ಧೂಮಪಾನ ಮಾಡುವುದು ಅಥವಾ ತಂಬಾಕು ಸೇವನೆಯು ಆರೋಗ್ಯಕ್ಕೆ ಹಾನಿಕರ. ಅದೆಷ್ಟೋ ಆರೋಗ್ಯ ಸಮಸ್ಯೆಗಳಿಗೆ ಇವುಗಳ ಸೇವನೆಯೇ ಕಾರಣ. ಆರೊಗ್ಯಕ್ಕೆ ದುಷ್ಪರಿಣಾಮ ಬೀರುವ ತಂಬಾಕು ಮತ್ತು ಸಿಗರೇಟ್ ಸೇವನೆಯ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಪ್ರತೀ ವರ್ಷ ಮೇ 31ರಂದು ಆಚರಿಸಲಾಗುತ್ತದೆ. ಈ ದಿನದ ಉದ್ದೇಶವು ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಇವುಗಳ ಬಳಕೆಯನ್ನು ಕಡಿಮೆ ಮಾಡುವುದಾಗಿದೆ.
ಧೂಮಪಾನ ಸೇವನೆಯನ್ನು ತ್ಯಜಿಸಿದರೆ ಆದಷ್ಟು ಬೇಗ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಹಾಗಾಗಿ ಆರೋಗ್ಯದ ಮೇಲೆ ತಂಬಾಕಿನ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಲು ಹಲವಾರು ಅಭಿಯಾನಗಳು, ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರತೀ ವರ್ಷ ವಿಶ್ವ ತಂಬಾಕು ರಹಿತ ದಿನವನ್ನು ಉತ್ತೇಜಿಸುತ್ತದೆ. ಜತೆಗೆ ತಂಬಾಕು ಮತ್ತು ಧೂಮಪಾನ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಿಳಿಸುಔ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ತಂಬಾಕು ಬಳಕೆಯು ವಿಶ್ವದಾದ್ಯಂತ 8 ಲಕ್ಷಕ್ಕೂ ಹೆಚ್ಚು ಜನರನ್ನು ಕೊಲ್ಲುತ್ತಿದೆ. ಧೂಮಪಾನ ಮತ್ತು ತಂಬಾಕು ಸೇವನೆಯಿಂದಾಗಿ ಉಸಿರಾಟದ ತೊಂದರೆ ಎದುರಾಗುತ್ತದೆ. ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.
ವಿಶ್ವ ತಂಬಾಕು ರಹಿತ ದಿನದ ಸಂದೇಶ (ಥೀಮ್)
ಪ್ರತೀ ವರ್ಷವೂ ವಿಭಿನ್ನ ಆಲೋಚನೆಯಿಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ವಿಶ್ವ ತಂಬಾಕು ರಹಿತ ದಿನದ ಥೀಮ್ ಏನೆಂದರೆ “ಕಮಿಟ್ಸ್ ಟು ಕ್ವಿಟ್” ಅಂದರೆ ತ್ಯಜಿಸಲು ಬದ್ಧರಾಗಿರಿ ಎಂಬ ಅರ್ಥವನ್ನು ನೀಡುತ್ತದೆ. ಕೊರೊನಾ ಸೋಂಕು ಹರಡುವಿಕೆಯಿಂದಾಗಿ ಲಕ್ಷಾಂತರ ಜನರು ಧೂಮಪಾನ ಮತ್ತು ತಂಬಾಕು ಸೇವನೆಯನ್ನು ತ್ಯಜಿಸಲು ಬದ್ಧರಾಗಿದ್ದಾರೆ ಎಂಬ ಅರ್ಥವನ್ನು ನೀಡುತ್ತದೆ.
ವಿಶ್ವ ತಂಬಾಕು ರಹಿತ ದಿನದ ಇತಿಹಾಸ
ಕನಿಷ್ಟ 24 ಗಂಟೆಗಳ ಕಾಲವಾದರೂ ತಂಬಾಕು ಸೇವನೆಯನ್ನು ತಡೆಯಲು ವಿಶ್ವ ಸಂಸ್ಥೆ ಮೇ 1988 ರಂದು ವಿಶ್ವ ತಂಬಾಕು ರಹಿತ ದಿನವನ್ನು ಜಾರಿಗೆ ತಂದಿತು. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ 2008ರಲ್ಲಿ ತಂಬಾಕಿನ ಕುರಿತಾದ ಜಾಹಿರಾತುಗಳನ್ನು ನಿಷೇಧಿಸಿತು. ಬಹುಶಃ ಜಾಹಿರಾತುಗಳು ಯುವಕರನ್ನು ಧೂಮಪಾನದತ್ತ ಅಥವಾ ತಂಬಾಕು ಸೇವನೆಯತ್ತ ಸೆಳೆಯಲು ಸಹಾಯ ಮಾಡುತ್ತವೆ ಎಂದು ಭಾವಿಸಿ, ಜಾಹಿರಾತುಗಳಿಗೆ ನಿಷೇಧ ಹೇರಿತು.
ಇದನ್ನೂ ಓದಿ:
World No Tobacco Day 2021: ಸಿಗರೇಟ್ ಸೇವನೆ ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಮಾರ್ಗಗಳನ್ನು ಅನುಸರಿಸಿ