ಒಂದು ವರ್ಷದ ಕಂದಮ್ಮನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು 10 ದಿನಗಳ ಕಾಲ ಟ್ರಿಪ್​ಗೆ ಹೋದ ತಾಯಿ, ಹಸಿವಿನಿಂದ ಅತ್ತೂ ಅತ್ತೂ ಮಗು ಸಾವು

|

Updated on: Jun 26, 2023 | 2:16 PM

ಮಕ್ಕಳು ಕೆಟ್ಟವರಿರಬಹುದು ಆದರೆ ಎಂದೂ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ಮಾತು ಎಲ್ಲರೂ ಕೇಳಿರುತ್ತೀರಿ. ಆದರೆ ಈ ಸುದ್ದಿ ಕೇಳಿದರೆ ನಿಮ್ಮ ಕಣ್ಣಂಚಲ್ಲಿ ನೀರು ಬಾರದೇ ಇರದು.

ಒಂದು ವರ್ಷದ ಕಂದಮ್ಮನನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು 10 ದಿನಗಳ ಕಾಲ ಟ್ರಿಪ್​ಗೆ ಹೋದ ತಾಯಿ, ಹಸಿವಿನಿಂದ ಅತ್ತೂ ಅತ್ತೂ ಮಗು ಸಾವು
ಕ್ರಿಸ್ಟೆಲ್
Follow us on

ಮಕ್ಕಳು ಕೆಟ್ಟವರಿರಬಹುದು ಆದರೆ ಎಂದೂ ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ಮಾತು ಎಲ್ಲರೂ ಕೇಳಿರುತ್ತೀರಿ. ಆದರೆ ಈ ಸುದ್ದಿ ಕೇಳಿದರೆ ನಿಮ್ಮ ಕಣ್ಣಂಚಲ್ಲಿ ನೀರು ಬಾರದೇ ಇರದು. ತಾಯಿಯೊಬ್ಬಳು 16 ತಿಂಗಳ ಮಗುವನ್ನು ಮನೆಯಲ್ಲಿ ಬಿಟ್ಟು 10 ದಿನಗಳ ಪ್ರವಾಸಕ್ಕೆ ತೆರಳಿದ್ದಳು, ಆಕೆ ವಾಪಸ್ ಬರುವಷ್ಟರೊಳಗೆ ಹೆಣ್ಣು ಮಗು ಡಿಹೈಡ್ರೇಷನ್​ನಿಂದ ಸಾವನ್ನಪ್ಪಿರುವ ಘಟನೆ ಅಮೆರಿಕದಲ್ಲಿ ವರದಿಯಾಗಿದೆ. ತಾಯಿ ತ್ಯಾಗ ಮಯಿ ತನ್ನ ಮಕ್ಕಳ ಸುಖ ಸಂತೋಷಕ್ಕಾಗಿ ತನ್ನ ಸರ್ವಸ್ವವನ್ನೇ ತ್ಯಾಗ ಮಾಡುತ್ತಾಳೆ. ಯಾವುದೇ ಕಷ್ಟ ಬರಲಿ ತನ್ನ ಜೀವವನ್ನು ಪಣಕ್ಕಿಟ್ಟಾದರೂ ಮಗುವನ್ನು ರಕ್ಷಿಸಿಕೊಳ್ಳುತ್ತಾಳೆ ಆದರೆ ಈ ಮಹಿಳೆಗೆ ತಾಯಿ ಎಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ.

ಓಹಿಯೋದ ಕ್ರಿಸ್ಟಲ್ ಎ. ಕ್ಯಾಂಡೆಲಾರಿಯೊ ತನ್ನ ಹೆಣ್ಣು ಮಗು ಜೈಲಿನ್ ಅನ್ನು ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಳು. ಕೆಲವು ಗಂಟೆಗಳ ಕಾಲ ಅಲ್ಲ, ಆದರೆ 10 ದಿನಗಳವರೆಗೆ ಆಕೆ ಮನೆಗೆ ಬರಲೇ ಇಲ್ಲ.

ಮತ್ತಷ್ಟು ಓದಿ: ಪ್ರೀತಿ ವಿರೋಧಿಸಿ ಯುವತಿ ತಂದೆಯಿಂದ ಯುವಕನ ಮೇಲೆ ಹಲ್ಲೆ; ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ತನ್ನ ಮಗುವನ್ನು ನೋಡಿಕೊಳ್ಳಿ ಎಂದು ಅಕ್ಕಪಕ್ಕದ ಮನೆಯವರನ್ನು ಕೇಳಿಕೊಂಡಿದ್ದಳು. ಆದರೆ ಮತ್ಯಾವತ್ತೂ ಯಾರಿಗೂ ಆಕೆ ಕರೆ ಮಾಡಲಿಲ್ಲ, ಹಾಗಾದರೆ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ಎಲ್ಲರೂ ಸುಮ್ಮನಿದ್ದರು. ಹೊಟ್ಟೆಗೆ ಏನೂ ಇಲ್ಲದೆ ಮಗು ಮೃತಪಟ್ಟಿದೆ.

ತಾಯಿ ವಿರುದ್ಧ ಪ್ರಕರಣ ದಾಖಲು
ಜೂನ್ 16 ರಂದು ಪೊಲೀಸರು ಜೆಲಿನ್ ಅವರ ಮನೆಗೆ ತಲುಪಿದಾಗ ಅಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಪೊಲೀಸರು  ಮನೆಗೆ ತಲುಪಿದಾಗ, ಕೊಳಕು ಹೊದಿಕೆಯ ಮೇಲೆ ಮಗು ಮಲಗಿರುವುದು ಕಂಡುಬಂದಿದೆ ಎಂದು ಪೊಲೀಸರು ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ತಾಯಿ ಕ್ರಿಸ್ಟಲ್ ಕ್ಯಾಂಡೆಲಾರಿಯೊ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಯಾಕಾಗಿ ಮಗುವನ್ನು ಬಿಟ್ಟು ತಾಯಿ ಅಷ್ಟು ದೂರ ಹೋಗಿದ್ದು ಎನ್ನುವ ಕುರಿತು ಇನ್ನೂ ಮಾಹಿತಿ ತಿಳಿಯಬೇಕಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ