ಪಿಸಿಓಎಸ್‌ನಿಂದ ಬಳಲುತ್ತಿರುವ ಅಮೆರಿಕದ ಈ ಮಹಿಳೆಯ ಗಡ್ಡ ಗಿನ್ನೆಸ್ ದಾಖಲೆಗೆ ಸೇರ್ಪಡೆ

|

Updated on: Aug 14, 2023 | 1:35 PM

ಇದು ನಿಜವಾಗಿಯೂ ಗಡ್ಡವನ್ನು ಬೆಳೆಸುವಲ್ಲಿ ನನ್ನ ಆತ್ಮವಿಶ್ವಾಸವನ್ನು ಬೆಳೆಸಲು ನನಗೆ ಅವಕಾಶವನ್ನು ನೀಡಿತು. ಮಾಸ್ಕ್ ಧರಿಸಿ ಸಾರ್ವಜನಿಕವಾಗಿ ಹೊರಗೆ ಹೋಗುವುದರಿಂದ ಆತ್ಮವಿಶ್ವಾಸವೂ ಹೆಚ್ಚಿತು. ಇಷ್ಟು ಉದ್ದನೆಯ ಗಡ್ಡವನ್ನು ಹೊಂದಿರುವ ಜೀವನ ಕೂಡಾ ಅನುಗ್ರಹಿತ. ಇದು ಡಬಲ್ ಚಿನ್​​ನ್ನು ಮರೆ ಮಾಡಿದರೂ, ಕೆಲವೊಮ್ಮೆ ಕಿರಿಕಿರಿ ಅನಿಸುತ್ತದೆ ಅಂತಾರೆ ಎರಿನ್ ಹನಿಕಟ್

ಪಿಸಿಓಎಸ್‌ನಿಂದ ಬಳಲುತ್ತಿರುವ ಅಮೆರಿಕದ ಈ ಮಹಿಳೆಯ ಗಡ್ಡ ಗಿನ್ನೆಸ್ ದಾಖಲೆಗೆ ಸೇರ್ಪಡೆ
ಎರಿನ್ ಹನಿಕಟ್
Follow us on

ವಾಷಿಂಗ್ಟನ್ ಆಗಸ್ಟ್ 14: ಅಮೆರಿಕದ ಮಿಷಿಗನ್‌ನ (Michigan) 38 ವರ್ಷದ ಮಹಿಳೆಯೊಬ್ಬರು ಉದ್ದದ ಗಡ್ಡ ಹೊಂದಿದ್ದು, ಇದು ಗಿನ್ನೆಸ್ ವಿಶ್ವದಾಖಲೆಯಾಗಿದೆ (Guinness World Record). ಎರಿನ್ ಹನಿಕಟ್ (Erin Honeycutt) ತನ್ನ 11.8-ಇಂಚಿನ (29.9 cm) ಗಡ್ಡವನ್ನು ಸುಮಾರು ಎರಡು ವರ್ಷಗಳಿಂದ ಬೆಳೆಸುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ. 25.5 ಸೆಂ.ಮೀ ಹಿಂದಿನ ದಾಖಲೆಯು ಯುಎಸ್‌ನ 75 ವರ್ಷದ ವಿವಿಯನ್ ವೀಲರ್‌ಗೆ ಸೇರಿತ್ತು. ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್‌ನ ಪರಿಣಾಮದಿಂದ ಈಕೆಗೆ ಗಡ್ಡ ಬೆಳೆದಿದೆ. ಈ ಸ್ಥಿತಿಯು ಹಾರ್ಮೋನುಗಳ ಅಸಮತೋಲನ ಮತ್ತು ಅನಿಯಮಿತ ಮುಟ್ಟು, ತೂಕ ಹೆಚ್ಚಾಗುವುದು ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ.

ಎರಿನ್ ಹನಿಕಟ್ ದಿನಕ್ಕೆ ಮೂರು ಬಾರಿ ಶೇವ್ ಮಾಡಬೇಕಿತ್ತು. ಈಗ ಈಕೆ ತನ್ನ ಗಡ್ಡದ ಬಗ್ಗೆ ಹೆಮ್ಮೆಪಡುತ್ತಾಳೆ. 13ನೇ ಹರೆಯದಲ್ಲಿ ಆಕೆಗೆ ಗಡ್ಡ ಬೆಳೆಯಲು ತೊಡಗಿದಾಗ ಆಕೆ ಅದನ್ನು ಶೇವ್ ಮಾಡುತ್ತಿದ್ದಳು. ಕೂದಲು ಬೆಳೆಯದಂತೆ ಹಲವು ಉತ್ಪನ್ನಗಳನ್ನು ಬಳಸಿದರೂ ಪ್ರಯೋಜನವಾಗಲಿಲ್ಲ.

ನಾನು ಬಹುಶಃ ದಿನಕ್ಕೆ ಕನಿಷ್ಠ ಮೂರು ಬಾರಿ ಕ್ಷೌರ ಮಾಡುತ್ತಿದ್ದೆ. ಕೂದಲು ಬೆಳೆದಾದಲೆಲ್ಲಾ ಅದನ್ನು ಶೇವ್ ಮಾಡಿ ತೆಗೆಯುವುದೇ ಕೆಲಸ ಆಗುತ್ತಿತ್ತು ಎಂದು ಆಕೆ ಹೇಳಿದ್ದಾರೆ.


ಆದಾಗ್ಯೂ, ಅಧಿಕ ರಕ್ತದೊತ್ತಡದಿಂದಾಗಿ ಕಣ್ಣಿಗೆ ಪಾರ್ಶ್ವವಾಯವಾಗಿ ಸ್ವಲ್ಪ ದೃಷ್ಟಿ ಕಳೆದುಕೊಂಡ ಮೇಲೆ ಆಕೆ ಅವಳು ಶೇವಿಂಗ್ ಮಾಡುವುದನ್ನು ನಿಲ್ಲಿಸಲು ನಿರ್ಧರಿಸಿದಳು. ಕೋವಿಡ್-ಲಾಕ್‌ಡೌನ್ ಸಮಯದಲ್ಲಿ ಗಡ್ಡ ಬೆಳೆಯಲು ಬಿಟ್ಟಾಗ ಈಕೆಯ ಸಂಗಾತಿ ಜೆನ್ ಅದಕ್ಕೆ ಪ್ರೋತ್ಸಾಹಿಸಿದಳು.

ಇದು ನಿಜವಾಗಿಯೂ ಗಡ್ಡವನ್ನು ಬೆಳೆಸುವಲ್ಲಿ ನನ್ನ ಆತ್ಮವಿಶ್ವಾಸವನ್ನು ಬೆಳೆಸಲು ನನಗೆ ಅವಕಾಶವನ್ನು ನೀಡಿತು. ಮಾಸ್ಕ್ ಧರಿಸಿ ಸಾರ್ವಜನಿಕವಾಗಿ ಹೊರಗೆ ಹೋಗುವುದರಿಂದ ಆತ್ಮವಿಶ್ವಾಸವೂ ಹೆಚ್ಚಿತು. ಇಷ್ಟು ಉದ್ದನೆಯ ಗಡ್ಡವನ್ನು ಹೊಂದಿರುವ ಜೀವನ ಕೂಡಾ ಅನುಗ್ರಹಿತ. ಇದು ಡಬಲ್ ಚಿನ್​​ನ್ನು ಮರೆ ಮಾಡಿದರೂ, ಕೆಲವೊಮ್ಮೆ ಕಿರಿಕಿರಿ ಅನಿಸುತ್ತದೆ.

ಇದನ್ನೂ ಓದಿ: ಬಾಹ್ಯಾಕಾಶದಿಂದ ಹಿಮಾಲಯದ ಅದ್ಭುತ ಪೋಟೋಗಳನ್ನು ಹಂಚಿಕೊಂಡ ಯುಎಇ ಗಗನಯಾತ್ರಿ

ನಾನು ಗಿನ್ನೆಸ್ ದಾಖಲೆ ಪುಸ್ತಕ ಸೇರಲು ಈ ಗಡ್ಡ ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ, ಇದು ನನಗೆ ಸ್ವಾಭಾವಿಕವಾಗಿ ಸಂಭವಿಸುವ ಸಂಗತಿಯಾಗಿದ್ದರೂ ಸಹ ಗುರುತಿಸಲ್ಪಡುವುದು ಒಂದು ರೀತಿಯ ಸಂತೋಷದ ವಿಷಯ.

ಅನೇಕ ಮಹಿಳೆಯರು ಆಕೆ ಸ್ಪೂರ್ತಿ ಎಂದಿದ್ದಾರೆ. ‘ಅವಳನ್ನು ಹಾಗೆ ಒಪ್ಪಿಕೊಳ್ಳಲು ಸಾಧ್ಯವಾಗಿದ್ದಕ್ಕಾಗಿ ನಾನು ಅವಳನ್ನು ಪ್ರಾಮಾಣಿಕವಾಗಿ ಗೌರವಿಸುತ್ತೇನೆ. ಇದು ಅವಳ ಆತ್ಮ ಮತ್ತು ಸಕಾರಾತ್ಮಕ ಮನಸ್ಥಿತಿಗೆ ಸಾಕ್ಷಿ ಎಂದು ನಾನು ಭಾವಿಸುತ್ತೇನೆ. ಅವಳು ಈಗ ಎಷ್ಟು ಸ್ವತಂತ್ರಳಾಗಿದ್ದಾಳೆಂದು ನಾನು ಊಹಿಸಬಲ್ಲೆ ಎಂದು ಬಳಕದಾರರೊಬ್ಬರು ಪ್ರತಿಕ್ರಿಯಿಸಿದ್ದು, ಈಗ ಇದು ನಿಜವಾದ ವಿಶ್ವ ದಾಖಲೆಯಾಗಿದೆ ಎಂದು ಮತ್ತೊಬ್ಬರು ಕಾಮೆಂಟಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ