ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್

|

Updated on: Jul 02, 2020 | 7:21 AM

ಮಹಾಮಾರಿ ಕೊರೊನಾದಿಂದಾಗಿ ಪ್ರತಿಷ್ಠಿತ, ಹೆಸರು ಮಾಡಿದ್ದ ಅದೆಷ್ಟೂ ಕಂಪನಿಗಳು ಬಂದ್ ಆಗುತ್ತಿವೆ. ಈಗ ಅದೇ ಸಾಲಿನಲ್ಲಿ ಅಮೆರಿಕದ ಅತಿದೊಡ್ಡ ಪಿಜ್ಜಾ ಹಟ್ ಮತ್ತು ವೆಂಡಿಯ ಫ್ರ್ಯಾಂಚೈಸೀ ಎನ್‌ಪಿಸಿ ಇಂಟರ್ನ್ಯಾಷನಲ್ ಇಂಕ್ ಸೇರಿಕೊಳ್ಳುತ್ತಿದೆ. 1,200 ಕ್ಕೂ ಹೆಚ್ಚು ಪಿಜ್ಜಾ ಹಟ್ ಮತ್ತು ಸುಮಾರು 400 ವೆಂಡಿ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿರುವ ಕಂಪನಿಯು, ಕೊರೊನಾ ವೈರಸ್ ಸೋಂಕಿನಿಂದಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಕಂಪನಿ ಸುಮಾರು 1 ಬಿಲಿಯನ್​ನಷ್ಟು ಭಾರೀ ಸಾಲದ ಹೊರೆ ಮತ್ತು ಹೆಚ್ಚುತ್ತಿರುವ ಕಾರ್ಮಿಕ ಮತ್ತು ಆಹಾರ ವೆಚ್ಚಗಳು ಸೇರಿದಂತೆ […]

ಕೊರೊನಾ ಎಫೆಕ್ಟ್! ದಿವಾಳಿ ಘೋಷಿಸಿದ ಪಿಜ್ಜಾ ಹಟ್
Follow us on

ಮಹಾಮಾರಿ ಕೊರೊನಾದಿಂದಾಗಿ ಪ್ರತಿಷ್ಠಿತ, ಹೆಸರು ಮಾಡಿದ್ದ ಅದೆಷ್ಟೂ ಕಂಪನಿಗಳು ಬಂದ್ ಆಗುತ್ತಿವೆ. ಈಗ ಅದೇ ಸಾಲಿನಲ್ಲಿ ಅಮೆರಿಕದ ಅತಿದೊಡ್ಡ ಪಿಜ್ಜಾ ಹಟ್ ಮತ್ತು ವೆಂಡಿಯ ಫ್ರ್ಯಾಂಚೈಸೀ ಎನ್‌ಪಿಸಿ ಇಂಟರ್ನ್ಯಾಷನಲ್ ಇಂಕ್ ಸೇರಿಕೊಳ್ಳುತ್ತಿದೆ.

1,200 ಕ್ಕೂ ಹೆಚ್ಚು ಪಿಜ್ಜಾ ಹಟ್ ಮತ್ತು ಸುಮಾರು 400 ವೆಂಡಿ ರೆಸ್ಟೋರೆಂಟ್‌ಗಳನ್ನು ನಿರ್ವಹಿಸುತ್ತಿರುವ ಕಂಪನಿಯು, ಕೊರೊನಾ ವೈರಸ್ ಸೋಂಕಿನಿಂದಾಗಿ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿದೆ. ಕಂಪನಿ ಸುಮಾರು 1 ಬಿಲಿಯನ್​ನಷ್ಟು ಭಾರೀ ಸಾಲದ ಹೊರೆ ಮತ್ತು ಹೆಚ್ಚುತ್ತಿರುವ ಕಾರ್ಮಿಕ ಮತ್ತು ಆಹಾರ ವೆಚ್ಚಗಳು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಾಗೂ ಎನ್‌ಪಿಸಿ ಕಂಪನಿಯ ಅತಿದೊಡ್ಡ ಫ್ರ್ಯಾಂಚೈಸೀ ಆಗಿರುವ ಪಿಜ್ಜಾ ಹಟ್ ಕೂಡ ಇತ್ತೀಚೆಗೆ ತನ್ನ ತಿನಿಸುಗಳನ್ನು ಮಾರಾಟ ಮಾಡಲು ಹೋರಾಡುತ್ತಿದೆ. ಹೀಗಾಗಿ ಬಹಳಷ್ಟು ನಷ್ಟದಲ್ಲಿರುವ ಕಂಪನಿ ಬಂದ್​ಗೆ ಮುಂದಾಗಿದೆ.