ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಗುರಿ ತಲುಪಿರುವುದಾಗಿ ಘೋಷಿಸಿಕೊಂಡ ಹೌತಿ ಉಗ್ರರು

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ದಂಗೆಕೋರರು ಇಂದು ಮುಂಜಾನೆ ಸೌದಿ ಅರೇಬಿಯಾದ ಅತ್ಯಂತ ಪ್ರಮುಖ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ತಮ್ಮ ಕ್ಷಿಪಣಿಯು ನಿಖರವಾಗಿ ಗುರಿಯನ್ನು ತಲುಪಿದೆ ಎಂದು ಹೌತಿ ಪಡೆಗಳು ಪ್ರತಿಪಾದಿಸಿವೆ. ಈ ಭೀಕರ ದಾಳಿಯಿಂದಾಗಿ ರಿಯಾಧ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ದಾಳಿಯ ತಕ್ಷಣವೇ ವಿಮಾನ ನಿಲ್ದಾಣದ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ರನ್-ವೇ ಕಾರ್ಯಾಚರಣೆ ಹಾಗೂ ವಿಮಾನಗಳ ಆಗಮನ-ನಿರ್ಗಮನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.

ರಿಯಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಗುರಿ ತಲುಪಿರುವುದಾಗಿ ಘೋಷಿಸಿಕೊಂಡ ಹೌತಿ ಉಗ್ರರು
ರಿಯಾದ್ ಮೇಲೆ ಹೌತಿಗಳ ಕ್ಷಿಪಣಿ ದಾಳಿ
Image Credit source: X

Updated on: Oct 08, 2026 | 6:52 PM

ರಿಯಾದ್, ಅಕ್ಟೋಬರ್ 8: ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ದಂಗೆಕೋರರು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಇಂದು (ಅಕ್ಟೋಬರ್ 8) ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯ ರಭಸಕ್ಕೆ ರಿಯಾದ್ ವಿಮಾನ ನಿಲ್ದಾಣದ ಸುತ್ತಮುತ್ತ ಭಾರಿ ಸ್ಪೋಟದ ಸದ್ದು ಕೇಳಿಬಂದಿದ್ದು, ನಿಂತಿದ್ದ ವಿಮಾನವೊಂದರಿಂದ ದಟ್ಟ ಹೊಗೆ ಏಳುತ್ತಿರುವುದು ಕಂಡುಬಂದಿದೆ. ಈ ದಾಳಿಯ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಯೆಮೆನ್‌ನಿಂದ ಉಡಾಯಿಸಲಾದ ಬ್ಯಾಲಿಸ್ಟಿಕ್ ಕ್ಷಿಪಣಿಯು ರಿಯಾಧ್ ವಿಮಾನ ನಿಲ್ದಾಣದ ಆವರಣಕ್ಕೆ ನೇರವಾಗಿ ಅಪ್ಪಳಿಸಿದ್ದು, ನಿಗದಿತ ಮಿಲಿಟರಿ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಹೌತಿ ವಕ್ತಾರರು ತಿಳಿಸಿದ್ದಾರೆ.

ಯೆಮೆನ್‌ನ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರದ ಪರವಾಗಿ ಸೌದಿ ಅರೇಬಿಯಾ ಬೆಂಬಲ ನೀಡಿದ ಬೆನ್ನಲ್ಲೇ, ಇರಾನ್ ಬೆಂಬಲಿತ ಹೌತಿ ದಂಗೆಕೋರ ಪಡೆಗಳು ಸೌದಿ ನಗರಗಳು ಹಾಗೂ ಪ್ರಮುಖ ಮೂಲಸೌಕರ್ಯಗಳ ಮೇಲಿನ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ. ರಿಯಾದ್ ವಿಮಾನ ನಿಲ್ದಾಣದ ಮೇಲಿನ ಹೊಸ ದಾಳಿಯ ಕುರಿತು ಸೌದಿ ಸರ್ಕಾರ ತಕ್ಷಣವೇ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲವಾದರೂ, ರಿಯಾದ್ ನಗರವನ್ನು ಗುರಿಯಾಗಿಸಿಕೊಂಡು ಉಡಾಯಿಸಲಾಗಿದ್ದ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತನ್ನ ವೈಮಾನಿಕ ರಕ್ಷಣಾ ಪಡೆಗಳು ಆಕಾಶದಲ್ಲೇ ಹೊಡೆದು ಧ್ವಂಸಗೊಳಿಸಿವೆ.

ಇದನ್ನೂ ಓದಿ: ಅಮೆರಿಕ ಸಂಸತ್‌ನಲ್ಲಿ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್‌ಗೆ ಗೌರವ; ವಿಮಾನ ಹೈಜಾಕ್ ಯತ್ನ ಖಂಡಿಸಿ ನಿರ್ಣಯ ಮಂಡನೆ

ವಿಮಾನದಿಂದ ಹೊಗೆ:

ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ರಿಯಾದ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಖಾಲಿ ವಿಮಾನವೊಂದರಿಂದ ದಟ್ಟವಾದ ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು ಕಂಡುಬಂದಿದೆ. ಜಾಗತಿಕ ವಿಮಾನ ಟ್ರ್ಯಾಕಿಂಗ್ ಸಂಸ್ಥೆ ‘ಫ್ರಂಟ್‌ರೈಡರ್ 24’ ನೀಡಿದ ಮಾಹಿತಿಯಂತೆ, ರಿಯಾದ್ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಯಾವುದೇ ವಿಮಾನಗಳು ಲ್ಯಾಂಡ್ ಆಗಿಲ್ಲ. ಯಾವುದೇ ವಿಮಾನಗಳು ಟೇಕ್-ಆಫ್ ಆಗಿಲ್ಲ.


ಸೌದಿ ವಾಯುಪ್ರದೇಶ ಬಂದ್ ಮಾಡುವುದಾಗಿ ಬೆದರಿಕೆ:

ರಿಯಾದ್ ವಿಮಾನ ನಿಲ್ದಾಣದ ಮೇಲೆ ತಾವೇ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಘೋಷಿಸಿಕೊಂಡಿರುವ ಹೌತಿ ದಂಗೆಕೋರ ಪಡೆಗಳು, ಸೌದಿ ಅರೇಬಿಯಾದ ಇಡೀ ವಾಯುಪ್ರದೇಶವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ಮತ್ತೊಮ್ಮೆ ಬಹಿರಂಗ ಬೆದರಿಕೆ ಹಾಕಿವೆ. ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ವರ್ಷಗಳಿಂದ ಶಮನಗೊಂಡಿದ್ದ ಯೆಮೆನ್ ಅಂತರ್ಯುದ್ಧ ಮತ್ತೆ ಭುಗಿಲೆದ್ದಿದ್ದು ಪ್ರಾದೇಶಿಕ ಭದ್ರತೆಗೆ ಭಾರಿ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: ‘ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಒಪ್ಪಲಾಗದು’; ಸೌದಿ ವಿಮಾನ ನಿಲ್ದಾಣಗಳ ಮೇಲಿನ ಹೌತಿ ದಾಳಿಗೆ ಭಾರತ ಖಂಡನೆ

ವಿಮಾನಯಾನ ಭದ್ರತೆಗೆ ಭೀತಿ: ಯೆಮೆನ್ ಗಡಿ ದಾಟಿ ಸಂಘರ್ಷ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಾಂತ್ಯದ ವಾಣಿಜ್ಯ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೌತಿ ಪಡೆಗಳು ಎಚ್ಚರಿಕೆ ನೀಡಿದ್ದು, ನಾಗರಿಕ ವಿಮಾನಯಾನದ ಭದ್ರತೆ ಕುರಿತು ಜಾಗತಿಕವಾಗಿ ತೀವ್ರ ಆತಂಕ ವ್ಯಕ್ತವಾಗಿದೆ.

ರಿಯಾದ್ ಹಾಗೂ ಸೌದಿಯ ನೈಋತ್ಯ ಭಾಗದಲ್ಲಿರುವ ಅಭಾ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಈ ವಾರ ನಡೆದ ದಾಳಿಗಳಲ್ಲಿ ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಸೌದಿ ಸಚಿವಾಲಯ ಬುಧವಾರ ಪ್ರಕಟಿಸಿದ ಬೆನ್ನಲ್ಲೇ ಈ ಹೊಸ ದಾಳಿ ಸಂಭವಿಸಿದೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us