತ್ತ ಸಾಗುತ್ತದೆ. ಮೇರಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಅವರನ್ನು ಬೆಂಬಲಿಸುತ್ತಾರೆ.

ಮತ್ತಷ್ಟು ಓದಿ: Narendra Modi US Visit: ಪ್ರಧಾನಿ ಮೋದಿ ಅಮೆರಿಕ ಭೇಟಿ: ಉಭಯ ದೇಶಗಳ ನಡುವೆ ಹೊಸ ಒಪ್ಪಂದಗಳ ಭರವಸೆ

ಜೂನ್​ನಲ್ಲಿ ಪ್ರಧಾನಿ ಮೋದಿ ಪ್ರವಾಸದ ಸಂದರ್ಭದಲ್ಲಿ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇರಿ ಜನಗಣಮನ ಹಾಡಿದ್ದರು. ಇದು ರಹಸ್ಯವಲ್ಲ, ನಾನು ಪ್ರಧಾನಿ ಮೋದಿಯ ದೊಡ್ಡ ಬೆಂಬಲಿಗ ಎಂದು ಇಡೀ ಭಾರತಕ್ಕೆ ತಿಳಿದಿದೆ ಮತ್ತು ಅವರು ಭಾರತಕ್ಕೆ ಉತ್ತಮ ನಾಯಕ ಎಂದು ನಾನು ಭಾವಿಸುತ್ತೇನೆ ಎಂದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us