Sign In

By signing in or creating an account, you agree with Associated Broadcasting Company's Terms & Conditions and Privacy Policy.

Record number of smokers: ಕೊವಿಡ್​ ಕಾಲದಲ್ಲಿ ಸಿಗರೇಟ್​​ ಸೇದುವವರ ಸಂಖ್ಯೆ ಅತ್ಯಧಿಕವಾಯ್ತು! ಚೀನಾದಲ್ಲಿ ಅತಿ ಹೆಚ್ಚು

ಚೈನಾದಲ್ಲಿ ಚೈನ್​ ಸ್ಮೋಕರ್ಸ್​! 20 ದೇಶಗಳಲ್ಲಿ ಪುರುಷರು ಧೂಮಪಾನ ಅಭ್ಯಾಸ ಮಾಡಿಕೊಳ್ಳುವುದು ಜಾಸ್ತಿಯಾಗಿದ್ದರೆ 12 ದೇಶಗಳಲ್ಲಿ ಮಹಿಳೆಯರು ಧೂಮಪಾನಕ್ಕೆ ಶರಣಾಗುತ್ತಿದ್ದಾರೆ. ವಿಶ್ವದ ಶೇ. 70 ರಷ್ಟು ಸ್ಮೋಕರ್ಸ್​ 10 ದಶಗಳಲ್ಲಿದ್ದಾರೆ. ಕೊನೆಯ ಮಾತು... ಚೀನಾದಲ್ಲಿ ಮೂವರ ಪೈಕಿ ಒಬ್ಬರು (341 ದಶಲಕ್ಷ ಮಂದಿ) ಧೂಮಪಾನಕ್ಕೆ ದಾಸರಾಗಿದ್ದಾರೆ.

Record number of smokers: ಕೊವಿಡ್​ ಕಾಲದಲ್ಲಿ ಸಿಗರೇಟ್​​ ಸೇದುವವರ ಸಂಖ್ಯೆ ಅತ್ಯಧಿಕವಾಯ್ತು! ಚೀನಾದಲ್ಲಿ ಅತಿ ಹೆಚ್ಚು
Record number of smokers: ಕೊವಿಡ್​ ಕಾಲದಲ್ಲಿ ಸಿಗರೇಟ್​​ ಸೇದುವವರ ಸಂಖ್ಯೆ ಅತ್ಯಧಿಕವಾಯ್ತು! ಚೀನಾದಲ್ಲಿ ಅತಿ ಹೆಚ್ಚು
Follow us
ಸಾಧು ಶ್ರೀನಾಥ್​
|

Updated on: May 28, 2021 | 10:31 AM

ನವದೆಹಲಿ: ಇದು ಮಹಾಮಾರಿ ಕೊರೊನಾ ಕಾಲ ಕಣ್ರಪ್ಪಾ… ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರೂ ಮದ್ಯ ಸೇವಿಸುವವರು ಮತ್ತು ಧೂಮಪಾನ ಮಾಡುವವರು ಅತ್ಯಧಿಕವಾಗಿ ಅದನ್ನು ಸೇವಿಸಿದ್ದಾರೆ! ಹೌದು ಕೊವಿಡ್​ ಕಾಲದಲ್ಲಿ ಸಿಗರೇಟ್​​ ಸೇದುವವರ ಸಂಖ್ಯೆ ಅತ್ಯಧಿಕವಾಗಿದೆ. ಇದು ಸಾರ್ವಕಾಲಿಕ ದಾಖಲೆ! 2019ನೇ ಸಾಲಿನಲ್ಲಿ ಸ್ಮೋಕಿಂಗ್​ನಿಂದ 80 ಲಕ್ಷ ಮಂದಿ ಪ್ರಾಣಬಿಟ್ಟಿದ್ದಾರೆ. ಆದರೂ ಯುವಜನತೆ ಧೂಮಪಾನ ಮಾಡುವುದನ್ನು ಹೆಚ್ಚುಹೆಚ್ಚು ಅಭ್ಯಾಸ ಮಾಡಿಕೊಂಡಿದ್ದರಿಂದ ಇದೀಗ ಅವರ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿದೆ ಅನ್ನುತ್ತಿದೆ ಅಧ್ಯಯನ ವರದಿ.

ಲಾನ್ಸೆಟ್​ ಸಮೀಕ್ಷಾ ವರದಿ ಪ್ರಕಾರ ಧೂಮಪಾನ ಅಭ್ಯಾಸ ಒಳ್ಳೆಯದ್ದಲ್ಲ; ಅದು ಮಾರಕ ಎಂದು ತಿಳಿಯ ಹೇಳಿದರೂ ಹೆಚ್ಚು ಹೆಚ್ಚು ಮಂದಿ ಅದಕ್ಕೆ ದಾಸರಾಗಿದ್ದಾರೆ. ಇತ್ತೀಚೆಗೆ ಒಟ್ಟು 1.1 ಶತಕೋಟಿ ಮಂದಿ ಧೂಮಪಾನ ಮಾಡುತ್ತಿದ್ದಾರೆ.

ಆಯಾ ಸರ್ಕಾರಗಳು ಯುವಜನತೆ ಧೂಮಪಾನ ಮಾಡುವ ಅಭ್ಯಾಸಕ್ಕೆ ಕಡಿವಾಣ ಹಾಕುವಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಏಕೆಂದರೆ 25 ವರ್ಷದೊಳಗೆಯೇ ಯುವಜನತೆ ಸಿಗರೇಟ್​ ಸೇದುವುದನ್ನು ಹೊಸದಾಗಿ ಕಲಿಯುತ್ತಿದ್ದಾರೆ. ಆದರೆ ಆ ವಯಸ್ಸು ದಾಟಿದ ಮೇಲೆ ಹೊಸದಾಗಿ ಸಿಗರೇಟ್​ ಸೇದುವ ಅಭ್ಯಾಸ ಮಾಡಿಕೊಳ್ಳುವುದು ಕಡಿಮೆಯೇ ಎನ್ನುತ್ತಿದೆ ಆ ವರದಿ. ಒಮ್ಮೆ ಕಲಿತ ಚಟ ಬಿಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಸರ್ಕಾರಗಳು ಈ ಯುವಜನತೆ ಮೇಲೆ ಕಣ್ಣಿಟ್ಟು, ಅವರನ್ನು ಧೂಮಪಾನ ಅಭ್ಯಾಸದಿಂದ ದೂರವಿಡುವಂತಹ ಕಠಿಣಾತಿಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ವರದಿ ಸಲಹೆ ನೀಡಿದೆ.

ಚೈನಾದಲ್ಲಿ ಚೈನ್​ ಸ್ಮೋಕರ್ಸ್​!

20 ದೇಶಗಳಲ್ಲಿ ಪುರುಷರು ಧೂಮಪಾನ ಅಭ್ಯಾಸ ಮಾಡಿಕೊಳ್ಳುವುದು ಜಾಸ್ತಿಯಾಗಿದ್ದರೆ 12 ದೇಶಗಳಲ್ಲಿ ಮಹಿಳೆಯರು ಧೂಮಪಾನಕ್ಕೆ ಶರಣಾಗುತ್ತಿದ್ದಾರೆ. ವಿಶ್ವದ ಶೇ. 70 ರಷ್ಟು ಸ್ಮೋಕರ್ಸ್​ ಈ 10 ದಶಗಳಲ್ಲಿದ್ದಾರೆ: ಚೀನಾ, ಭಾರತ, ಇಂಡೋನೇಷ್ಯಾ, ಅಮೆರಿಕಾ, ರಷ್ಯಾ, ಬಾಂಗ್ಲಾದೇಶ, ಜಪಾನ್, ಟರ್ಕಿ, ವಿಯೆಟ್ನಾಂ ಮತ್ತು ಫಿಲಿಫೈನ್ಸ್​ನಲ್ಲಿ ಅತ್ಯಧಿಕ ಧೂಮಪಾನಿಗಳಿದ್ದಾರೆ. ಕೊನೆಯ ಮಾತು… ಚೀನಾದಲ್ಲಿ ಮೂವರ ಪೈಕಿ ಒಬ್ಬರು (341 ದಶಲಕ್ಷ ಮಂದಿ) ಧೂಮಪಾನಕ್ಕೆ ದಾಸರಾಗಿದ್ದಾರೆ.

(Record number of smokers China highest habits picked up by young people alarming)

ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಜಾಮೀನು ಸಿಕ್ಕರೂ ಪರಪ್ಪನ ಅಗ್ರಹಾರದ ಕಡೆಗೆ ವಿನಯ್, ರಜತ್
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಕೊಲೆಗೆ ಸುಪಾರಿ ಮತ್ತು ಹನಿ ಟ್ರ್ಯಾಪ್-ಎರಡೂ ಭಿನ್ನ ಪ್ರಕರಣಗಳು: ರಾಜೇಂದ್ರ
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
ಯತ್ನಾಳ್ ಸಾಹೇಬರು ಇಲ್ಲಾಂದ್ರೆ ನಾವೂ ಪಕ್ಷದಲ್ಲಿಲ್ಲ: ಪದಾಧಿಕಾರಿಗಳು
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ
Instant Karma: ನಾಯಿಗೆ ಒದೆಯಲು ಹೋಗಿ ಹೇಗ್ ಬಿದ್ದಾ ನೋಡಿ