ಅತ್ತ ಕೊರೊನಾ ವಿರುದ್ಧ ಹೋರಾಡಲು ಅಮೆರಿಕ ಪರದಾಡುತ್ತಿರುವ ಸಂದರ್ಭದಲ್ಲೇ, ಫ್ಲಾರಿಡಾದಲ್ಲಿ ಹಬ್ಬಿರುವ ಬೆಂಕಿ ಸಾವಿರಾರು ಹೆಕ್ಟೆರ್ ಅರಣ್ಯ ಪ್ರದೇಶವನ್ನ ಭಸ್ಮ ಮಾಡಿದೆ. ನೂರಾರು ಮಂದಿ ಮನೆ ಕಳೆದುಕೊಂಡು ಬೀದಿಗೆ ಬಿದ್ದಿದ್ದು, ಸೋಂಕಿನ ಜೊತೆ ಟ್ರಂಪ್ಗೆ ಹೊಸ ತಲೆನೋವು ಶುರುವಾಗಿದೆ.
13 ಲಕ್ಷ ಜನರಿಗೆ ‘ಕೊರೊನಾ’:
ಅಮೆರಿಕದಲ್ಲಿ ನಿನ್ನೆಯೂ ಕೂಡ ಸಾವಿರಕ್ಕೂ ಹೆಚ್ಚು ಜನ ಕೊರೊನಾ ಸೋಂಕಿನಿಂದ ಜೀವ ಬಿಟ್ಟಿದ್ದಾರೆ. ಈಗಾಗ್ಲೇ 78 ಸಾವಿರ ಅಮೆರಿಕನ್ನರು ಕೊರೊನಾ ಸೋಂಕಿನಿಂದ ಉಸಿರು ಚೆಲ್ಲಿದ್ರೆ 13 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಅಟ್ಯಾಕ್ ಆಗಿದೆ. ಪರಿಸ್ಥಿತಿ ಕ್ಷಣಕ್ಷಣಕ್ಕೂ ಬಿಗಡಾಯಿಸುತ್ತಿದೆ.
ಲ್ಯಾಟಿನ್ ಅಮೆರಿಕ ಪರಿಸ್ಥಿತಿ ಭೀಕರ:
ಲ್ಯಾಟಿನ್ ಅಮೆರಿಕದಲ್ಲೂ ಕೊರೊನಾ ಭೀಕರವಾಗಿ ಹಬ್ಬಿದ್ದು, ಬ್ರೆಜಿಲ್ನಲ್ಲಿ ಸುಮಾರು 10 ಸಾವಿರ ಸೋಂಕಿತರು ಈ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ನಿನ್ನೆ ಕೂಡ 800ಕ್ಕೂ ಹೆಚ್ಚು ಬ್ರೆಜಿಲ್ ನಿವಾಸಿಗಳನ್ನ ಕೊರೊನಾ ಬಲಿಪಡೆದಿದೆ. ಸರಿಯಾದ ಚಿಕಿತ್ಸೆ ಸಿಗದೆ ಸಾವಿರಾರು ಜನ ಬಳಲುವಂತಾಗಿದೆ.
ಚೀನಿ ಪ್ರಜೆಗಳ ಕಿರಿಕ್:
ನೇಪಾಳದ ಕಠ್ಮಂಡುವಿನಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದ ಚೀನಿ ಪ್ರಜೆಗಳನ್ನ ಪೊಲೀಸರು ಬಂಧಿಸಿದ್ದಾರೆ. ಲಾಕ್ಡೌನ್ ರೂಲ್ಸ್ ಬ್ರೇಕ್ ಮಾಡಿದ್ದು ಅಲ್ಲದೇ ಚೀನಿಯರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ನೇಪಾಳ ಪೊಲೀಸರು ಲಾಠಿಚಾರ್ಜ್ ಮಾಡಿ ಎಲ್ಲರನ್ನೂ ಅರೆಸ್ಟ್ ಮಾಡಿದ್ದಾರೆ.
ಪುಟಿನ್ಗೆ ಹೊಸ ತಲೆನೋವು..!
ರಷ್ಯಾದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಒಂದೇ ಸಮನೆ ಹೆಚ್ಚಾಗುತ್ತಿದ್ದು, ಸುಮಾರು 3 ಲಕ್ಷಕ್ಕೂ ಹೆಚ್ಚು ಜನಕ್ಕೆ ಕೊರೊನಾ ಹರಡಿರುವ ಶಂಕೆ ವ್ಯಕ್ತವಾಗಿದೆ. ಈ ಮೊದಲು ಕೊರೊನಾ ಭೀತಿಯಿಂದ ರಷ್ಯಾ ಲಾಕ್ಡೌನ್ ಆಗಿತ್ತು. ಆದ್ರೆ ಮತ್ತೆ ಆರ್ಥಿಕ ಚಟುವಟಿಕೆಗಳು ಆರಂಭವಾಗಿದ್ದ ಪರಿಣಾಮ ಭೀಕರ ಪರಿಸ್ಥಿತಿ ಎದುರಾಗಿದೆ.