Bipin Rawat: ಸಿಡಿಎಸ್​ ಬಿಪಿನ್​ ರಾವತ್ ನಿಧನಕ್ಕೆ ಯುಎಸ್​ ಉನ್ನತ ಅಧಿಕಾರಿಗಳ ಸಂತಾಪ; ಅವರೊಬ್ಬ ಉತ್ತಮ ಸ್ನೇಹಿತ ಎಂದ ರಕ್ಷಣಾ ಕಾರ್ಯದರ್ಶಿ

| Updated By: Lakshmi Hegde

Updated on: Dec 09, 2021 | 8:57 AM

ಯುಎಸ್​ನ ರಕ್ಷಣಾ ಸಿಬ್ಬಂದಿಗಳ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್​ ಮಾರ್ಕ್ ಮಿಲ್ಲೆ ಕೂಡ ಬಿಪಿನ್​ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತೀಯ ಸೇನೆ ಮೇಲೆ ಬಿಪಿನ್​ ರಾವತ್ ಬೀರಿರುವ ಪ್ರಭಾವ ಎಂದಿಗೂ ನೆನಪಿಟ್ಟುಕೊಳ್ಳುವಂಥದ್ದು ಎಂದಿದ್ದಾರೆ.

Bipin Rawat: ಸಿಡಿಎಸ್​ ಬಿಪಿನ್​ ರಾವತ್ ನಿಧನಕ್ಕೆ ಯುಎಸ್​ ಉನ್ನತ ಅಧಿಕಾರಿಗಳ ಸಂತಾಪ; ಅವರೊಬ್ಬ ಉತ್ತಮ ಸ್ನೇಹಿತ ಎಂದ ರಕ್ಷಣಾ ಕಾರ್ಯದರ್ಶಿ
ಬಿಪಿನ್​ ರಾವತ್​
Follow us on

ತಮಿಳುನಾಡಿನ ಕೂನೂರ್​​ನಲ್ಲಿ ನಡೆದ ಸೇನಾ ಹೆಲಿಕಾಪ್ಟರ್​ ಪತನದಲ್ಲಿ ಸಿಡಿಎಸ್​ ಬಿಪಿನ್​ ರಾವತ್​ ಮೃತಪಟ್ಟಿದ್ದಾರೆ. ರಾವತ್​ ನಿಧನಕ್ಕೆ ಯುಎಸ್​ ರಾಜ್ಯ ಕಾರ್ಯದರ್ಶಿ ಅಂತೋನಿ ಬ್ಲಿಂಕೆನ್​ ಮತ್ತು ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್​ ಸಂತಾಪ ಸೂಚಿಸಿದ್ದಾರೆ.  ಭಾರತೀಯ ಡಿಫೆನ್ಸ್ ಸ್ಟಾಫ್​ ಮುಖ್ಯಸ್ಥ ಜನರಲ್​ ಬಿಪಿನ್​ ರಾವತ್​, ಅವರ ಪತ್ನಿ ಮತ್ತು ಸಹೋದ್ಯೋಗಿಗಳು ಇಂದು ಒಂದು ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಇದು ನೋವಿನ ಸಂಗತಿ. ಬಿಪಿನ್​ ರಾವತ್​ ಅವರ ದೇಶಕ್ಕೆ ಸೇವೆ ಸಲ್ಲಿಸುವ ಜತೆಗೆ, ಯುಎಸ್​-ಭಾರತ ರಕ್ಷಣಾ ಸಂಬಂಧಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬ್ಲಿಂಕೆನ್​ ಹೇಳಿದ್ದಾರೆ. 

ನಂತರ ಮಾತನಾಡಿದ ಯುಎಸ್​ ರಕ್ಷಣಾ ಕಾರ್ಯದರ್ಶಿ ಆಸ್ಟಿನ್​, ಯುಎಸ್​-ಭಾರತ ನಡುವಿನ ರಕ್ಷಣಾ ಸಹಭಾಗಿತ್ವದಲ್ಲಿ ಜನರಲ್​ ರಾವತ್​ ಅವರು ಒಂದು ಅಳಿಸಲಾಗದ ಗುರುತು ಬಿಟ್ಟುಹೋಗಿದ್ದಾರೆ. ಹಾಗೇ, ಅವರು ಭಾರತೀಯ ಸಶಸ್ತ್ರಪಡೆಗಳ ಸಂಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು. ಹಾಗೇ, ಈ ವರ್ಷದ ಪ್ರಾರಂಭದಲ್ಲಿ ನಾನು ಬಿಪಿನ್​ ರಾವತ್​ರನ್ನು ಭೇಟಿಯಾಗಿದ್ದೆ. ಅವರು ಯುಎಸ್​​ನ ಮೌಲ್ಯಯುತ ಸ್ನೇಹಿತ ಮತ್ತು ಪಾಲುದಾರ ಎಂಬುದು ಸತ್ಯವಾಗಿತ್ತು ಎಂದರು.

ಹಾಗೇ. ಯುಎಸ್​ನ ರಕ್ಷಣಾ ಸಿಬ್ಬಂದಿಗಳ ಜಂಟಿ ಮುಖ್ಯಸ್ಥರ ಅಧ್ಯಕ್ಷ ಜನರಲ್​ ಮಾರ್ಕ್ ಮಿಲ್ಲೆ ಕೂಡ ಬಿಪಿನ್​ ರಾವತ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತೀಯ ಸೇನೆ ಮೇಲೆ ಬಿಪಿನ್​ ರಾವತ್ ಬೀರಿರುವ ಪ್ರಭಾವ ಎಂದಿಗೂ ನೆನಪಿಟ್ಟುಕೊಳ್ಳುವಂಥದ್ದು. ಹಾಗೇ, ಯುಎಸ್​-ಭಾರತ ಮಿಲಿಟರಿ ಸಂಬಂಧದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು ಪೊಲೀಸರಿಂದ ರಸ್ತೆ ಮಾರ್ಗ ವ್ಯವಸ್ಥೆಯಾಗಿತ್ತು, ಆದರೆ ರಾವತ್ ಪ್ಲ್ಯಾನ್ ಪ್ರಕಾರ ಹೆಲಿಕಾಪ್ಟರ್​​ನಲ್ಲಿ​​ ಪ್ರಯಾಣ

Published On - 8:54 am, Thu, 9 December 21