ಗ್ರ್ಯಾಂಡ್ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದಲ್ಲಿ 100 ಅಡಿ ಕಂದಕಕ್ಕೆ ಬಿದ್ದ ಬಾಲಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾಲು

ಗ್ರ್ಯಾಂಡ್ ಕ್ಯಾನ್ಯನ್​ಗೆ  13 ವರ್ಷದ ಬಾಲಕನೊಬ್ಬ ಕುಟುಂಬದವರ ಜತೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಗ್ರ್ಯಾಂಡ್ ಕ್ಯಾನ್ಯನ್‌ ರಾಷ್ಟ್ರೀಯ ಉದ್ಯಾನನದಲ್ಲಿ ಬಂಡೆಯ ಮೇಲೆ ಕುಳಿತಿರುವಾಗ ಆಯತಪ್ಪಿ 100 ಅಡಿ ಕೆಳಗೆ ಕಂದಕಕ್ಕೆ ಬಿದ್ದಿದ್ದಾನೆ.

ಗ್ರ್ಯಾಂಡ್ ಕ್ಯಾನ್ಯನ್  ರಾಷ್ಟ್ರೀಯ ಉದ್ಯಾನದಲ್ಲಿ 100 ಅಡಿ ಕಂದಕಕ್ಕೆ ಬಿದ್ದ ಬಾಲಕ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾಲು
ಗ್ರ್ಯಾಂಡ್​ ಕ್ಯಾನ್ಯನ್Image Credit source: NDTV
Follow us
ನಯನಾ ರಾಜೀವ್
|

Updated on:Aug 14, 2023 | 9:41 AM

ಗ್ರ್ಯಾಂಡ್ ಕ್ಯಾನ್ಯನ್​ಗೆ  13 ವರ್ಷದ ಬಾಲಕನೊಬ್ಬ ಕುಟುಂಬದವರ ಜತೆಯಲ್ಲಿ ಪ್ರವಾಸಕ್ಕೆ ತೆರಳಿದ್ದ ಸಮಯದಲ್ಲಿ ಭಾರಿ ಅನಾಹುತ ಸಂಭವಿಸಿದೆ. ಗ್ರ್ಯಾಂಡ್ ಕ್ಯಾನ್ಯನ್‌ ರಾಷ್ಟ್ರೀಯ ಉದ್ಯಾನನದಲ್ಲಿ ಬಂಡೆಯ ಮೇಲೆ ಕುಳಿತಿರುವಾಗ ಆಯತಪ್ಪಿ 100 ಅಡಿ ಕೆಳಗೆ ಕಂದಕಕ್ಕೆ ಬಿದ್ದಿದ್ದಾನೆ. ಸತತ ಎರಡು ಗಂಟೆಗಳ ಕಾಲ ಆತನನ್ನು ಹುಡುಕಲಾಯಿತು, ಕೊನೆಗೂ ಆತ ಜೀವಂತವಾಗಿ ಸಿಕ್ಕಿದ್ದಾನೆ.

9 ಮೂಳೆಗಳು ಮುರಿದಿವೆ, ಶ್ವಾಸಕೋಶಕ್ಕೂ ಪೆಟ್ಟು ಬಿದ್ದಿದೆ, ಕೈಕಾಲುಗಳು ಮುರಿದಿವೆ, ಬೆರಳುಗಳಿಗೂ ತೊಂದರೆಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆತರಲಾಯಿತು. ನಮ್ಮ ಮಗನನ್ನು ಜೀವಂತವಾಗಿ ನೋಡುತ್ತೇನೆ ಎನ್ನುವ ಭರವಸೆಯೇ ಹೊರಟುಹೋಗಿದ್ದು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.

ಫೋಟೊ ತೆಗೆಯುವ ವೇಳೆ ಕಲ್ಲು ಬಂಡೆಗಳ ನಡುವೆ ಕುಳಿತಿದ್ದೆ, ಅಲ್ಲಿಂದಲೇ ಜಾರಿ ಬಿದ್ದೆ, ಹಿಡಿದುಕೊಳ್ಳಲು ಏನೂ ಸಿಗಲಿಲ್ಲ, ಕೊನೆಗೆ ಮತ್ತೊಂದು ಕಲ್ಲನ್ನು ಹಿಡಿದುಕೊಂಡೆ ತುಂಬಾ ಹೊತ್ತು ಅದನ್ನೂ ಹಿಡಿದುಕೊಳ್ಳಲು ಆಗದೆ ಕೆಳಗೆ ಬಿದ್ದೆ, ಬಿದ್ದ ಬಳಿಕ ಏನೂ ನೆನಪಿಲ್ಲ ಸ್ವಲ್ಪ ಎಚ್ಚರವಾಗುವಷ್ಟರಲ್ಲಿ ಆಂಬ್ಯುಲೆನ್ಸ್​ನಲ್ಲಿದ್ದೆ, ಗ್ರ್ಯಾಂಡ್​ ಕ್ಯಾನ್ಯನ್ ರಾಷ್ಟ್ರೀಯ ಉದ್ಯಾನದ ತಂಡವು ಬಾಲಕನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದೆ.

ಮತ್ತಷ್ಟು ಓದಿ: Mexico Bus Accident: ಬಸ್​ ಕಂದಕಕ್ಕೆ ಬಿದ್ದು ಭಾರತೀಯರು ಸೇರಿ 18 ಮಂದಿ ಸಾವು, 20 ಜನರಿಗೆ ಗಂಭೀರ ಗಾಯ

ಗ್ರ್ಯಾಂಡ್ ಕ್ಯಾನ್ಯನ್​ಗೆ ಅಮೆರಿಕಾದ ಅರಿಜೊನ ಪ್ರಾಂತ್ಯದಲ್ಲಿ, ಇದು ಕೊಲೆರಾಡೋ ನದಿಯ ಕೊರೆತದಿಂದ ಉಂಟಾದ ಕಂದರಗಳನ್ನು ಒಳಗೊಂಡಿದೆ.ಇದು ಪ್ರಪಂಚದ ಏಳು ಪ್ರಾಕೃತಿಕ ಅದ್ಭುತಗಳಲ್ಲಿ ಒಂದಾಗಿದೆ. ಗ್ರ್ಯಾಂಡ್ ಕ್ಯಾನ್ಯನ್ 446 ಕಿ.ಮೀ.ಉದ್ದವಾಗಿದ್ದು ,29 ಕಿ.ಮೀ ಆಗಲವಾಗಿದೆ. ಇದರ ಆಳ ಕೆಲವು ಕಡೆಗಳಲ್ಲಿ 1800 ಮೀಟರ್‍ಗಳಷ್ಟು ಇದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:41 am, Mon, 14 August 23

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ