ಮಗುವಿನೊಂದಿಗೆ ಹೆಲಿಕಾಪ್ಟರ್‌ನಿಂದ ಇಳಿಯುವಾಗ ಮೆಟ್ಟಿಲಿನಲ್ಲಿ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ

ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ ಮಗುವಿನೊಂದಿಗೆ ಹೆಲಿಕಾಪ್ಟರ್‌ನಿಂದ ಇಳಿಯುವಾಗ ಮೆಟ್ಟಿಲಿನಲ್ಲಿ ಎಡವಿದ ವಿಡಿಯೋ ವೈರಲ್ ಆಗಿದೆ. ಬಳಿಯಿದ್ದ ಭದ್ರತಾ ಸಿಬ್ಬಂದಿ ಸಹಾಯಕ್ಕೆ ಬಾರದಿರುವುದು ಆನ್‌ಲೈನ್‌ನಲ್ಲಿ ಚರ್ಚೆ ಹುಟ್ಟುಹಾಕಿದೆ. ಮಗು ಸುರಕ್ಷಿತವಾಗಿದ್ದು, ಉಷಾ ಸಮತೋಲನ ಕಾಯ್ದುಕೊಂಡರು. ಈ ಘಟನೆ ಮೇರಿಲ್ಯಾಂಡ್‌ನಲ್ಲಿ ನಡೆದಿದ್ದು, ಕುಟುಂಬ ಅಲಾಸ್ಕಾ ಪ್ರವಾಸಕ್ಕೆ ತೆರಳಿತ್ತು. ಘಟನೆ ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಗುವಿನೊಂದಿಗೆ ಹೆಲಿಕಾಪ್ಟರ್‌ನಿಂದ ಇಳಿಯುವಾಗ ಮೆಟ್ಟಿಲಿನಲ್ಲಿ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ
ಉಷಾ ವ್ಯಾನ್ಸ್​

Updated on: Oct 06, 2026 | 2:18 PM

ವಾಷಿಂಗ್ಟನ್, ಅಕ್ಟೋಬರ್ 06: ಮಗುವಿನೊಂದಿಗೆ ಹೆಲಿಕಾಪ್ಟರ್​ನಿಂದ ಇಳಿಯುವಾಗ ಮೆಟ್ಟಿಲಿನಲ್ಲಿ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್​ ಪತ್ನಿ ಉಷಾ ಎಡವಿರುವ ವಿಡಿಯೋ ವೈರಲ್ ಆಗಿದೆ. ಎಡವಿರುವ ವಿಚಾರಕ್ಕಿಂತ ಅಲ್ಲೇ ಎದುರು ಭದ್ರತಾ ಸಿಬ್ಬಂದಿ ನಾಲ್ಕೈದು ಮಂದಿ ನಿಂತಿದ್ದರೂ ಕೂಡ ಯಾರೂ ಅವರ ಸಹಾಯಕ್ಕೆ ಬಾರದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಲ್ಲಿಯ ಕಾನೂನು ಏನು ಹೇಳುತ್ತೆ ಎಂಬುದರ ಕುರಿತು ಮಾಹಿತಿ ಲಭ್ಯವಿಲ್ಲ. ಉಷಾ ವ್ಯಾನ್​ಸ್​ ಸಮತೋಲನ ಮೊದಲು ಸಮತೋಲನ ಕಳೆದುಕೊಂಡರು ಬಳಿಕ ನೆಲಕ್ಕೆ ಬೀಳದಂತೆ ಹೇಗೋ ಸಮತೋಲನ ಕಾಯ್ದುಕೊಂಡರು.

ಅಕ್ಟೋಬರ್ 5ರಂದು ಮೇರಿಲ್ಯಾಂಡ್‌ನ ಜಾಯಿಂಟ್ ಬೇಸ್ ಆಂಡ್ರ್ಯೂಸ್‌ನಲ್ಲಿ ಈ ಘಟನೆ ನಡೆದಿದೆ. ಉಷಾ ತಮ್ಮ ಸುಮಾರು ಒಂಬತ್ತು ವಾರಗಳ ಮಗ ಅಲೆಕ್ ನೀಲ್ ವ್ಯಾನ್ಸ್‌ನನ್ನು ಬೇಬಿ ಕ್ಯಾರಿಯರ್‌ನಲ್ಲಿ ಹೊತ್ತುಕೊಂಡು ಹೆಲಿಕಾಪ್ಟರ್‌ನಿಂದ ಇಳಿಯುತ್ತಿದ್ದರು. ವಿಡಿಯೋದಲ್ಲಿ ಅವರು ಕೆಳಗಿನ ಮೆಟ್ಟಿಲುಗಳ ಬಳಿ ಎಡವಿದರೂ ತಕ್ಷಣವೇ ರೇಲಿಂಗ್ ಹಿಡಿದು ಬೀಳುವುದನ್ನು ತಪ್ಪಿಸಿರುವುದು ಕಾಣಬಹುದು.

ಮಗು ಸುರಕ್ಷಿತ

ಎಡವಿದ ಬಳಿಕ ಉಷಾ ಕೆಲವು ಕ್ಷಣ ಮಗುವಿನತ್ತ ಗಮನ ಹರಿಸಿದರು. ನಂತರ ನಗುತ್ತಾ ಪರಿಸ್ಥಿತಿ ಸರಿಯಾಗಿದೆ ಎಂಬಂತೆ ಕಾಣಿಸಿಕೊಂಡರು. ಮಗುವಿಗೆ ಯಾವುದೇ ಗಾಯವಾದ ವರದಿ ಇಲ್ಲ.ಉಷಾ ಅವರ ಹಿಂದೆ ಜೆ.ಡಿ. ವ್ಯಾನ್ಸ್ ತಮ್ಮ ನಾಲ್ಕು ವರ್ಷದ ಮಗಳು ಮಿರಾಬೆಲ್‌ರನ್ನು ಕರೆದುಕೊಂಡು ಬರುತ್ತಿದ್ದರು. ಬಳಿಕ ಕುಟುಂಬ ಒಟ್ಟಾಗಿ ಅಲಾಸ್ಕಾಗೆ ತೆರಳಿತು.

ಪೋಸ್ಟ್​

ಭದ್ರತೆ ಬಗ್ಗೆ ಆನ್‌ಲೈನ್ ಚರ್ಚೆ

ಉಷಾ ಎಡವಿದಾಗ ಸಮೀಪದಲ್ಲಿದ್ದ ಕೆಲ ಸೇನಾ ಸಿಬ್ಬಂದಿ ತಕ್ಷಣ ಸಹಾಯಕ್ಕೆ ಬರದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು, ನವಜಾತ ಮಗುವನ್ನು ಹೊತ್ತುಕೊಂಡಿದ್ದ ಉಷಾ ಅವರಿಗೆ ಯಾರಾದರೂ ತಕ್ಷಣ ನೆರವಾಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.ಆದರೆ ಈ ವಿಡಿಯೋ ಆಧರಿಸಿ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಿದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಘಟನೆಯ ಬಗ್ಗೆ ಅಧಿಕೃತವಾಗಿ ಯಾವುದೇ ಭದ್ರತಾ ಉಲ್ಲಂಘನೆ ಘೋಷಿಸಲಾಗಿಲ್ಲ.

ಮತ್ತಷ್ಟು ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವಾನ್ಸ್ ಹಾಗು ಕುಟುಂಬದಿಂದ 4 ದಿನ ಭಾರತ ಪ್ರವಾಸ; ಏನಿದೆ ಅವರ ಅಜೆಂಡಾ?

ಅಲಾಸ್ಕಾ ಪ್ರವಾಸ ಏಕೆ?

ಜೆ.ಡಿ. ವ್ಯಾನ್ಸ್ ಅವರು ಅಲಾಸ್ಕಾದ ಫೇರ್‌ಬ್ಯಾಂಕ್ಸ್‌ನಲ್ಲಿ ರಿಪಬ್ಲಿಕನ್ ಸೆನೆಟರ್ ಡ್ಯಾನ್ ಸುಲ್ಲಿವನ್ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದರು. ಉಷಾ ಮತ್ತು ಮಕ್ಕಳೂ ಅವರೊಂದಿಗೆ ಪ್ರಯಾಣಿಸಿದ್ದರು. ಜೆ.ಡಿ. ವ್ಯಾನ್ಸ್ ಪ್ರಕಾರ, ಈ ಪ್ರವಾಸ ಉಷಾಗೆ ವಿಶೇಷವಾಗಿತ್ತು. ಅಲಾಸ್ಕಾ ಅವರು ಭೇಟಿ ನೀಡಬೇಕಿದ್ದ ಕೊನೆಯ ಅಮೆರಿಕನ್ ರಾಜ್ಯವಾಗಿತ್ತು. ಹೀಗಾಗಿ ನವಜಾತ ಮಗುವಿನೊಂದಿಗೆ ಅವರು ಈ ಪ್ರವಾಸ ಕೈಗೊಂಡಿದ್ದಾರೆ. ಕೆಲವೇ ಸೆಕೆಂಡುಗಳ ಈ ಎಡವಟ್ಟಿನ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಉಷಾ ವ್ಯಾನ್ಸ್ ಅವರ ಪ್ರಯಾಣದ ವಿಡಿಯೋ ವ್ಯಾಪಕ ಗಮನ ಸೆಳೆಯುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us